Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು; ಸಿಜೆ ರಾಯ್ ನೆನೆದು ಹನುಮಂತ ಭಾವುಕ
ಕರ್ನಾಟಕಪ್ರಮುಖಮನರಂಜನೆ

ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು; ಸಿಜೆ ರಾಯ್ ನೆನೆದು ಹನುಮಂತ ಭಾವುಕ

Share
2 Min Read
SHARE

https://youtube.com/shorts/kIkAyfI4sxw?si=aggVueBL3fodeELS

Subscribe ನ್ಯೂಸಿಕ್ಸ್ ಕನ್ನಡ

newsics.com

ನಿನ್ನೆ ರಿಯಲ್ ಎಸ್ಟೇಟ್ ಕಂಪನಿಯಾದ ‘ಕಾನ್ಫಿಡೆಂಟ್ ಗ್ರೂಪ್’ ಮುಖ್ಯಸ್ಥ ಸಿ.ಜೆ.ರಾಯ್ (57) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ರಾಯ್ ನಿಧನದ ಬೆನ್ನಲ್ಲೆ ಬಿಗ್‌ಬಾಸ್‌ ಸೀಸನ್ 11ರ ವಿಜೇತ ಹನುಮಂತ ಅವರು ಭಾವುಕರಾಗಿದ್ದಾರೆ.
ರಾಯ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಹನುಮಂತ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ‘ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ ಸರ್‌’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಹನುಮಂತ ಪೋಸ್ಟ್‌ನಲ್ಲಿ ಏನಿದೆ?
‘ತುಂಬಾ ದುಃಖಕರ ಸಂಗತಿ. ಅಂದು ಸರಿಗಮಪ ಸೀಸನ್ 15ರಲ್ಲಿ ನಾನು ರನ್ನರ್‌ ಅಪ್‌ ಆಗಿದ್ದಾಗ ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್‌ಬಾಸ್ ಸೀಸನ್ 11ರಲ್ಲೂ ಕೂಡ ವಿಜೇತನಾಗಿದ್ದಾಗ ನನಗೆ ಪ್ರೀತಿಯಿಂದ ಹಣವನ್ನು ಕೊಡುವುದರ ಮೂಲಕ ಗೆಲುವನ್ನು ಸಂಭ್ರಮಿಸಿದವರು ನೀವು. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ ಸರ್. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್‌’ ಎಂದು ಬರೆದುಕೊಂಡಿದ್ದಾರೆ.
ಸಿ.ಜೆ. ರಾಯ್ ಅವರು ಸರಿಗಮಪ ಸೀಸನ್ 15ರಲ್ಲಿ ಹನುಮಂತು ರನ್ನರ್ ಅಪ್ ಆಗಿದ್ದಾಗ ಬಹುಮಾನದ ರೂಪದಲ್ಲಿ ಹಣ ನೀಡಿದ್ದರು. ಬಳಿಕ ಬಿಗ್‌ಬಾಸ್ ಸೀಸನ್ 11ರಲ್ಲಿಯೂ ಹನುಮಂತ ಗೆದ್ದಾಗ ಅವರೇ ಖುದ್ದು ಹಣವನ್ನು ನೀಡಿದ್ದರು. ಈ ಬಗ್ಗೆ ಹನುಮಂತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‌

https://www.instagram.com/p/DFVFTKvTX2V/?img_index=2&igsh=MXJveHRmbGx3NmdlaQ==

ಕೇರಳದ ರಾಯ್ ಅವರು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್, ರೆಸಾರ್ಟ್, ಹೋಟೆಲ್, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ಕೇರಳದಲ್ಲೂ ಹಲವು ಉದ್ಯಮಗಳನ್ನು ನಡೆಸುತ್ತಿದ್ದರು. ‘ಕಾನ್ಫಿಡೆಂಟ್ ಗ್ರೂಪ್’ ಕಚೇರಿ ಸೇರಿದಂತೆ ರಾಯ್ ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಪರಿಶೀಲನೆ ನಡೆಸಿದ್ದರು. ಶುಕ್ರವಾರ ಬೆಳಿಗ್ಗೆಯಿಂದಲೂ ಅವರ ಕಚೇರಿಯಲ್ಲಿ ದಾಖಲೆಗಳ ಪರಿಶೀಲನಾ ಕಾರ್ಯದಲ್ಲಿ ಕೇರಳದ ಐ.ಟಿ ಅಧಿಕಾರಿಗಳು ತೊಡಗಿದ್ದರು. ಆದಾಯ ತೆರಿಗೆ ಇಲಾಖೆಯ (ಐಟಿ) ಅಧಿಕಾರಿಗಳು ಕಚೇರಿಯಲ್ಲಿ ಇರುವ ಸಂದರ್ಭದಲ್ಲಿಯೇ ಶುಕ್ರವಾರ ಮಧ್ಯಾಹ್ನ 3.15ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.

Tumkur PSI arrested ಲಂಚ ಸ್ವೀಕಾರ: ಲೋಕಾ ದಾಳಿ, ತುಮಕೂರು ಪಿಎಸ್‌ಐ ಬಂಧನ

TAGGED:You were the guiding light of my life; Hanuman Bhavuka remembers CJ Roy
Share This Article
Facebook Twitter Copy Link Print
Previous Article Tumkur PSI arrested ಲಂಚ ಸ್ವೀಕಾರ: ಲೋಕಾ ದಾಳಿ, ತುಮಕೂರು ಪಿಎಸ್‌ಐ ಬಂಧನ
Next Article ಕನಕಪುರದ ಹುಡುಗನನ್ನು ಮದ್ವೆಯಾಗ್ತೇನೆಂದ ಡಿಂಪಲ್ ಕ್ವೀನ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ಪ್ರಮುಖCrimeಕರ್ನಾಟಕ

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?