https://youtube.com/shorts/yWrDals90_k?si=qTyTxtvMLgrsr7gN
Subscribe ನ್ಯೂಸಿಕ್ಸ್ ಕನ್ನಡ
newsics.com
ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ನಟ ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಆಗಮಿಸಿದ್ದರು, ಜೊತೆಗೆ ಅವರ ತಾಯಿಯನ್ನು ಚಾನೆಲ್‌ನವರು ಈ ಕಾರ್ಯಕ್ರಮಕ್ಕೆ ಕರೆಸಿದ್ದರು. ಕಾರ್ಯಕ್ರಮದಲ್ಲಿ ನಿರೂಪಕಿ, ರಾಜ್ ಬಳಿ ಅವರ ತಾಯಿ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ ಬಿ ಶೆಟ್ಟಿ, ಚಿಕ್ಕವನಿದಾಗ ನಾನು ಹೇಗೆ ಇದ್ದೆ ಅಂದ್ರೆ, ಇವನೊಬ್ಬ ಮನುಷ್ಯನಾದ್ರೆ ಸಾಕು ಎಂಬ ಆಸೆ ನನ್ನ ಅಮ್ಮನಿಗೆ ಇತ್ತು. ಎಷ್ಟೋ ವರ್ಷಗಳ ಕಾಲ ನಾನು ನನ್ನ ತಾಯಿ ದುಡಿದ ದುಡಿಮೆಯಲ್ಲೇ ಜೀವನ ಮಾಡಿದ್ದೇನೆ. ಹೀಗಾಗಿ ಅವರಿಂದಾಗಿ ನಾನು, ನಾನಿವತ್ತು ಏನು ಆಗಿದ್ದೇನೋ ಅದರ ಒಳ್ಳೆಯತನ ನಿಮಗೆ ಹೋಗುತ್ತೆ, ಕೆಟ್ಟತನ ನನಗೆ ಉಳಿಯುತ್ತೆ ಎಂದು ರಾಜ್ ಬಿ ಶೆಟ್ಟಿ ಅವರು ತಾವು ಮೊದಲು ಹೇಗಿದೆ ಎಂಬುದನ್ನು ಭಾವುಕನಾಗಿ ಹೇಳಿದ್ದಾರೆ.