Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೆಕ್ಸಿಕೋದ ದಕ್ಷಿಣ ರಾಜ್ಯ ಓಕ್ಸಾಕದಲ್ಲಿ ರೈಲು ಹಳಿ ತಪ್ಪಿ ಭೀಕರ ಅಪಘಾತ ಸಂಭವಿಸಿದ್ದು, 13 ಜನರು ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ.
ನಿಜಾಂಡಾ ಪಟ್ಟಣದ ಬಳಿ ನಡೆದ ಈ ದುರಂತದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 250ಕ್ಕೂ ಹೆಚ್ಚು ಜನರು ಆತಂಕಗೊಂಡಿದ್ದಾರೆ, ಕೆಲವರಿಗೆ ಸಣ್ಣಪುಟ್ಟ ಗಾಯಗಳು ಆಗಿದೆ ಎಂದು ತಿಳಿದುಬಂದಿದೆ.
ಮೆಕ್ಸಿಕೊದಾ ನೌಕಾಪಡೆಯ ಮಾಹಿತಿ ಪ್ರಕಾರ, ರೈಲಿನಲ್ಲಿ 9 ಸಿಬ್ಬಂದಿ ಮತ್ತು 241 ಪ್ರಯಾಣಿಕರು ಇದ್ದರು. ಹಳಿತಪ್ಪಿದ ನಂತರ 193 ಜನರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರಲ್ಲಿ 5 ಜನರ ಸ್ಥಿತಿ ಗಂಭೀರವಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸೈನ್ಯ ಮತ್ತು ಸಿವಿಲ್ ಪ್ರೊಟೆಕ್ಷನ್ ಸಿಬ್ಬಂದಿ ತೊಡಗಿದ್ದಾರೆ.
https://www.newsics.com/2025/12/29/dense-fog-across-north-india/