Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Nicolas Maduro ಅಮೆರಿಕ ವಶದಲ್ಲಿದ್ದರೂ ವೆನೆಜುವೆಲಾ ಅಧ್ಯಕ್ಷ ಮಡುರೋಗೆ ಭಾರತೀಯ ಸಂತನದೇ ಸ್ಮರಣೆ! ಯಾರವರು?
ದೇಶಪ್ರಮುಖವಿದೇಶ

Nicolas Maduro ಅಮೆರಿಕ ವಶದಲ್ಲಿದ್ದರೂ ವೆನೆಜುವೆಲಾ ಅಧ್ಯಕ್ಷ ಮಡುರೋಗೆ ಭಾರತೀಯ ಸಂತನದೇ ಸ್ಮರಣೆ! ಯಾರವರು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ವಾಷಿಂಗ್ಟನ್/ಕ್ಯಾರಕಾಸ್: ಶನಿವಾರ ಬೆಳಗ್ಗೆ ಅಮೆರಿಕದ ದಿಢೀರ್ ದಾಳಿಯಿಂದ ವೆನೆಜುವೆಲಾ ತತ್ತರಿಸಿದೆ. ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕ ಸೇನೆ ಒತ್ತೆಯಾಳಾಗಿರಿಸಿಕೊಂಡಿದ್ದು, ವಿಚಾರಣೆಗಾಗಿ ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.

ಮಾದಕವಸ್ತು ಕಳ್ಳಸಾಗಣೆ ಮತ್ತು ಅಪರಾಧಗಳ ಆರೋಪ ಎದುರಿಸುತ್ತಿರುವ ಮಡುರೊ ಅವರ ಜೀವನದ ಇನ್ನೊಂದು ಮಗ್ಗುಲು ಈಗ ಸಂಚಲನ ಮೂಡಿಸುತ್ತಿದೆ.
ನಿಕೋಲಸ್ ಮಡುರೊ ಅವರ ಜೀವನವು ಯಾವುದೇ ಚಲನಚಿತ್ರಕ್ಕೂ ಕಡಿಮೆ ಇಲ್ಲ. ಕ್ಯಾರಕಾಸ್‌ನ ಬೀದಿಗಳಲ್ಲಿ ಬಸ್ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿ, ಕಾಲಕ್ರಮೇಣ ವೆನೆಜುವೆಲಾದ ಸರ್ವೋಚ್ಚ ನಾಯಕನಾಗಿ ಬೆಳೆದ ಪರಿಯೇ ಅಚ್ಚರಿ ಮೂಡಿಸುವಂಥದ್ದು. ಇಂತಹ ಕ್ರಾಂತಿಕಾರಿ ನಾಯಕನ ಮೇಲೆ ಪ್ರಭಾವ ಬೀರಿದ್ದು ಮಾತ್ರ ಸೌಮ್ಯ ಸ್ವಭಾವದ ಒಬ್ಬ ಭಾರತೀಯ ಆಧ್ಯಾತ್ಮಿಕ ಗುರು ಎಂಬುದು ವಿಶೇಷ.


ಮಡುರೊ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಅವರ ಪರಮ ಅನುಯಾಯಿ. ಸುಮಾರು 20 ವರ್ಷಗಳ ಹಿಂದೆ ಮಡುರೊ ಅವರು ಪುಟ್ಟಪರ್ತಿಯ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ್ದರು. ಒಬ್ಬ ಸಾಮಾನ್ಯ ಭಕ್ತನಂತೆ ನೆಲದ ಮೇಲೆ ಕುಳಿತು ಸಾಯಿಬಾಬಾ ಅವರ ಪ್ರವಚನ ಆಲಿಸುತ್ತಿದ್ದ ಮಡುರೊ ಅವರ ಫೋಟೋ ಈಗಲೂ ಲಭ್ಯವಿದೆ. ಅವರ ಆಡಳಿತ ಕಚೇರಿಯಲ್ಲೂ ಸಾಯಿಬಾಬಾರ ಭಾವಚಿತ್ರಕ್ಕೆ ಅಗ್ರಸ್ಥಾನ ನೀಡಲಾಗಿದೆ.
ಸತ್ಯ ಸಾಯಿಬಾಬಾರ ಮೇಲಿನ ಭಕ್ತಿಯಿಂದ ಮಡುರೊ ಅವರು ಸಸ್ಯಾಹಾರಿ ಪದ್ಧತಿ ಅಳವಡಿಸಿಕೊಂಡಿದ್ದರು.

2011ರಲ್ಲಿ ಸಾಯಿಬಾಬಾ ನಿಧನರಾದಾಗ, ಇಡೀ ವೆನೆಜುವೆಲಾ ದೇಶದಲ್ಲಿ ಅಧಿಕೃತವಾಗಿ ‘ರಾಷ್ಟ್ರೀಯ ಶೋಕಾಚರಣೆ’ ಘೋಷಿಸುವ ಮೂಲಕ ಮಡುರೊ ತಮ್ಮ ಗುರುಭಕ್ತಿಯನ್ನು ಜಗತ್ತಿಗೆ ಸಾರಿದ್ದರು. ಇದು ಅಂದು ದೊಡ್ಡ ಸುದ್ದಿಯಾಗಿತ್ತು.
ತಮ್ಮ ಬಂಧನಕ್ಕೆ ಕೆಲವೇ ದಿನಗಳ ಮೊದಲು, ಅಂದರೆ ನವೆಂಬರ್ 23, 2025ರಂದು ಸಾಯಿಬಾಬಾ ಅವರ ಶತಮಾನೋತ್ಸವವನ್ನು ಮಡುರೊ ಅದ್ಧೂರಿಯಾಗಿ ಆಚರಿಸಿದ್ದರು. ಬಾಬಾ ಅವರನ್ನು ಬೆಳಕಿನ ಸಾಕಾರ ಎಂದು ಬಣ್ಣಿಸಿದ್ದ ಅವರು, ಗುರುಗಳ ಬುದ್ಧಿವಂತಿಕೆಯು ನಮಗೆ ಯಾವಾಗಲೂ ಜ್ಞಾನೋದಯ ನೀಡಲಿ ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದರು.

ಈಗ ಅಮೆರಿಕದ ಸೆರೆಯಲ್ಲಿದ್ದರೂ ಮಡುರೊ ಅವರ ಈ ಭಾರತೀಯ ಆಧ್ಯಾತ್ಮಿಕ ನಂಟಿನ ಕಥೆ ಈಗ ಜಾಗತಿಕವಾಗಿ ಚರ್ಚೆಯಾಗುತ್ತಿದೆ.

10 ದಿನ ಸಕ್ಕರೆ ಸೇವನೆ ಮಾಡದಿದ್ದರೆ ಏನಾಗುತ್ತದೆ?

TAGGED:Despite being under US custodyVenezuelan President Maduro is remembered by an Indian saint! Who is he?
Share This Article
Facebook Twitter Copy Link Print
Previous Article ನಿಧಿಯಾಸೆಗೆ 8 ತಿಂಗಳ ಗಂಡು ಮಗು ಬಲಿ ಕೊಡಲು ಯತ್ನ, ಅಧಿಕಾರಿಗಳಿಂದ ರಕ್ಷಣೆ
Next Article ಪ್ರೀತಿಸಿ‌ ಮದುವೆಯಾದ, ಮೂವರು ಹೆಣ್ಣು ಮಕ್ಕಳನ್ನೇ ಹೆತ್ತಿದ್ದಕ್ಕೆ ಬಿಟ್ಟುಹೋದ… ದೂರು ಕೊಟ್ಟರೂ ಪೊಲೀಸರ ದಿವ್ಯಮೌನ!

Popular Posts

C M Vijay Last Film Jananayagan Release ಬೆಂಗಳೂರಿನಲ್ಲೂ ‘ಜನ ನಾಯಕನ್’ ಜ್ವರ: ವಿಜಯ್ ಅವರ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

You Might Also Like

ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?