Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
2025ರಲ್ಲಿ ಗ್ರಾಹಕರೊಬ್ಬರು ಕಾಂಡೋಮ್ ಖರೀದಿಗಾಗಿ ಒಂದು ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಅಷ್ಟೇ ಅಲ್ಲ, ಪ್ರತಿ 127 ಆನ್‌ಲೈನ್ ಆರ್ಡರ್‌ಗಳ ಪೈಕಿ 1 ಕಾಂಡೋಮ್ ಆರ್ಡರ್ ಇದ್ದೇ ಇರುತ್ತದೆ.
ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಮಾರ್ಟ್‌ನ 2025ರ ವರದಿ ಬಿಡುಗಡೆ ಆಗಿದ್ದು, ದೇಶದಲ್ಲಿ ಪ್ರತಿ ವರ್ಷ ಹೆಚ್ಚಾಗುತ್ತಿರುವುದನ್ನು ಬಹಿರಂಗಪಡಿಸಿದ್ದು, ಆನ್‌ಲೈನ್ ಶಾಪಿಂಗ್ ಕುರಿತ ಕುತೂಹಲದ ಅಂಶಗಳನ್ನೂ ವಿವರಿಸಿದೆ.
‘ಹೌ ಇಂಡಿಯಾ ಇನ್‌ಸ್ಟಾಮಾರ್ಟೆಡ್ 2025’ ಎಂಬ ವರದಿಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ 400% ಬೆಳವಣಿಗೆ ದಾಖಲಾಗಿದೆ. ಸೆಪ್ಟೆಂಬರ್‌ನಲ್ಲಿ ಹೆಚ್ಚು ಕಾಂಡೋಮ್‌ಗಳನ್ನು ಖರೀದಿಸಲಾಗಿದೆ. ಕಾಂಡೋಮ್ ಆರ್ಡರ್‌ಗಳಲ್ಲಿ ಶೇ.24ರಷ್ಟು ಹೆಚ್ಚಳವಾಗಿದೆ.
2025ನೇ ಸಾಲಿನಲ್ಲಿ ಚೆನ್ನೈನ ಒಬ್ಬ ಗ್ರಾಹಕ ಕಾಂಡೋಮ್ ಖರೀದಿಗಾಗಿ 1 ಲಕ್ಷ ರೂ. ಖರ್ಚು ಮಾಡಿದರೆ, ಮುಂಬೈನ ಗ್ರಾಹಕ ರೆಡ್ ಬುಲ್ ಶುಗರ್ ಫ್ರೀಗಾಗಿ 16.3 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹೈದರಾಬಾದ್ ವ್ಯಕ್ತಿ ಗುಲಾಬಿಗಳಿಗಾಗಿ 31,240 ರೂ ಖರ್ಚು ಮಾಡಿದ್ದಾರೆ. ಚೆನ್ನೈನ ಇನ್‌ಸ್ಟಾಮಾರ್ಟ್ ಬಳಕೆದಾರರೊಬ್ಬರು ತನ್ನ ಸಾಕುಪ್ರಾಣಿಗಳ ಅಗತ್ಯ ವಸ್ತು, ಆಹಾರಕ್ಕಾಗಿ 2.41 ಲಕ್ಷ ರೂ ಖರ್ಚು ಮಾಡಿದ್ದಾರೆ. ನೊಯ್ಡಾದ ‘ಜಿಮ್-ಬ್ರೋ’ 1,343 ಪ್ರೊಟೀನ್ ವಸ್ತುಗಳಿಗಾಗಿ 2.8 ಲಕ್ಷ ಖರ್ಚು ರೂ. ಮಾಡಿದ್ದಾರೆ.
ಹೈದರಾಬಾದ್ ಮೂಲದ ಐಫೋನ್ ಪ್ರೇಮಿಯೊಬ್ಬರು ಒಂದೇ ಬಾರಿ ಮೂರು ಐಫೋನ್ 17 ಖರೀದಿಸಲು 4.3 ಲಕ್ಷ ರೂ. ಖರ್ಚು ಮಾಡಿದ್ದಾರೆ. ನೋಯ್ಡಾ ಮೂಲದ ಗ್ರಾಹಕರೊಬ್ಬರು ಟೆಕ್ನೋ-ಹಾಲಿಕ್ ಬ್ಲೂಟೂತ್ ಸ್ಪೀಕರ್‌ಗಳು, ಎಸ್‌ಎಸ್‌ಡಿಗಳು ಮತ್ತು ರೋಬೋಟಿಕ್ ವ್ಯಾಕ್ಯೂಮ್‌ಗಳನ್ನು ಒಟ್ಟಿಗೆ ಒಂದೇ ಬಾರಿ 2.69 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ.
ಬೆಂಗಳೂರಿನ ನಿವಾಸಿಯೊಬ್ಬರು ಧಂತೇರಸ್ ಹಬ್ಬದ ವೇಳೆ ಡೆಲಿವರಿ ಬಾಯ್ಸ್ಗೆ 68,600 ರೂ. ಟಿಪ್ಸ್ ನೀಡಿದ್ದಾರೆ.
ಕರಿಬೇವು, ದಹಿ, ಮೊಟ್ಟೆ, ಹಾಲು ಮತ್ತು ಬಾಳೆಹಣ್ಣು ಸೇರಿದಂತೆ ಅಡುಗೆಮನೆಯ ಚಿಕ್ಕಪುಟ್ಟ ವಸ್ತುಗಳಿಗೂ ಜನರು ಆನ್‌ಲೈನ್ ಮೊರೆ ಹೋಗುತ್ತಿದ್ದಾರೆ. ಕೊಚ್ಚಿಯಲ್ಲಿ ಒಬ್ಬ ಫ್ಲೇವರ್ ಅಭಿಮಾನಿ 368 ಕರಿಬೇವು ಆರ್ಡರ್‌ಗಳನ್ನು ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಆಟೋ ನಿಲ್ಲಿಸಿದ ಚಾಲಕ; ಆಮೇಲೆ ಏನಾಯ್ತು?