Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ನನಗೆ ಆಕೆಯೇ ಬೇಕು ಎಂದು ಎಲ್ಲರನ್ನೂ ಒಪ್ಪಿಸಿ ಮದುವೆ ಆದ. ಸಂಸಾರ ಚೆನ್ನಾಗಿಯೇ ಇತ್ತು. ಒಂದು ಹೆಣ್ಣು ಮಗು ಆದ ನಂತರ ಮತ್ತಷ್ಟು ಚೆನ್ನಾಗಿತ್ತು. ನಂತರ ಗಂಡು ಮಗು ಬೇಕು ಎಂಬ ನಿರೀಕ್ಷೆಯಲ್ಲಿದ್ದ ದಂಪತಿಗೆ ಮತ್ತೆ ಹೆಣ್ಣು ಮಗು ಜನನ ಆಯ್ತು. ಈ ಸಮಯದಲ್ಲಿ ಬೇಸರಗೊಂಡ ಪತಿರಾಯ ಮುಂದಿನ ಮಗು ಆದರೂ ಗಂಡು ಹುಟ್ಟಲಿ ಎಂದುಕೊಂಡಿದ್ದ. ಆದರೆ, ಆ ಮೂರನೇ ಮಗುವೂ ಹೆಣ್ಣಾಗಿದ್ದಕ್ಕೆ ಹಸುಗೂಸು ಹಾಗೂ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ದೂರು ದಾಖಲಾಗಿದೆ.
ಹರೀಶ್ ಎಂಬಾತ ಈಗ ತನ್ನ ಪ್ರೀತಿಯ ಪತ್ನಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ. ಈತ ರಾಜಸ್ಥಾನದವನಾಗಿದ್ದು, ಬೆಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದ. ಈ ಸಮಯದಲ್ಲಿ ವರಲಕ್ಷ್ಮೀ ಜತೆ ಪ್ರೇಮವಾಗಿದೆ. ನಂತರ ಎರಡೂ ಕುಟುಂಬದವರು ಒಪ್ಪಿ ಮದುವೆ ಮಾಡಿಸಿದ್ದಾರೆ. ಇವರ ಬಾಳಲ್ಲಿ ಸಮಸ್ಯೆ ಆಗಿದ್ದೇ ಈ ಮೂರು ಹೆಣ್ಣು ಮಕ್ಕಳು.
ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವರಲಕ್ಷ್ಮೀ , ನಮಗೆ ಮೂವರೂ ಹೆಣ್ಣು ಮಕ್ಕಳು ಎಂದು ಜರಿದು ನನ್ನನ್ನು ಬಿಟ್ಟು ಈಗ ಬೇರೆ ಯಾರೋ ಮಹಿಳೆ ಜತೆ ನನ್ನ ಗಂಡ ಜೀವನ ಮಾಡುತ್ತಿದ್ದಾನೆ. ನನಗೆ ಈಗ ಜೀವನ ತುಂಬಾ ಕಷ್ಟಕರವಾಗಿದೆ. ಮಕ್ಕಳನ್ನು ಓದಿಸಲು ಆಗುತ್ತಿಲ್ಲ, ಆರೈಕೆ ಸಹ ಮಾಡಲು ಆಗುತ್ತಿಲ್ಲ ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.
ವಿಷಯವೇನೆಂದರೆ ಈ ದೂರನ್ನು ಒಂದು ತಿಂಗಳ ಹಿಂದೆಯೇ ಈ ಮಹಿಳೆ ದಾಖಲು ಮಾಡಿದ್ದಾಳಂತೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದ್ದು, ಪೊಲೀಸರ ವಿರುದ್ಧ ಬೇಸರ ಹೊರಹಾಕಿದ್ದಾಳೆ. ಅಲ್ಲದೆ ಈ ಸಂಬಂಧ ಮಾಧ್ಯಮಗಳಿಗೆ ತನ್ನ ನೋವು ತೋಡಿಕೊಂಡಿದ್ದಾಳೆ.
Nicolas Maduro ಅಮೆರಿಕ ವಶದಲ್ಲಿದ್ದರೂ ವೆನೆಜುವೆಲಾ ಅಧ್ಯಕ್ಷ ಮಡುರೋಗೆ ಭಾರತೀಯ ಸಂತನದೇ ಸ್ಮರಣೆ! ಯಾರವರು?
ನಿಧಿಯಾಸೆಗೆ 8 ತಿಂಗಳ ಗಂಡು ಮಗು ಬಲಿ ಕೊಡಲು ಯತ್ನ, ಅಧಿಕಾರಿಗಳಿಂದ ರಕ್ಷಣೆ
ರಂಜಿತಾ ಸಹೋದರ- ಹಂತಕ ರಫೀಕ್ ಆಪ್ತರು: ಯಲ್ಲಾಪುರದಲ್ಲಿ ಉದ್ವಿಗ್ನ ಸ್ಥಿತಿ, ಎಲ್ಲೆಲ್ಲೂ ಪೊಲೀಸ್ ಬಂದೋಬಸ್ತ್