https://youtube.com/shorts/2dkIPQOWaBI?si=GkWw0mOFioiEV5DD
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ನಟಿ ಕಾವ್ಯಾ ಗೌಡ ಹಾಗೂ ಆಕೆಯ ಪತಿ ಸೋಮಶೇಖರ್ ಮೇಲೆ ಪತಿ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಗಾಯಾಳುಗಳಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಟಿ ಕಾವ್ಯಾ ಗೌಡ ಜನಪ್ರಿಯತೆಯನ್ನು ಸಹಿಸದೇ ಈ ಹಲ್ಲೆ ಮಾಡಲಾಗಿದೆಯಂತೆ. ಕಾವ್ಯ ಗೌಡ ಅಕ್ಕ ಭವ್ಯ ಗೌಡ ಅವರಿಂದಲೇ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮಶೇಖರ್ ಅತ್ತಿಗೆಯ ತಂದೆ ರವಿಕುಮಾರ್ ವಿರುದ್ಧ ರೇ*ಪ್ ಮಾಡ್ತೇನೆ ಎಂದು ಬೆದರಿಕೆ ಹಾಕಲಾಗಿದೆಯಂತೆ. ನಂದಿಶ್, ಪ್ರಿಯಾ, ರವಿಕುಮಾರ್ ಎನ್ನುವವರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಕಾವ್ಯಾ ಗೌಡ ಹಾಗೂ ಅವರ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾವ್ಯಾ ಗೌಡ ಪತಿ ಸೋಮಶೇಖರ್ ಹಾಗೂ ನಂದೀಶ್ ಇಬ್ಬರೂ ಸಹೋದರರು ಎಂದು ತಿಳಿದುಬಂದಿದೆ. ಸೋಮಶೇಖರ್ ದಂಪತಿ ಹಾಗೂ ನಂದೀಶ್ ದಂಪತಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಇಬ್ಬರ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕೂ ಜಗಳ, ಕಿರಿಕಿರಿಯಾಗುತ್ತಿತ್ತು ಎಂದು ತಿಳಿದುಬಂದಿದೆ. ಇದೀಗ ಜಗಳ ವಿಕೋಪಕ್ಕೆ ಹೋಗಿದ್ದು, ಕಾವ್ಯಾ ಗೌಡ ಹಾಗೂ ಆಕೆಯ ಪತಿ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ಹೋಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
https://www.newsics.com/2026/01/27/wife-demands-money-to-have-physical-relations-with-husband/