Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್‌ಬಾಸ್‌ಗೆ ಹೋಗುವ ಪ್ರತಿಯೊಬ್ಬ ಸ್ಪರ್ಧಿಯೂ ಬಟ್ಟೆ ಹಾಗೂ ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಲು ಸಾಕಷ್ಟು ಖರ್ಚು ಮಾಡುತ್ತಾರೆ. ಅದೇ ರೀತಿ ಬಿಗ್ ಬಾಸ್ ಸೀಸನ್ 12ರ 4ನೇ ರನ್ನರ್ ಅಪ್ ಕಾವ್ಯ ಶೈವ ಅವರು ಕೂಡ ಒಂದಿಷ್ಟು ಶಾಪಿಂಗ್ ಮಾಡಿದ್ದು, ಎಷ್ಟು ಖರ್ಚು ಮಾಡಿದ್ದಾರೆ ಎಂದು ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್‌ಗೆ ಹೋಗಲು ತುಂಬಾ ಖರ್ಚು ಮಾಡಿಲ್ಲ. ಕೆಲವೊಂದಿಷ್ಟು ಬಟ್ಟೆಗಳನ್ನು ತೆಗೆದುಕೊಂಡಿದ್ದೇನೆ. ಎಷ್ಟು ಖರ್ಚು ಮಾಡಿದ್ದೇನೆ ಎಂದು ಹೇಳಲು ಇಷ್ಟಪಡಲ್ಲ ಎಂದು ಹೇಳಿದ್ದಾರೆ.ವೀಕೆಂಡ್ ಕಾರ್ಯಕ್ರಮಕ್ಕೆ ಅವರೇ ಬಟ್ಟೆಗಳನ್ನು ಕಳುಹಿಸಿಕೊಡುತ್ತಿದ್ದರು. ಅದು ಬಿಟ್ಟರೆ ಪ್ರತಿನಿತ್ಯ ಹಾಕುವ ಬಟ್ಟೆಗಳಿಗೆ ಖರ್ಚು ಮಾಡಿದ್ದೀನಿ. ನಾನು ಜಾಸ್ತಿ ಸೀರೆ ಹಾಕಲು ಇಷ್ಟಪಡುತ್ತೇನೆ. ಬಿಗ್‌ಬಾಸ್ ಮನೆಯಲ್ಲಿ ನಮ್ಮ ಮನೆಯಲ್ಲಿ ಇರೋ ಹಾಗೇ ಇರೋಣ ಅಂತ ಕುರ್ತಾ ಟಾಪ್‌ಗಳನ್ನು ತೆಗೆದುಕೊಂಡು ಹೋಗಿದ್ದೆ. ಮನೆಯಿಂದ ಹೆಚ್ಚಾಗಿ ಸೀರೆಗಳನ್ನೇ ಕಳುಹಿಸಿಕೊಡುತ್ತಿದ್ದರು. ಆದ್ದರಿಂದ ಹೆಚ್ಚು ಸೀರೆಗಳನ್ನೇ ಹಾಕುತ್ತಿದ್ದೆ ಎಂದಿದ್ದಾರೆ ಕಾವ್ಯ.
ಇನ್ನು ಬಿಗ್‌ಬಾಸ್‌ಗೂ ಮುನ್ನ ಸಂದರ್ಶನವೊಂದರಲ್ಲಿ ಕಾವ್ಯಾ ಅವರು ತಾವು ಬಿಗ್‌ಬಾಸ್‌ಗೆ ಹೋಗೋದಿಲ್ಲ ಎಂದಿದ್ದರು. ಆದರೆ, ಕೊನೆಗೆ ಮನಸ್ಸು ಬದಲಿಸಿ ದೊಡ್ಮನೆಗೆ ಹೋಗಿದ್ದರು. ಅದಕ್ಕೆ ನಗುತ್ತಲೇ ಉತ್ತರಿಸಿದ ಆಕೆ, ನಾನು ಹೋಗಲ್ಲ ಅಂತ ಬಹುಶಃ ಒಂದೇ ಚಾನೆಲ್‌ಗೆ ಹೇಳಿದ್ದೆ. ಆದರೆ ಆಮೇಲೆ ಒಂದು ಚಾಲೆಂಜ್ ಆಗಿ ತಗೊಂಡು ಹೋದೆ. ಈಗ ಟಾಪ್ 6 ತಲುಪಿ ಬಂದಿರೋದು ನನಗೇ ದೊಡ್ಡ ಸರ್ಪ್ರೈಸ್ ಆಗಿದೆ. ಆ ನಿರ್ಧಾರದ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.