Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಾಜ್ಯ ಸರ್ಕಾರ ಹೊಸ ವರ್ಷದ ಹಿಂದಿನ ದಿನ ಡಿಸೆಂಬರ್ 31, 2025ರಂದು ಆಡಳಿತ ಯಂತ್ರಕ್ಕೆ ಮೇಜರಿ ಸರ್ಜರಿ ಮಾಡಿದೆ.
12 ಜಿಲ್ಲೆಗಳಿಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ.
ಹೊಸ ವರ್ಷದ ಹಿಂದಿನ ದಿನ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿರುವುದೇ ಇದೀಗ ಅಚ್ಚರಿಯ ವಿಚಾರವಾಗಿದೆ.
ಯಾವ ಜಿಲ್ಲೆಗೆ ಯಾರು?
* ಬೆಂಗಳೂರು ಗ್ರಾಮಾಂತರ – ಚಂದ್ರಕಾಂತ್ ಎಂ.ವಿ.
* ಬೆಳಗಾವಿ – ಕೆ. ರಾಮರಾಜನ್
* ಶಿವಮೊಗ್ಗ – ಬಿ ನಿಖಿಲ್
* ರಾಯಚೂರು – ಅರುಣಾಂಶು ಗಿರಿ
* ಹಾಸನ – ಶುಭನ್ವಿತಾ
* ಚಿಕ್ಕಮಗಳೂರು – ಜಿತೇಂದ್ರ ಕುಮಾರ್ ದಯಾಮ್
* ಕೋಲಾರ – ಕನ್ನಿಕಾ ಸಿಕ್ರಿವಾಲ್
* ಕೊಡಗು – ಬಿಂದು ಮಣಿ
* ಮಂಡ್ಯ – ಶೋಭಾ ರಾಣಿ
* ಚಾಮರಾಜನಗರ – ಮುತ್ತುರಾಜು ಎಂ
* ಬಳ್ಳಾರಿ – ಪವನ್ ನೆಜ್ಜೂರ್
* ಮೈಸೂರು – ಮಲ್ಲಿಕಾರ್ಜುನ ಬಾಲದಂಡಿ
ರಾಜ್ಯ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಎಡಿಜಿಪಿ ಬಿ. ದಯಾನಂದ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು. ಜತೆಗೆ ಮೂವರು ಐಎಎಸ್ ಅಧಿಕಾರಿಗನ್ನು ಸಹ ವರ್ಗಾವಣೆ ಮಾಡಿತ್ತು.
ಪೊಲೀಸ್ ತರಬೇತಿ ಶಾಲೆಯ ಎಡಿಜಿಪಿ ಆಗಿದ್ದ ಅಲೋಕ್ ಕುಮಾರ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ, ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ನೇಮಕ ಮಾಡಲಾಗಿದೆ.
ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಇತ್ತೀಚೆಗೆ ರದ್ದುಪಡಿಸಿತ್ತು. ಇದರ ಬೆನ್ನಲ್ಲೇ ಅಲೋಕ್ ಕುಮಾರ್‌ಗೆ ಎಡಿಜಿಪಿಯಿಂದ ಡಿಜಿಪಿಯಾಗಿ ಬಡ್ತಿ ನೀಡಿದ ರಾಜ್ಯ ಸರ್ಕಾರ, ಕಾರಾಗೃಹ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಕಾರಾಗೃಹ ಇಲಾಖೆಯ ಎಡಿಜಿಪಿ ಆಗಿದ್ದ ಬಿ.ದಯಾನಂದ್ ಅವರನ್ನು ಪೊಲೀಸ್ ತರಬೇತಿ ಶಾಲೆಯ ಎಡಿಜಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಮೊದಲು ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.