Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೊಹಾಲಿ: ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೃಷ್ಣ ಕುಮಾರ್ ಗೋಯಲ್ ಅವರ ಪತ್ನಿ ಅಶೋಕ್ ಕುಮಾರಿ ಗೋಯಲ್ ಅವರನ್ನು ಅವರ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಆ ಮನೆಯ ಕೆಲಸದಾಕೆ ಕೆಲಸಕ್ಕೆ ಬಂದಾಗ ಪದೇ ಪದೇ ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದರು. ಅಕ್ಕಪಕ್ಕದವರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಬಾಗಿಲು ಒಡೆದಾಗ, ಅಶೋಕ್ ಕುಮಾರಿ (66) ಒಳಗೆ ಶವವಾಗಿ ಪತ್ತೆಯಾಗಿದ್ದು, ಆಕೆಯ ಸಹಾಯಕನಾದ ನೀರಜ್ (25) ಎಂಬಾತನನ್ನು ಕುರ್ಚಿಗೆ ಕಟ್ಟಿಹಾಕಲಾಗಿತ್ತು. ಆ ಮನೆಗೆ ಹಾಲು ನೀಡುವ ಹಾಲಿನ ವ್ಯಾಪಾರಿಗೆ ನಾಳೆ ಹಾಲು ಹಾಕಬೇಡಿ ಎಂದು ಅಶೋಕ್ ಕುಮಾರಿ ಹಿಂದಿನ ದಿನವೇ ಹೇಳಿದ್ದರು ಎಂಬುದು ಗೊತ್ತಾಗಿದೆ.
ದರೋಡೆ ಮಾಡುವ ಉದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಮನೆಯ ಸಹಾಯಕನನ್ನು ಕಟ್ಟಿ ಹಾಕಿ ಆಭರಣ ಮತ್ತು ನಗದು ದೋಚಿದ್ದಾರೆ. ಕೊಲೆ ನಡೆದಾಗ ಕೃಷ್ಣ ಕುಮಾರ್ ಗೋಯಲ್ ಮಸ್ಕತ್‌ನಲ್ಲಿದ್ದರು. ಅವರು ತಮ್ಮ ಮಗಳನ್ನು ಭೇಟಿ ಮಾಡಲು ಹೋಗಿದ್ದರು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೃಷ್ಣ ಕುಮಾರ್ ಗೋಯಲ್ ಅವರ ಪತ್ನಿಯೇ ಕೊಲೆಯಾದ ಮಹಿಳೆ. ಈ ಕೊಲೆ ನಡೆದ ಸ್ಥಳದಲ್ಲಿದ್ದ 25 ವರ್ಷದ ಸಹಾಯಕ ನೀರಜ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದರೋಡೆಕೋರರು ಆ ಮಹಿಳೆಯನ್ನು ಕೊಂದು ಸಹಾಯಕನನ್ನು ಏಕೆ ಹಾಗೇ ಬಿಟ್ಟರು? ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
https://www.newsics.com/2025/12/31/techie-dies-in-biocon-office/