Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಬೆಂಗಳೂರಲ್ಲಿ ಇಂದಿನಿಂದ (ಜನವರಿ 16) ಕಾರ್ಯಾರಾಂಭ ಆರಂಭಿಸಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದ ಜಾಗದಲ್ಲೇ ಇದು ತಲೆ ಎತ್ತಿದೆ. ಬೆಂಗಳೂರಿನ ಗಾಂಧಿ ನಗರದಲ್ಲಿರುವ ಕಪಾಲಿ ಮಾಲ್ನಲ್ಲಿ ಈ ಮಲ್ಟಿಪ್ಲೆಕ್ಸ್ ಇದೆ. 9 ಪರದೆಗಳನ್ನು ಇದು ಹೊಂದಿದೆ.ಈ ಚಿತ್ರಮಂದಿರ ಸಾಕಷ್ಟು ಅದ್ದೂರಿಯಾಗಿದೆ. ಥಿಯೇಟರ್ನ ಝಲಕ್ ಇಲ್ಲಿದೆ.
ಸ್ಕ್ರೀನ್ 6 ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ.
ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇದೆ. ಅದರಲ್ಲೂ ಮುಖ್ಯವಾಗಿ ಹೈದ್ರಾಬಾದ್ ಬಿರಿಯಾನಿ ಹಾಗೂ ತಿಂಡಿ-ತಿನಿಸುಗಳು ಇಲ್ಲಿ ಲಭ್ಯವಾಗಲಿದೆಯಂತೆ.