Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಾಲಿವುಡ್ ಅಂಗಳದಲ್ಲಿ ವಿವಾದಗಳಿಗೇನು ಕೊರತೆಯಿಲ್ಲ. ಆದರೆ ಈ ಬಾರಿ ವಿವಾದ ಶುರುವಾಗಿರುವುದು ಸಿನಿಮಾ ಸೆಟ್‌ನಿಂದಲ್ಲ, ಬದಲಾಗಿ ಯೂಟ್ಯೂಬ್ ಲೋಕದ ಸುಲ್ತಾನ್ ಎಂದೇ ಕರೆಸಿಕೊಳ್ಳುವ ಧ್ರುವ್ ರಾಠಿ ಅವರ ಒಂದು ವಿಡಿಯೋ ಥಂಬ್‌ನೇಲ್‌ನಿಂದ.
ಇತ್ತೀಚೆಗೆ ಧ್ರುವ್ ರಾಠಿ ‘ಫೇಕ್ ಬ್ಯೂಟಿ’ ಮತ್ತು ಕಾಸ್ಮೆಟಿಕ್ ಸರ್ಜರಿಗಳ ಪ್ರಭಾವದ ಬಗ್ಗೆ ಒಂದು ವಿಡಿಯೋ ಮಾಡಿದ್ದರು. ಈ ವಿಡಿಯೋದ ಥಂಬ್‌ನೇಲ್‌ನಲ್ಲಿ ಜಾನ್ವಿ ಕಪೂರ್ ಅವರ ಹಳೆಯ ಮತ್ತು ಇಂದಿನ ಫೋಟೋಗಳನ್ನು ಬಳಸಲಾಗಿತ್ತು. ಜಾನ್ವಿ ಕಪೂರ್ ಅವರ ಸೌಂದರ್ಯದ ಹಿಂದೆ ಪ್ಲಾಸ್ಟಿಕ್ ಸರ್ಜರಿ ಇದೆ ಎಂಬರ್ಥದಲ್ಲಿ ಈ ಫೋಟೋ ಬಿಂಬಿತವಾಗಿತ್ತು. ಇದು ಜಾನ್ವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು.
ಈ ಬಗ್ಗೆ ಸ್ಪಷ್ಟನೆ ನೀಡಿದ ಧ್ರುವ್,ಈ ವಿಡಿಯೋ ಸಮಾಜದ ಮೇಲೆ ಪ್ಲಾಸ್ಟಿಕ್ ಸರ್ಜರಿಗಳು ಬೀರುವ ಪ್ರಭಾವದ ಬಗ್ಗೆ ಇದೆ. ಜಾನ್ವಿ ಕಪೂರ್ ಅವರು ತಮ್ಮ ಸರ್ಜರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಬೆರಳೆಣಿಕೆಯ ನಟಿಯರಲ್ಲಿ ಒಬ್ಬರು. ಹಾಗಾಗಿ ಉದಾಹರಣೆಗಾಗಿ ಅವರ ಫೋಟೋ ಬಳಸಲಾಗಿದೆಯೇ ಹೊರತು, ಅವರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಲ್ಲ ಎಂದಿದ್ದಾರೆ.
ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಧ್ರುವ್ ರಾಠಿ ಸುಮ್ಮನೆ ಕೂರಲಿಲ್ಲ. ಒಂದು ಸ್ಪಷ್ಟನೆಯ ವಿಡಿಯೋ ಬಿಡುಗಡೆ ಮಾಡಿದ ಅವರು, ನೆಟ್ಟಿಗರ ಮೇಲೆ ಸಖತ್ ಆಗಿಯೇ ಗುಡುಗಿದ್ದಾರೆ. ದೇವರು ನಿಮಗೆ ಮೆದುಳು ಕೊಟ್ಟಿದ್ದಾನೆ, ಅದನ್ನು ಸ್ವಲ್ಪ ಬಳಸಿ. ಬಿಜೆಪಿ ಐಟಿ ಸೆಲ್‌ನವರು ಹಾಕುವ ಪ್ರತಿಯೊಂದು ಸುಳ್ಳು ಪೋಸ್ಟ್ ಅನ್ನು ಕಣ್ಣು ಮುಚ್ಚಿ ನಂಬಬೇಡ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಧ್ರುವ್ ಅವರ ಒಂದು ಹೇಳಿಕೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ನಾನು ನಿಮ್ಮ ಹಾಗೆ ಯಾರನ್ನೂ ಪರೋಕ್ಷವಾಗಿ ಟೀಕಿಸುವುದಿಲ್ಲ. ನನಗೆ ಏನಾದರೂ ಹೇಳಬೇಕೆಂದರೆ ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತೇನೆ. ನೆನಪಿಡಿ, ನಾನು ನಿಮ್ಮ ಅಪ್ಪನಿಗೂ ಹೆದರುವುದಿಲ್ಲ ಮತ್ತು ಬಾಲಿವುಡ್‌ನ ಯಾವುದೇ ದೊಡ್ಡ ಸೆಲೆಬ್ರಿಟಿಗಳಿಗೂ ಹೆದರುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
https://www.newsics.com/2025/12/29/never-sleep-with-wet-hair-at-night/