https://youtube.com/shorts/fUqc-HD4bis?si=bKRSAy1oCQfSiqys
Subscribe ನ್ಯೂಸಿಕ್ಸ್ ಕನ್ನಡ
newsics.com
9 ಕಾಡಾನೆ ಹಿಂಡಿನ ದಾಳಿಗೆ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರದ ಗಡಿ ಗ್ರಾಮವಾದ ತಮಿಳುನಾಡಿನ ಕರಳವಾಡಿಯಲ್ಲಿ ನಡೆದಿದೆ.
ಕಳೆದ ಹಲವು ತಿಂಗಳಿಂದ ಆನೆಗಳ ಹಾವಳಿಯಿಂದ ತೊಂದರೆಗೊಳಗಾದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಸತ್ಯಮಂಗಲ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ರೈತ ಮಹೇಶ್, ಜಮೀನಿನಲ್ಲಿ ಕಾವಲು ಕಾಯುತ್ತಿದ್ದರು. ಈ ವೇಳೆ 9 ಕಾಡಾನೆಗಳ ಹಿಂಡು ದಾಳಿ ಮಾಡಿವೆ. ಈ ವೇಳೆ ಅಕ್ಕ, ಪಕ್ಕದ ಜಮೀನಿನವರು ಎಷ್ಟೇ ಕೂಗಾಡಿದರೂ ಕಾಡಾನೆ ಹಿಂಡು ಬಿಟ್ಟಿಲ್ಲ. ಗಜಪಡೆಯ ಅಟ್ಟಹಾಸಕ್ಕೆ ಮಹೇಶ್ ಬಲಿಯಾಗಿದ್ದಾರೆ. ಕಳೆದ ಮೂರ್‍ನಾಲ್ಕು ತಿಂಗಳಿಂದಲೂ ಕಾಡಾನೆಗಳ ಹಿಂಡು ಓಡಾಟ ಮಾಡುತ್ತಿವೆ. ಸದ್ಯ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ ಮಾಡಿದ್ದಾರೆ.