Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕನ್ನಡ ಹಾಗೂ ಕನ್ನಡಿಗರಿಗೆ ದಿನೇ ದಿನೇ ಗೌರವ ತಗ್ಗುತ್ತಿದೆ. ಬೇರೆ ರಾಜ್ಯಗಳಿಂದ ಬಂದು ಬದುಕು ಕಟ್ಟಿಕೊಂಡಿರುವ ಬಹುತೇಕ ಪರಭಾಷಿಕರಿಗೆ ಈ ನೆಲದ ಬಗ್ಗೆ ಗೌರವ ಇಲ್ಲ ಎನ್ನುವುದು ಹೊಸ ವಿಚಾರವೇನಲ್ಲ. ಇದಕ್ಕೆ ಈಗಾಗಲೇ ಹಲವು ನಿದರ್ಶನಗಳೂ ಇವೆ. ಈ ಚರ್ಚೆಗಳ ನಡುವೆ, ಬೆಂಗಳೂರಿನಿಂದ ನಾವೆಲ್ಲರೂ ಹೋದರೆ ಈ ನಗರ ಶೂನ್ಯವಾಗಲಿದೆ ಎಂದು ಕೇರಳ ಮೂಲದ ವ್ಯಕ್ತಿ ಮಾಡಿರುವ ಟ್ವೀಟ್ ಕನ್ನಡಿಗರಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಗ್ರೇಟರ್ ಕೇರಳ (Great Kerala – @GreatKerala1) ಎನ್ನುವ ಖಾತೆಯಿಂದ ನೀವು ಬೆಂಗಳೂರಿನಲ್ಲಿರುವ ಇತರ ಎಲ್ಲರನ್ನು / ಅನ್ಯರಾಜ್ಯದವರನ್ನು ಅವರವರ ರಾಜ್ಯಗಳಿಗೆ ಕಳುಹಿಸಿದರೆ, ಬೆಂಗಳೂರು ದೊಡ್ಡ ಶೂನ್ಯವಾಗಲಿದೆ. ಗಮನಿಸಿ ಬೆಂಗಳೂರಿನಲ್ಲಿ ಕೇವಲ 30% ಜನರು ಮಾತ್ರ ಕನ್ನಡಿಗರು ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಅಭಿಯಾನ ಶುರು ಮಾಡಿದ್ದಾರೆ.
ನೀವು ಶೂನ್ಯದ ನಂತರ ಕಸವನ್ನು ಸೇರಿಸಲು ಮರೆತಿದ್ದೀರಿ ಎಂದು ಕನ್ನಡಿಗ ಶಶಾಂಕ್ ವ್ಯಂಗ್ಯವಾಡಿದ್ದಾರೆ.
ಮನೋಜ್ ಎನ್ನುವವರು, ಸ್ಪಷ್ಟವಾಗಿ ಹೇಳಬೇಕೆಂದರೆ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಂಗಳೂರು ಮತ್ತು ಕರ್ನಾಟಕವನ್ನು ಅಭಿವೃದ್ಧಿ ಮಾಡಿದರು. ಭಾರತವನ್ನು ಆಧುನೀಕರಿಸಿದರು. ಬೆಂಗಳೂರಿನಲ್ಲಿರುವ ಯಾವುದೇ ವಲಸಿಗರು ನಾವು ಬೆಂಗಳೂರು ನಿರ್ಮಿಸಿದ್ದೇವೆ ಎಂದು ಹೇಳುವ ಮೂಲಕ ಕೀರ್ತಿಯನ್ನು ಕುಂದಿಸಲು ಸಾಧ್ಯವಿಲ್ಲ, ನೀವು ಇಲ್ಲಿಗೆ ವಲಸೆ ಬಂದಿದ್ದು ಪ್ರಯೋಜನಗಳನ್ನು ಪಡೆಯಲು ಎಂದಿದ್ದಾರೆ.
ಮಲಯಾಳಿಗಳು ಬೆಂಗಳೂರು ಬಿಡಬೇಕು ಎನ್ನುವ ಟ್ವೀಟ್‌ಗೆ ಮಲಯಾಳಿಗಳು, ಗುಜರಾತಿಗಳು ಅಥವಾ ಮರಾಠಿಗರು ಭಾರತೀಯರಲ್ಲವೇ ಅಥವಾ ಅವರು ಶತ್ರುಗಳೇ.
ಬೆಂಗಳೂರಿನಲ್ಲಿರುವ ಕನ್ನಡಿಗರ ಜನಸಂಖ್ಯೆಯು 44% ಮತ್ತು 3.5% ಮಲಯಾಳಿಗಳು ಇಲ್ಲಿದ್ದಾರೆ. ಆ 3.5% ಜನ ಇಲ್ಲಿಂದ ಹೋದರೆ ಆರ್ಥಿಕವಾಗಿ ಅಥವಾ ಬೇರೆ ರೀತಿಯಲ್ಲಿ ಯಾವುದೇ ರೀತಿಯ “ಶೂನ್ಯ” ಕ್ಕೆ ಕಾರಣವಾಗುವುದಿಲ್ಲ ಎಂದು ರಾಮ ಕೆ.ಎಸ್ ಎನ್ನುವವರು ಹೇಳಿದ್ದಾರೆ.
https://x.com/GreatKerala1/status/2008987739086262670?s=20
https://www.newsics.com/2026/01/11/dysp-vaishnavi-seriously-injured-two-including-mother-die/