Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಳಗಾವಿ : ರಾಜಕೀಯದ ಚದುರಂಗದಾಟದ ಬಗ್ಗೆ ಸ್ಫೋಟಕ ಭವಿಷ್ಯ ನುಡಿಯೋ ಕೋಡಿಶ್ರೀಗಳು ಹೊಸ ವರ್ಷ 2026 ಸಂತಸದಿಂದ ತುಂಬಿರುತ್ತಾ ಅಥವಾ ಕಷ್ಟದ ಸರಮಾಲೆಯಾಗುತ್ತಾ ಎನ್ನುವ ಬಗ್ಗೆ ಕೂಡ ಮಾರ್ಮಿಕ ಉತ್ತರ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತಾಡಿದ ಅವ್ರು ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ. ಮತ್ತೊಂದು ಯಗಾದಿ ಫಲ ಅಂತಾ ಇರುತ್ತೆ ಎಂದಿದ್ದಾರೆ.
ಎಲ್ಲವೂ ಅತಂತ್ರ, ಭವಿಷ್ಯ ಕಷ್ಟ ಕಷ್ಟ
ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣ ಕಡೆ ಹೋಗುತ್ತಾನೆ. ಇದು ವಿಶೇಷವಾಗಿ ರಾಜರು, ಮಹಾರಾಜರು ವ್ಯಾಪಾರಸ್ಥರಿಗೆ ಹಾಗೂ ದುಡಿಮೆದಾರರಿಗೆ ಬರುತ್ತೆ. 14ರ ನಂತರ ಸಂಕ್ರಾಂತಿ ಕಳೆದ ಮೇಲೆ ಅಂದ್ರೆ ವರ್ಷದ ಭವಿಷ್ಯವನ್ನ ನಿಖರವಾಗಿ ಹೇಳಬಹುದು ಎಂದಿದ್ದಾರೆ. ಜೊತೆಗೆ 2025 ಕ್ಕಿಂತ 2026ರಲ್ಲಿ ಕಷ್ಟಗಳು, ಸವಾಲುಗಳು ಹೆಚ್ಚಿವೆ ಎಂದು ತಿಳಿಸಿದ್ದಾರೆ.
ಯುಗಾದಿ ಕಳೆದ ಮೇಲೆ ಮಳೆ, ಬೆಳೆಗಳು ರೈತರು, ಭೂಮಿ ಬಗ್ಗೆ ಹೇಳಬಹುದು ಎಂದ ಕೋಡಿಶ್ರೀಗಳು, ಆದ್ರೀಗ ಎಲ್ಲಾ ಅತಂತ್ರವಾಗಿದೆ ಎಂದಿದ್ದಾರೆ. ಹೀಗಾಗಿ ಈಗ ಭವಿಷ್ಯ ಹೇಳೋದು ಕಷ್ಟ ಕಷ್ಟ ಎನ್ನುತ್ತಲೇ 2026ರ ಹೊಸ ವರ್ಷ ಜಗತ್ತಿನ ಕಷ್ಟಗಳ ಸರಮಾಲೆಯನ್ನೇ ತರಲಿದೆ ಎನ್ನುವ ಭಯಂಕರ ಭವಿಷ್ಯ ನುಡಿದಿದ್ದಾರೆ.
2026ಕ್ಕೆ ಭಾರೀ ಪ್ರಮಾಣದ ಮಳೆ ಹಾಗೂ ಪ್ರವಾಹದ ಆರ್ಭಟ ಅಪತ್ತಿನ ಸೃಷ್ಟಿಗೆ ಕಾರಣವಾಗಲಿದೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಏಂಟತ್ತು ಪರ್ಸಂಟ್ ರಷ್ಟು ಜಗತ್ತೇ ಮುಳುಗು ಲಕ್ಷಣ ಗೋಚರವಾಗ್ತಿದೆ ಎಂದು ಕೋಡಿ ಶ್ರೀಗಳು ಭಯಾನಕ ಭವಿಷ್ಯ ನುಡಿದಿದ್ದು, ಇದೆ ಯಗಾದಿ ಬಳಿಕ ಈ ಬಗ್ಗೆ ನಿಖರವಾದ, ವಿಸ್ತೃತವಾದ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಸ್ಫೋಟ ಭವಿಷ್ಯ ನುಡಿದ ಕೋಡಿ ಶ್ರೀಗಳು, ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೊದು ಅಷ್ಟು ಸುಲಭವಲ್ಲ, ಕಷ್ಟ ಕಷ್ಟ ಎಂದಿದ್ದಾರೆ. ತಾನಾಗಿಯೇ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೊಟ್ರೇ ಮಾತ್ರ ಬೇರೆಯರಿಗೆ ಅವಕಾಶ ಸಿಗಬಹುದು ಎಂದು ಕೋಡಿ ಶ್ರೀ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ ತಾನೇ ಅಧಿಕಾರ ಬಿಟ್ಟು ಕೊಡುವವರೆಗೂ ಡಿಕೆಶಿಗೆ ಅಧಿಕಾರ ಸಿಗೊದಿಲ್ಲ ಅಂತ ಪರೋಕ್ಷವಾಗಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಸಿಎಂ ಕುರ್ಚಿ ಏರುವ ಕನಸು ಕಾಣ್ತಿರುವ ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಕನಸಾಗುತ್ತಾ ಎನ್ನುವ ಪ್ರಶ್ನೆ ಮೂಡಿಸಿದೆ ಕೋಡಿ ಶ್ರೀ ಭವಿಷ್ಯ.
ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ದ ಬಸ್ ಚಾಲಕ; ಸೀ ಬರ್ಡ್ ಬಸ್ಗಳಲ್ಲಿ ಪ್ರಯಾಣಿಸೋದು ಎಷ್ಟು ಸೇಫ್?