https://youtube.com/shorts/2Z4I0oFUbOQ?si=3TVP6JJnLqArfw9_
Subscribe ನ್ಯೂಸಿಕ್ಸ್ ಕನ್ನಡ
newsics.com
ಬಂಗಾರ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಇದೆ. ನೀವು ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ಆತುರಪಡಬೇಡಿ… ಬದಲಿಗೆ ಕೇಂದ್ರ ಬಜೆಟ್ 2026-27ರ ಬಳಿಕ ಚಿನ್ನ ಖರೀದಿಗಾಗಿ ಪ್ಲಾನ್ ಮಾಡಿ. ಏಕೆಂದರೆ ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ದಿನೇ ದಿನೇ ಹೊಸ ದಾಖಲೆ ಬರೆಯುತ್ತಿರುವ ಚಿನ್ನದ ದರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದ್ದು ಇದರಿಂದ ಜನಸಾಮಾನ್ಯರಿಗೆ ಚಿನ್ನ ಕೈಗೆಟುಕುವ ಬೆಲೆಯಲ್ಲಿ ಸಿಗುವಂತಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರು ಬಂಗಾರದ ಆಭರಣಗಳು ಹಾಗೂ ಇತರೆ ವಸ್ತುಗಳನ್ನು ತರಲು ಸಂಬಂಧಿಸಿದ ಕಸ್ಟಮ್ಸ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಯಾಗಿವೆ. ಅದರಂತೆ, ಹೊಸ ನಿಯಮಗಳನ್ನು ತಿಳಿದುಕೊಳ್ಳುವುದರಿಂದ ಏರ್‌ಪೋರ್ಟ್‌ನಲ್ಲಿ ಅನಗತ್ಯ ತೊಂದರೆಗಳು ತಪ್ಪಿ, ನಿಮ್ಮ ಪ್ರಯಾಣ ಸುಗಮವಾಗುತ್ತದೆ. ಹಾಗಾದ್ರೆ ಆ ನಿಯಮಗಳೇನು ಗೊತ್ತಾ?
ಮನಿ ಕಂಟ್ರೋಲ್ ವರದಿ ಮಾಡಿರುವಂತೆ, ಕೇಂದ್ರ ಹಣಕಾಸು ಸಚಿವಾಲಯವು 2016ರ ಬ್ಯಾಗೇಜ್ ನಿಯಮಗಳ ಬದಲಾಗಿ ಕಸ್ಟಮ್ಸ್ ಬ್ಯಾಗೇಜ್ ಡಿಕ್ಲರೇಶನ್ ಅಂಡ್ ಪ್ರೊಸೆಸಿಂಗ್ ರೆಗ್ಯುಲೇಷನ್ಸ್ 2026 ಅನ್ನು ಜಾರಿಗೊಳಿಸಿದೆ. ಈ ನಿಯಮಗಳು 2026 ಫೆಬ್ರವರಿ 2ರಿಂದ ಸಂಪೂರ್ಣವಾಗಿ ಅನ್ವಯವಾಗುತ್ತಿದೆ
ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸಿರುವ ಭಾರತೀಯರು ಅಥವಾ ಭಾರತೀಯ ಮೂಲದ ಪ್ರವಾಸಿಗರಿಗೆ ಡ್ಯೂಟಿ ಫ್ರೀ ಅಂದರೆ ತೆರಿಗೆ ರಹಿತವಾಗಿ ಆಭರಣ ತರಲು ಸರ್ಕಾರ ನಿಗದಿತ ಮಿತಿಯನ್ನು ಘೋಷಿಸಿದೆ. ಇದು ಮಹಿಳಾ ಪ್ರಯಾಣಿಕರು ಗರಿಷ್ಠ 40 ಗ್ರಾಂ ತೂಕದ ಆಭರಣಗಳನ್ನು, ಪುರುಷ ಪ್ರಯಾಣಿಕರು 20 ಗ್ರಾಂವರೆಗೆ ಆಭರಣಗಳನ್ನು ಯಾವುದೇ ಕಸ್ಟಮ್ಸ್ ಶುಲ್ಕವಿಲ್ಲದೆ ತರಬಹುದು. ಈ ನಿಯಮದಲ್ಲಿ ಕೇವಲ ಆಭರಣ ಎಂದು ಮಾತ್ರ ಉಲ್ಲೇಖಿಸಲಾಗಿದೆ, ಆದ್ದರಿಂದ ಅದು ಬಂಗಾರವಾಗಿರಲಿ ಅಥವಾ ಬೆಳ್ಳಿಯಾಗಿರಲಿ ಎರಡಕ್ಕೂ ಅನ್ವಯವಾಗುತ್ತದೆ.
ಈಗ ಹೊಸ ವ್ಯವಸ್ಥೆಯಲ್ಲಿ ಮೌಲ್ಯದ ಬದಲಿಗೆ ತೂಕದ ಆಧಾರದಲ್ಲಿ ಮಿತಿ ನಿಗದಿಯಾಗಿದೆ. ಇದರೊಂದಿಗೆ, ಪ್ರತಿಯೊಬ್ಬ ಪ್ರಯಾಣಿಕರು ಇಂಡಿಯನ್ ಕಸ್ಟಮ್ಸ್ ಡಿಕ್ಲರೇಶನ್ ಫಾರ್ಮ್ ತುಂಬಿ ತಮ್ಮ ಬಳಿ ಇರುವ ಆಭರಣ ಹಾಗೂ ಇತರೆ ವಸ್ತುಗಳ ಸಂಪೂರ್ಣ ವಿವರವನ್ನು ನೀಡುವುದು ಕಡ್ಡಾಯವಾಗಿದೆ.
ನಿಗದಿತ ಮಿತಿಗಿಂತ ಹೆಚ್ಚು ತೂಕದ ಆಭರಣಗಳನ್ನು ತರಲು ಬಯಸಿದರೆ, ಹೊಸದಾಗಿ ಖರೀದಿಸಿದವು ಹಾಗೂ ವೈಯಕ್ತಿಕವಾಗಿ ಬಳಸಿದ ಹಳೆಯ ಆಭರಣಗಳನ್ನು ಪ್ರತ್ಯೇಕವಾಗಿ ವಿವರಿಸಬೇಕು. ಜೊತೆಗೆ ಲಗೇಜ್‌ನಲ್ಲಿ ಇರುವ ಒಟ್ಟು ಆಭರಣಗಳ ತೂಕವನ್ನೂ ಸ್ಪಷ್ಟವಾಗಿ ಘೋಷಿಸಬೇಕು. ಹಾಗಾಗಿ, ಫೈನಾನ್ಸ್ ಬಿಲ್ 2026 ಮೂಲಕ ಈ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲಿ ಎದುರಾಗುವ ಗೊಂದಲಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.ಇತರ ವಸ್ತುಗಳ ಡ್ಯೂಟಿ ಫ್ರೀ ಮಿತಿ
ಭಾರತೀಯ ನಿವಾಸಿಗಳು/ಭಾರತೀಯ ಮೂಲದ ಪ್ರವಾಸಿಗರು: ₹75,000 ಮೌಲ್ಯದ ವಸ್ತುಗಳು ಡ್ಯೂಟಿ ಫ್ರೀ.
ವಿದೇಶಿ ಪ್ರವಾಸಿಗರು: ₹25,000 ಮೌಲ್ಯದ ವಸ್ತುಗಳು ಡ್ಯೂಟಿ ಫ್ರೀ.
ಮದ್ಯ: ಗರಿಷ್ಠ 2 ಲೀಟರ್ ವೈನ್/ಲಿಕರ್.
ಸಿಗರೇಟ್: 100, ಸಿಗಾರ್: 25 ಅಥವಾ 125 ಗ್ರಾಂ ತಂಬಾಕು.
18 ವರ್ಷ ಮೇಲ್ಪಟ್ಟವರು: ಒಂದು ಹೊಸ ಲ್ಯಾಪ್‌ಟಾಪ್/ನೋಟ್‌ಪ್ಯಾಡ್ ಡ್ಯೂಟಿ ಫ್ರೀ.
ನಿಷೇಧಿತ ವಸ್ತುಗಳು ನಕಲಿ ಭಾರತೀಯ ಕರೆನ್ಸಿ, ಮಾದಕ ವಸ್ತುಗಳು, ಬೌದ್ಧಿಕ ಹಕ್ಕು ಉಲ್ಲಂಘಿಸುವ ವಸ್ತುಗಳು, ವನ್ಯಜೀವಿ ಉತ್ಪನ್ನಗಳು, ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸುವ ವಸ್ತುಗಳು ಮತ್ತು ಕೆಲವು ಪ್ರಾಣಿ/ಪಕ್ಷಿ ಉತ್ಪನ್ನಗಳನ್ನು ತರಲು ಸಂಪೂರ್ಣ ನಿಷೇಧವಿದೆ. ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಎದುರಾಗುತ್ತದೆ.
ಹೊಸ ನಿಯಮಗಳ ಉದ್ದೇಶ ಪ್ರಯಾಣಿಕರಿಗೆ ಸ್ಪಷ್ಟತೆ ನೀಡುವುದು, ಏರ್‌ಪೋರ್ಟ್‌ನಲ್ಲಿ ಅನಗತ್ಯ ತೊಂದರೆಗಳನ್ನು ಕಡಿಮೆ ಮಾಡುವುದು ಮತ್ತು ಕಸ್ಟಮ್ಸ್ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ. ದುಬೈನಿಂದ ಅಥವಾ ಇತರ ದೇಶಗಳಿಂದ ಬರುವವರು ಈ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಂಡರೆ ಚಿನ್ನದ ಆಭರಣಗಳನ್ನು ಸುಲಭವಾಗಿ ತರಬಹುದು.
https://www.newsics.com/2026/02/04/icc-warns-pcb-against-playing-against-team-india/