Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅರೆಸ್ಟ್
ಕರ್ನಾಟಕಪ್ರಮುಖ

ಅನೈತಿಕ ಸಂಬಂಧದ ಗಲಾಟೆಯಲ್ಲಿ ಓರ್ವನ ಹತ್ಯೆ : ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅರೆಸ್ಟ್

Share
2 Min Read
SHARE

https://youtube.com/shorts/2Z4I0oFUbOQ?si=GQh11tLqq7tz2UFd

Subscribe ನ್ಯೂಸಿಕ್ಸ್ ಕನ್ನಡ

newsics.com

ಕಾರವಾರ: ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿದೆ.

ಹಲ್ಲೆಗೊಳಗಾಗಿದ್ದ ಮೂವರ ಪೈಕಿ ಓರ್ವ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ವಸಂತ್ ಮೃತ ದುರ್ದೈವಿ. ಕೃತ್ಯವೆಸಗಿ ಪರಾರಿಯಾಗುತ್ತಿದ್ದ ಖ್ಯಾತ ಜೋತಿಷಿ ಕಮಲಾಕರ ಭಟ್ ಸೇರಿದಂತೆ 7 ಜನರನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆ ಬಳಿಕ ಸಿದ್ದಾಪುರದಿಂದ ಕಮಲಾಕರ್ ಭಟ್ ಹಾಗೂ ಸುಚಿತ್ರ ಎಸ್ಕೇಪ್ ಆಗುತ್ತಿದ್ದರು. ಈ ವೇಳೆ ಪೊಲೀಸರು ಕಮಲಾಕರ್ ಭಟ್, ಸುಚಿತ್ರಾ ಹಾಗೂ ಸುಚಿತ್ರಾ ತಂದೆ ಲೋಕನಾಥ್ ಸೇರಿದಂತೆ 7 ಜನರನ್ನು ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಮೂವರು ಹಾಗೂ ಸಿದ್ದಾಪುರದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಚಿತ್ರಾ ಪತಿ ಮಹೇಶ್ ನಾಯ್ಕ್ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆಗಾಗ ಊರಾದ ಸಿದ್ದಾಪುರಕ್ಕೆ ಬರುತ್ತಿದ್ದರು. ಪತ್ನಿ ಸುಚಿತ್ರಾ ಹಾಗೂ ಇಬ್ಬರು ಹೆಣ್ಣುಮಕ್ಕಳು ಸುಚಿತ್ರಾ ಜೊತೆ ಸಿದ್ದಾಪುರದಲ್ಲಿ ವಾಸವಾಗಿದ್ದರು. ಸುಚಿತ್ರಾಳಿಗೆ ಇತ್ತೀಚೆಗೆ ಜ್ಯೋತಿಷಿ ಕಮಲಾಕರ್ ಭಟ್ ಪರಿಚಯವಾಗಿದೆ. ಜೋತಿಷ್ಯ ಹೇಳುತ್ತಿದ್ದ ಕಮಲಾಕರ್ ಭಟ್ ಆಗಾಗ ಸುಚಿತ್ರಾ ಮನೆಗೆ ಬರುತ್ತಿದ್ದವನು ಆಗಾಗ ಅಲ್ಲಿಯೇ ಇರುತ್ತಿದ್ದ. ಇದು ಸುಚಿತ್ರಾಳ ಮಕ್ಕಳಿಗೆ ಇಷ್ಟವಾಗುತ್ತಿರಲಿಲ್ಲ.
ಅಲ್ಲದೇ ತಾಯಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ನಡುವೆ ಸಲುಗೆ ಇರುವ ವಿಚಾರ ಹಿರಿಯ ಮಗಳಿಗೆ ಗೊತ್ತಾಗಿದೆ. ಇದರಿಂದ ತಾಯಿ ವರ್ತನೆಯನ್ನು ಮಗಳು ಪ್ರಶ್ನಿಸಿದ್ದಳು. ಇದೇ ವಿಚಾರವಾಗಿ ಕೋಪಗೊಂಡಿದ್ದ ತಾಯಿ ಸುಚಿತ್ರಾ ಮಗಳಿಗೆ ಹಿಂಸಿಸುತ್ತಿದ್ದಳು. ಕಮಲಾಕರ್ ಭಟ್ ಹಾಗೂ ತಾಯಿ ಸುಚಿತ್ರಾಳ ಹುಚ್ಚಾಟದಿಂದ ಬೇಸತ್ತಿದ್ದ ಮಗಳು ಬೆಂಗಳೂರಿನಲ್ಲಿದ್ದ ತಂದೆಗೆ ವಿಚಾರ ಹೇಳಿದ್ದಳು. ಅಲ್ಲದೇ ತನಗೂ ತನ್ನ ಸಹೋದರಿಗೂ ತುಂಬಾ ಕಷ್ಟವಾಗುತ್ತಿದೆ. ನಮಗೆ ಈ ಮನೆಯಲ್ಲಿ ಇರಲು ಸಾಧ್ಯವಿಲ್ಲ, ತಾಯಿ ಸುಚಿತ್ರಾಳಿಂದ ನಮ್ಮನ್ನು ರಕ್ಷಿಸುವಂತೆ ತಂದೆಗೆ ಮೆಸೇಜ್ ಕಳುಹಿಸಿದ್ದಳು.
ಮಗಳ ಮೆಸೇಜ್ ನೋಡಿ ಊರಿಗೆ ದೌಡಾಯಿಸಿದ್ದ ಮಹೇಶ್ ನಾಯ್ಕ್, ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಗಳನ್ನು ಭೇಟಿಯಾಗಿ ವಿಷಯ ತಿಳಿದುಕೊಂಡಿದ್ದ. ತಾಯಿ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಅನೈತಿಕ ಸಂಬಂಧವಿರುವ ಬಗ್ಗೆ ಹಾಗೂ ಮಕ್ಕಳಿಬ್ಬರಿಗೂ ಅವರು ಹಿಂಸಿಸುತ್ತಿರುವ ಬಗ್ಗೆ ತಿಳಿದು ಆಘಾತಗೊಂಡಿದ್ದ ಮಹೇಶ್ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದ.
ಪೊಲೀಸ್ ಠಾಣೆಯಿಂದ ವಾಪಸ್ ಆಗಿದ್ದ ಮಹೇಶ್, ಸಹೋದರ ವಸಂತ್ ಮನೆಗೆ ಹೋಗಿದ್ದ. ಪೊಲೀಸರಿಗೆ ದೂರು ನೀಡಿದ್ದ ವಿಷಯ ತಿಳಿದ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಹಾಗೂ ಆಕೆಯ ತಂದೆ ಲೋಕನಾಥ್ ಹಾಗೂ ಇತರರು ವಸಂತ್ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಮಹೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ವಸಂತ್ ತಪ್ಪಿಸಲು ಮುಂದಾಗಿದ್ದ ವೇಳೆ ವಸಂತ್ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅನೈತಿಕ ಸಂಬಂಧ, ಕೊಲೆ ಪ್ರಕರಣ ಸಂಬಂಧ ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಕಮಲಾಕರ್ ಭಟ್ ಸೇರಿ 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Gold gets cheaper ಸುಧಾರಿಸಿದ ಭಾರತ ಅಮೆರಿಕ ಸಂಬಂಧ: ಷೇರು‌ ಮಾರುಕಟ್ಟೆ ಹೊಸ ಹುಮ್ಮಸ್ಸು, ಚಿನ್ನ ಮತ್ತಷ್ಟು ಅಗ್ಗ

TAGGED:One killed in an immoral relationship dispute: Famous astrologer Kamalakar Bhat arrested
Share This Article
Facebook Twitter Copy Link Print
Previous Article ಹೆಂಡತಿ ಜತೆ ಅನೈತಿಕ ಸಂಬಂಧ ಶಂಕೆ: ಮದ್ಯ ಕುಡಿಸಿ ಸ್ನೇಹಿತನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಗಂಡ
Next Article ಐಷಾರಾಮಿ ಜೀವನ, ಉದ್ಯಮ ನಷ್ಟದಿಂದ ಆಘಾತಗೊಂಡಿದ್ರಾ ಸಿಜೆ ರಾಯ್?

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?