https://youtube.com/shorts/2Z4I0oFUbOQ?si=E_8G5fLxr2N6s9QC
Subscribe ನ್ಯೂಸಿಕ್ಸ್ ಕನ್ನಡ
newsics.com
ಮಹಿಳೆಯೊಬ್ಬಳು ಗಂಡನನನ್ನುಹಾಸಿಗೆಗೆ ತಳ್ಳಿ ಮೇಲೆ ಮಾರಣಾಂತಿಕವಾಗಿ ದೈಹಿಕ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಗಂಡನನ್ನು ಹಾಸಿಗೆ ಮೇಲೆ ಕಡೆವಿದ ಹೆಂಡತಿ ಆತನ ಮೇಲೆ ಹೆಮ್ಮಾರಿಯಂತೆ ಕುಳಿತಿದ್ದು, ನಂತರ ಆತನ ಕೆನ್ನೆಗೆ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ. ತನ್ನ ಎರಡು ಕೈಗಳನ್ನು ಬಳಸಿಕೊಂಡು ಆಕೆ ಅತನ ಎರಡು ಕೆನ್ನೆಗಳಿಗೆ ಏಕಕಾಲಕ್ಕೆ ಬಾರಿಸಿದ್ದು, ಒಂದು ಸಮಯದಲ್ಲಂತೂ ಆತ ಪ್ರಜ್ಞೆ ಕಳೆದುಕೊಂಡಂತೆ ಕಾಣುತ್ತಾನೆ.
ದುರಾದೃಷ್ಟವಶಾತ್ ಇಲ್ಲಿ ಮಹಿಳೆ ಭೀಕರವಾಗಿ ಹಲ್ಲೆ ಮಾಡಿದರು ಆತನ ಸಹಾಯಕ್ಕೆ ಯಾರೂ ಬಂದಿಲ್ಲ, ಮಹಿಳೆಯೊಬ್ಬರು ಮೊದಲಿಗೆ ಆಕೆಯನ್ನು ಬಿಡಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಅದರೆ ಉಗ್ರ ಸ್ವರೂಪಿಯಾದ ಆಕೆಯ ಅವತಾರ ನೋಡಿ ಅವರು ಅಲ್ಲಿಂದ ಸೀದಾ ಹೋಗಿದ್ದಾರೆ. ನಂತರ ಒಬ್ಬರು ಪುರುಷ ಮಗುವನ್ನು ಎತ್ತಿಕೊಂಡು ಅಲ್ಲಿಗೆ ಬಂದಿದ್ದು, ಅವರು ಕೂಡ ಈ ಹಲ್ಲೆಯನ್ನು ಮೂಕ ಪ್ರೇಕ್ಷಕರಂತೆ ನೋಡಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಆ ವ್ಯಕ್ತಿ ತಾನು ದೀರ್ಘಕಾಲದಿಂದ ಅನುಭವಿಸಿಕೊಂಡು ಬಂದಂತಹ ದೈಹಿಕ ಮತ್ತು ಭಾವನಾತ್ಮಕ ದೌರ್ಜನ್ಯದಿಂದ ಬೇಸತ್ತು ಕಡೆಗೂ ಈ ವೀಡಿಯೋವನ್ನು ರೆಕಾರ್ಡ್ ಮಾಡುವುದಕ್ಕೆ ಮುಂದಾದರು. ತನಗೆ ಹೆಂಡತಿ ಬೆದರಿಕೆ ಹಾಕುತ್ತಾಳೆ, ತಾನು ಮಾತನಾಡಿದರೆ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಅವಳು ಹೆದರಿಸುತ್ತಾಳೆ ಎಂದು ಆತ ಹೇಳಿದ್ದಾಗಿ ವರದಿಯಾಗಿದೆ.
https://www.newsics.com/2026/02/04/did-roy-decide-to-die-at-3-am-what-is-the-secret-behind-75/