Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಪ್ರಮುಖವಾದುದು. ಆದ್ದರಿಂದ ಕೂದಲಿನ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿರುತ್ತದೆ. ನಿಮ್ಮ ಕೂದಲಿಗೆ ಒಳ್ಳೆಯ ರೀತಿಯಲ್ಲಿ ಪೋಷಣೆ ನೀಡುವುದು ಅತ್ಯಂತ ಅಗತ್ಯವಾಗಿದೆ. ನಿಮ್ಮ ಆಹಾರ ಪದ್ದತಿಯೂ ನಿಮ್ಮ ಕೂದಲಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಆದರೆ ಇಂದು ಕೂದಲಿನ ಆರೋಗ್ಯವನ್ನು ಕಾಪಾಡಲು ಒಂದು ಒಳ್ಳೆಯ ಸಲಹೆ ಇಲ್ಲಿದೆ. ರಾತ್ರಿ ಹೊತ್ತು ತಲೆಕೂದಲಿಗೆ ಸ್ನಾನ ಮಾಡಿ, ಕೂದಲನ್ನು ಹಾಗೆಯೇ ಒಣಗಿಸದೇ ಹಾಗೆಯೇ ಒದ್ದೆ ಕೂದಲಿನಲ್ಲಿ ಮಲಗುವ ಅಭ್ಯಾಸ ನಿಮಗಿದೆಯೇ? ಇಂತಹ ಅಭ್ಯಾಸ ನಿಮಗಿದ್ದರೇ ಈ ಕೂಡಲೇ ಬಿಟ್ಟು ಬಿಡಿ.
ರಾತ್ರಿ ಹೊತ್ತು ತಲೆಕೂದಲಿಗೆ ಸ್ನಾನ ಮಾಡಿ, ಕೂದಲನ್ನು ಒಣಗಿಸದೇ ಹಾಗೆಯೇ ಒದ್ದೆ ಕೂದಲಿನಲ್ಲಿ ಮಲಗುವ ಅಭ್ಯಾಸ ನಿಮಗಿದೆಯೇ? ಇಂತಹ ಅಭ್ಯಾಸ ಈ ಕೂಡಲೇ ಬಿಟ್ಟು ಬಿಡಿ. ಏಕೆಂದರೆ ಇದು ನಿಮ್ಮ ಕೂದಲು ಮತ್ತು ನೆತ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಒದ್ದೆಯಾದ ಕೂದಲು ಒಣ ಕೂದಲಿಗಿಂತ ಹೆಚ್ಚು ದುರ್ಬಲವಾಗಿರುತ್ತದೆ. ಅದಕ್ಕಾಗಿಯೇ ಒಣಗುವ ಮೊದಲು ನೀವು ಎಂದಿಗೂ ಕೂದಲನ್ನು ಬಾಚಬಾರದು. ನೀವು ಒದ್ದೆ ಕೂದಲಿನೊಂದಿಗೆ ಮಲಗಲು ಹೋದರೆ ರಾತ್ರಿಯಿಡಿ ಕೂದಲು ಸಾಕಷ್ಟು ಚಲಿಸಿದರೆ ಕೂದಲು ಹೆಚ್ಚು ಸುಲಭವಾಗಿ ಒಡೆಯುತ್ತದೆ. ಆದ್ದರಿಂದ ಆದಷ್ಟು ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಿ ಒದ್ದೆ ಕೂದಲಿನಲ್ಲಿ ಮಲಗುವ ಅಭ್ಯಾಸವನ್ನು ಬಿಟ್ಟು ಬಿಡಿ.
ಕೂದಲಿನ ತುದಿ ಸೀಳುವುದು
ಕೂದಲು ಒದ್ದೆಯಾಗಿದ್ದಾಗ ಹೆಚ್ಚು ಹಿಗ್ಗುವ ಗುಣವನ್ನು ಹೊಂದಿರುತ್ತದೆ. ಈ ವೇಳೆ ಕೂದಲನ್ನು ಬಾಚಿದಾಗ ಅಥವಾ ಎಳೆದಾಗ ಅದು ತನ್ನ ಮೂಲ ಆಕಾರಕ್ಕೆ ಮರಳುವುದಿಲ್ಲ, ಬದಲಿಗೆ ಹೊರಪದರವು ಹಾನಿಗೊಳಗಾಗಿ ಕೂದಲಿನ ತುದಿ ಒಡೆಯುತ್ತದೆ.
ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸೋಂಕು
ತೇವಾಂಶವುಳ್ಳ ನೆತ್ತಿ ಮತ್ತು ದಿಂಬುಕವಚವು ಶಿಲೀಂಧ್ರಗಳು (ಫಂಗಸ್) ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ತಲೆಹೊಟ್ಟು
ಮಲಾಸೆಜಿಯಾ ಎಂಬ ಶಿಲೀಂಧ್ರದ ಬೆಳವಣಿಗೆಯು ತಲೆಹೊಟ್ಟು ಅಥವಾ ಸೆಬೊರ್ಹೆಕ್ ಸಮಸ್ಯೆಗಳಿಗೆ ಕಾರಣವಾಗುತ್ತೆ.
https://www.newsics.com/2025/12/29/train-derails-in-oaxaca-causing-serious-accident/