Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬಳೆ ಚೆನ್ನಾಗಿದೆ ಎಂದಿದ್ದಷ್ಟೇ, ಆಕೆ ಬಳೆಯನ್ನೇ ಬಿಚ್ಚಿಕೊಟ್ಟಳು! ಯುವತಿಯ ಔದಾರ್ಯಕ್ಕೆ ನೆಟ್ಟಿಗರು ಫುಲ್ ಖುಷ್
ದೇಶಪ್ರಮುಖವೈರಲ್

ಬಳೆ ಚೆನ್ನಾಗಿದೆ ಎಂದಿದ್ದಷ್ಟೇ, ಆಕೆ ಬಳೆಯನ್ನೇ ಬಿಚ್ಚಿಕೊಟ್ಟಳು! ಯುವತಿಯ ಔದಾರ್ಯಕ್ಕೆ ನೆಟ್ಟಿಗರು ಫುಲ್ ಖುಷ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ಈ ಘಟನೆ ಮಾತ್ರ ಮೆಟ್ರೋ ಪ್ರಯಾಣದ ಮತ್ತೊಂದು ಅಪರೂಪದ ಮತ್ತು ಮನಕಲಕುವ ಮುಖವನ್ನು ಪರಿಚಯಿಸಿದೆ.

ರಿತು ಜೂನ್ (Riru Joon) ಎಂಬುವರು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿರುವ ಈ ಸುಂದರ ಕಥೆ, ಈಗ ಇಂಟರ್ನೆಟ್ ಲೋಕದಲ್ಲಿ ಬಾರೀ ಸದ್ದು ಮಾಡುತ್ತಿದ್ದು, ಓದುಗರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ.

ರಿತು ಜೂನ್ ಅವರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಪಕ್ಕದಲ್ಲೇ ಕುಳಿತಿದ್ದ ಹುಡುಗಿಯ ಕೈಯಲ್ಲಿದ್ದ ಒಂದು ಗೋಲ್ಡನ್ ಬಳೆ ಅವರ ಕಣ್ಣಿಗೆ ಬಿತ್ತು. ಅದರ ವಿನ್ಯಾಸ ಎಷ್ಟು ಅದ್ಭುತ ಮತ್ತು ಆಕರ್ಷಕವಾಗಿತ್ತೆಂದರೆ, ರಿತು ಅವರಿಗೆ ಅದನ್ನು ನೋಡಿದ ತಕ್ಷಣ ತುಂಬಾ ಇಷ್ಟವಾಯಿತು.

ತಮಗೂ ಅಂತಹದ್ದೇ ಬಳೆಯನ್ನು ಮಾಡಿಸಿಕೊಳ್ಳಬೇಕು ಎಂಬ ಆಸೆಯಿಂದ ರಿತು ಅವರು, ಆ ಹುಡುಗಿಯನ್ನು ಬಹಳ ವಿನಯದಿಂದ ಮಾತನಾಡಿಸಿದರು. ನಿಮ್ಮ ಈ ಬಳೆಯ ಡಿಸೈನ್ ತುಂಬಾ ಚೆನ್ನಾಗಿದೆ ನನಗೂ ಇದೇ ರೀತಿ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ ನಾನು ಇದರ ಒಂದು ಫೋಟೋ ತೆಗೆದುಕೊಳ್ಳಬಹುದೇ? ಎಂದು ಮನವಿ ಮಾಡಿದರು.

ರಿತು ಅವರ ವಿನಂತಿಯನ್ನು ಕೇಳಿದ ಆ ಅಪರಿಚಿತ ಹುಡುಗಿ ತೋರಿದ ಪ್ರತಿಕ್ರಿಯೆ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಫೋಟೋ ತೆಗೆದುಕೊಳ್ಳಲು ಅನುಮತಿ ನೀಡುವ ಬದಲಿಗೆ, ಆಕೆ ತಕ್ಷಣವೇ ತನ್ನ ಕೈಯಲ್ಲಿದ್ದ ಬಳೆಯನ್ನು ಬಿಚ್ಚಿ ರಿತು ಅವರ ಕೈಗಿಟ್ಟಳು. ಕೇವಲ ಫೋಟೋಕ್ಕಿಂತ ಈ ಬಳೆಯೇ ನಿಮ್ಮ ಬಳಿ ಇರಲಿ, ಆಗ ಅಕ್ಕಸಾಲಿಗರಿಗೆ (Goldsmith) ಇದರ ಡಿಸೈನ್‌ನ್ನು ಸ್ಪಷ್ಟವಾಗಿ ತೋರಿಸಲು ನಿಮಗೆ ಸುಲಭವಾಗುತ್ತದೆ ಎಂದು ಆಕೆ ನಗುನಗುತ್ತಲೇ ಹೇಳಿದಳು.

ಅಪರಿಚಿತ ಹುಡುಗಿಯ ಈ ಔದಾರ್ಯ ಕಂಡು ರಿತು ಒಂದು ಕ್ಷಣ ಅವಾಕ್ಕಾದರು. ಆಗ ಆ ಯುವತಿ ಮೆಲ್ಲಗೆ ನಗುತ್ತಾ, ಹೆದರಬೇಡಿ, ಇದು ಅಸಲಿ ಚಿನ್ನವಲ್ಲ. ಕೇವಲ ಆರ್ಟಿಫಿಶಿಯಲ್ ಬಳೆ ಎಂದು ಅಸಲಿ ವಿಷಯ ಬಿಚ್ಚಿಟ್ಟಳು.

ಆ ಅಪರಿಚಿತ ಯುವತಿಯ ನಿಷ್ಕಲ್ಮಶ ಪ್ರೀತಿ ಮತ್ತು ದೊಡ್ಡ ಗುಣಕ್ಕೆ ಮನಸೋತ ರಿತು, ಆ ಬಳೆಯನ್ನು ಒಂದು ಸುಂದರ ನೆನಪಿನ ಕಾಣಿಕೆಯಾಗಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಮೆಟ್ರೋದ ಎಲ್ಲಾ ಕಥೆಗಳೂ ಕೆಟ್ಟದಾಗಿರುವುದಿಲ್ಲ. ಕೆಲವು ಕಥೆಗಳು ಹೀಗೆ ಮೌನವಾಗಿದ್ದರೂ ತುಂಬಾ ಸುಂದರವಾಗಿರುತ್ತವೆ ಎಂದು ಅವರು ತಮ್ಮ ಭಾವನೆ ಹಂಚಿಕೊಂಡಿದ್ದಾರೆ.

ಈ ಹೃದಯಸ್ಪರ್ಶಿ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ. ಅಪರಿಚಿತ ಹುಡುಗಿಯ ಈ ಸರಳ ಹಾಗೂ ಸುಂದರ ನಡೆಗೆ ಜನರು ಮೆಚ್ಚುಗೆಯ ಸುರಿಮಳೆಗರೆಯುತ್ತಿದ್ದಾರೆ.

ಇಂತಹ ಮುಕ್ತ ಮನಸ್ಸಿನ ದಯಾಳುಗಳನ್ನು ನೋಡುವುದೇ ಅಪರೂಪ. ಆಕೆ ನಿಜಕ್ಕೂ ಅಪರಂಜಿ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ಇಂತಹ ಸಣ್ಣ ಸಣ್ಣ ಮಾನವೀಯ ನಡೆಗಳು ಇಂದಿಗೂ ಜಗತ್ತಿನಲ್ಲಿ ಪ್ರೀತಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಹಲವರು ಶ್ಲಾಘಿಸಿದ್ದಾರೆ.

https://x.com/i/status/2010661548575101147

ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಲು ಕೇವಲ 7 ನಿಮಿಷ ಈ ರೀತಿ ಮಾಡಿ ಸಾಕು

TAGGED:Just saying that the bangle is goodshe untied the bangle! Netizens are full of happiness for the generosity of the young woman
Share This Article
Facebook Twitter Copy Link Print
Previous Article ಚಳಿಗಾಲದಲ್ಲಿ ದೇಹದಲ್ಲಿರುವ ಪ್ಲೇಟ್‌ಲೆಟ್‌ ಕಡಿಮೆಯಾಗುವುದಕ್ಕೆ ಕಾರಣವೇನು?
Next Article ಈ 4 ಮನೆಮದ್ದಿನಿಂದ ಕಪ್ಪಾದ ಬೆಳ್ಳಿ ಕಾಲುಂಗುರ-ಗೆಜ್ಜೆ ಫಳ ಫಳ ಹೊಳೆಯುತ್ತೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?