Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Gold gets cheaper ಸುಧಾರಿಸಿದ ಭಾರತ ಅಮೆರಿಕ ಸಂಬಂಧ: ಷೇರು‌ ಮಾರುಕಟ್ಟೆ ಹೊಸ ಹುಮ್ಮಸ್ಸು, ಚಿನ್ನ ಮತ್ತಷ್ಟು ಅಗ್ಗ
ಕರ್ನಾಟಕದೇಶಪ್ರಮುಖ

Gold gets cheaper ಸುಧಾರಿಸಿದ ಭಾರತ ಅಮೆರಿಕ ಸಂಬಂಧ: ಷೇರು‌ ಮಾರುಕಟ್ಟೆ ಹೊಸ ಹುಮ್ಮಸ್ಸು, ಚಿನ್ನ ಮತ್ತಷ್ಟು ಅಗ್ಗ

Share
2 Min Read
SHARE

https://youtube.com/shorts/2Z4I0oFUbOQ?si=E_8G5fLxr2N6s9QC

Subscribe ನ್ಯೂಸಿಕ್ಸ್ ಕನ್ನಡ

newsics.com

ಭಾರತ ಹಾಗೂ ಅಮೆರಿಕದ ನಡುವೆ ಆರ್ಥಿಕ ಸಂಬಂಧ ಸುಧಾರಿಸುತ್ತಿರುವ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ.

ಭಾರತದ ಮೇಲೆ ವಿಧಿಸಲಾಗಿದ್ದ ಆಮದು ಸುಂಕದ ಪ್ರಮಾಣವನ್ನು ಶೇ25 ರಿಂದ ಶೇ18 ಇಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಚಿನ್ನದ ಬೆಲೆ ಇಳಿಕೆಯಾಗಿದೆ ಹಾಗೂ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ.

ಭಾರತ – ಅಮೆರಿಕ ವ್ಯಾಪಾರ ಒಪ್ಪಂದದ ನಂತರ ಷೇರು ಮಾರುಕಟ್ಟೆ ಭಾರೀ ಚೇತರಿಸಿಕೊಂಡಿದೆ. ಕೇಂದ್ರ ಬಜೆಟ್ ಮಂಡನೆಯಾದ ಫೆಬ್ರವರಿ 1ರಂದು ಷೇರುಮಾರುಕಟ್ಟೆಯು ಭಾರೀ ಕುಸಿತ ಕಂಡಿತ್ತು. ಇದಾದ ಬೆನ್ನಲ್ಲೇ ಫೆಬ್ರವರಿ ಎರಡರಂದು ನಡೆದಿರುವ ಬೆಳವಣಿಗೆಯು ಆರ್ಥಿಕ ಚೇತರಿಕೆಗೆ ಹಾದಿಯಾಗಿದೆ.

ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ವಿರೋಧಿಸಿ, ಭಾರತದ ಮೇಲೆ ಅಮೆರಿಕ ಭಾರೀ ಸುಂಕವನ್ನು ವಿಧಿಸಿತ್ತು. ಭಾರತವು ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಂತೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಮೋದಿಗೆ ಕರೆ ಮಾಡಿ, ಸುಂಕ ಇಳಿಸುವ ವಿಷಯವನ್ನು ಖಚಿತಪಡಿಸಿದ್ದಾರೆ.

ಮಂಗಳವಾರ – ಫೆಬ್ರವರಿ 3ರಂದು ಭಾರತೀಯ ಷೇರು ಮಾರುಕಟ್ಟೆ ಚೇತರಿಸಿಕೊಂಡಿದ್ದು ಶುಭಾರಂಭ ಮಾಡಿದೆ. ಇದರಿಂದ ಚಿನ್ನದ ಬೆಲೆಯಲ್ಲೂ ಇಳಿಕೆಯಾಗುತ್ತಿದೆ. ಬಿಎಸ್‌ಇ ದಿನದ ವಹಿವಾಟು ಪಾಸಿಟಿವ್‌ನಿಂದ ಕೂಡಿದೆ. ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಹಾದಿಯಲ್ಲಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.

ಇದಕ್ಕೆ ಮುಖ್ಯ ಕಾರಣ ಭಾರತ ಮತ್ತು ಅಮೆರಿಕದ ನಡುವೆ ನಡೆದಿರುವ ಮಾತುಕತೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದುಬಾರಿ ಸುಂಕವನ್ನು ವಿಧಿಸಿದ್ದರು. ಈಚೆಗೆ ಭಾರತವು ಇನ್ಮುಂದೆ ಇರಾನ್ ಬದಲು ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿ ಮಾಡಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದರು.
ಭಾರತ ಮತ್ತು ಅಮೆರಿಕದ ನಡುವೆ ಉತ್ತಮ ಮಾತುಕತೆ ನಡೆಯುತ್ತಿರುವುದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ.

ಸೆನ್ಸೆಕ್ಸ್ ಪ್ರಿ ಓಪನ್‌ನಲ್ಲಿ 3,600 ಪಾಯಿಂಟ್ಸ್ ಹೆಚ್ಚಾದ್ದು, ನಿಫ್ಟಿ 50 ಸೂಚ್ಯಂಕವು 1200ಕ್ಕೂ ಹೆಚ್ಚು ಪಾಯಿಂಟ್ಸ್‌ಗಳ ಏರಿಕೆ ಕಂಡಿದೆ. ಇದು ಹೂಡಿಕೆದಾರರಲ್ಲಿ ಮುಖದಲ್ಲಿ ನಗು ಮೂಡಿಸಿದೆ.

ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯು ಭಾರೀ ಏರಿಳಿತ ಕಂಡಿತ್ತು. ಅಲ್ಲದೇ ಚಿನ್ನ ಮತ್ತು ಬೆಳ್ಳಿ ಬೆಲೆಯು ಏಕಾಏಕಿ ಭಾರೀ ಹೆಚ್ಚಳವಾಗುವುದು ಹಾಗೂ ಒಂದೇ ದಿನದಲ್ಲಿ ಭಾರೀ ಕುಸಿತವನ್ನೂ ಕಂಡಿತ್ತು.
ಷೇರು ಮಾರುಕಟ್ಟೆ ಪ್ರಾರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 3,648 ಪಾಯಿಂಟ್ಸ್ ಏರಿಕೆ ಆಗಿದ್ದು. ಇದು ಶೇ.4.47ರಷ್ಟು ಏರಿಕೆ ಆಗಿದೆ. 85,314 ಮಾರ್ಕ್‌ ತಲುಪಿದ್ದು, ನಿಫ್ಟಿ50 ಸೂಚ್ಯಂಕವು 1,220 ಪಾಯಿಂಟ್ಸ್ ಏರಿಕೆ ಕಂಡಿದೆ. ಇದು ಶೇ. 4.86ರಷ್ಟು ಜಿಗಿತ ಆಗಿರುವುದು ವಿಶೇಷವಾಗಿದೆ. ಇನ್ನು ನಿಫ್ಟಿಯು ಬರೋಬ್ಬರಿ 26,038 ಮಾರ್ಕ್‌ ಮುಟ್ಟಿದೆ.

Meaningless discussion on social media ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರು ತಯಾರಿಸಿದ ಹಪ್ಪಳದ ಸದ್ದು! ಏನಿದು ಭಯಂಕರ ಚರ್ಚೆ?

ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ? ಈ ಸಮಸ್ಯೆ ಕಾಡಬಹುದು ಎಚ್ಚರಿಕೆ

TAGGED:gold gets cheaperImproved India-US relations: Stock market gets new impetus
Share This Article
Facebook Twitter Copy Link Print
Previous Article 16 ಬಾರಿ ಮಚ್ಚಿನಿಂದ ಕೊಚ್ಚಿ ಕೊಂದು, ಶವದ ಮೇಲೆ ಕಾಲಿಟ್ಟು ಪೋಸ್ ಕೊಟ್ಟ ಹಂತಕ
Next Article ಹೆಂಡತಿ ಜತೆ ಅನೈತಿಕ ಸಂಬಂಧ ಶಂಕೆ: ಮದ್ಯ ಕುಡಿಸಿ ಸ್ನೇಹಿತನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಗಂಡ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?