Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಹಾಗೂ ಗಿಲ್ಲಿ ನಡುವಿನ ವಾಗ್ಯುದ್ಧ, ಜಗಳ, ಫೈಟಿಂಗ್‌ಗಳನ್ನು ನೀವು ನೋಡಿಯೇ ಇರುತ್ತೀರಿ. ಇದೀಗ ಮನೆ ಹೊರಗೂ ಈ ಜಗಳ ಮುಂದುವರೆದಿದೆ. ಬಿಗ್‌ಬಾಸ್ ಕನ್ನಡ ಸೀಸನ್ 12 ಮುಗಿದ ಮೇಲೆ ವಿನ್ನರ್ ಗಿಲ್ಲಿ ನಟ ತಮ್ಮ ಊರಲ್ಲಿ ರ್ಯಾಲಿ ನಡೆಸಿದ್ದಾರೆ. ಗಿಲ್ಲಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ಇದೀಗ ಅಶ್ವಿನಿ ಗೌಡ ಮತ್ತು ಧ್ರುವಂತ್ ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕವೂ ಗಿಲ್ಲಿ ವಿರುದ್ಧ ಆರೋಪ ಮುಂದುವರೆಸಿದ್ದಾರೆ.
ಬಿಗ್‌ಬಾಸ್ ಮುಗಿಯುತ್ತಿದ್ದಂತೆ ಅಶ್ವಿನಿ ಗೌಡ, ‘ಸರಿಯಾದ ವ್ಯಕ್ತಿಗೆ ಗೆಲುವು ಸಿಕ್ಕಿದೆ’ ಎಂದು ಹೇಳಿದ್ದವರು ಈಗ ಮಾತು ಬದಲಾಯಿಸಿದ್ದಾರೆ. ‘ಬಡವರ ಮಕ್ಕಳು ಬೆಳೆಯಬೇಕು ಎಂದು ಡಾಲಿ ಧನಂಜಯ್ ಹೇಳಿದ್ದಾರೆ. ಅದು ನಿಜಕ್ಕೂ ಸತ್ಯ. ಬಡವರ ಮಕ್ಕಳು ಬೆಳೆಯಬೇಕು. ಆದರೆ, ಬಡವರ ಮಕ್ಕಳ ರೀತಿ ನಾಟಕ ಆಡುವವರು ಗೆದ್ದರೆ? ಅದು ಸರಿ ಅಲ್ಲ ಎಂದು ನನಗೆ ಅನಿಸುತ್ತದೆ’ ಎಂದು ಗಿಲ್ಲಿಗೆ ದಕ್ಕಿದ ವಿಜಯದ ಬಗ್ಗೆ ಮಾತನಾಡಿದ್ದಾರೆ.
ಇನ್ನು ಇದೇ ವಿಚಾರದ ಬಗ್ಗೆ ಮಾತನಾಡಿರುವ ಬಿಗ್‌ಬಾಸ್ 12 ಸ್ಪರ್ಧಿ ಧ್ರುವಂತ್, ಗಿಲ್ಲಿ ಎಲ್ಲಿಯೂ ತಾನು ಬಡವ ಎಂದು ಹೇಳಿಕೊಂಡಿಲ್ಲ. ಆದರೆ, ತೋರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ನಾನು ಬರೀ ಬನಿಯನ್, ಚಡ್ಡಿ ಹಾಕೊಂಡು ಇದ್ರೆ ನೀವೇನು ಶ್ರೀಮಂತ ಅಂತೀರಾ? ಗಿಲ್ಲಿ ಬಳಿ ಎಂಜಿ ಹೆಕ್ಟರ್ ಗಾಡಿ ಇದೆ. ಹೊಸ ಗಾಡಿಗೆ 24 ಲಕ್ಷ ಮೇಲೆ ಇದೆ. ಸೆಕೆಂಡ್ ಹ್ಯಾಂಡ್ ಗಾಡಿ ಅಂದೇ ತಿಳಿದುಕೊಳ್ಳೋಣ 14 ಲಕ್ಷ ಇರಬಹುದು. ಅದರಲ್ಲಿ ಓಡಾಡ್ತಾರೆ ಆತ ಹೆಂಗೆ ಬಡವ ಆಗ್ತಾನೆ. ಒಂದು ಎತ್ತು ಇಟ್ಕೊಂಡು, ಹೊಲ ಕೂಡ ಇಲ್ಲ. ಬೇರೆಯವರ ಹೊಲದಲ್ಲಿ ದುಡಿಮೆ ಮಾಡ್ತಾರೆ. ಪ್ರತಿ ದಿನ ಕೂಲಿ ಬಂದರೆ ಅವರಿಗೆ ಊಟ. ನಮ್ಮ ಮನೆಯಲ್ಲೂ ಚಿಕ್ಕ ತೋಟ ಇದೆ. ಅಲ್ಲಿ ಕೆಲಸಕ್ಕೆ ಬರ್ತಾರೆ ಅವರು. ಅವರಿಗೆ ಒಂದು ಮನೆಗೆ ಕೂಡ ಇಷ್ಟ ಇದೆ. ಬದುಕು ಕಟ್ಟಿಕೊಳ್ಳೋಕೆ ಊರಿಂದ ಊರಿಗೆ ವಲಸೆ ಬರ್ತಾರೆ. ಇವರು ಬಡವರು. ಮಕ್ಕಳಿಗೆ ಶಿಕ್ಷಣ ಕೊಡೋಕೆ ಆಗಲ್ಲ. ಮಕ್ಕಳನ್ನೂ ಕೆಲಸಕ್ಕೆ ಕಳಿಸ್ತಾ ಇರ್ತಾರೆ ಅವರು ಬಡವರು ಎಂದು ಧ್ರುವಂತ್ ಹೇಳಿದ್ದಾರೆ.