Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಬೀದಿ ಕಾಮುಕನೊಬ್ಬ ವೈದ್ಯೆಗೆ ಕಿರುಕುಳ ನೀಡಿದ ಘಟನೆ ಚಿಕ್ಕಬಾಣಾವಾರದ ಎಜಿಬಿ ಲೇಔಟ್ ನಲ್ಲಿ ನಡೆದಿದೆ.
ಹೆಸರಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯ ವೈದ್ಯೆ ಕರ್ತವ್ಯ ನಿರ್ವಹಿಸಿ ತಡರಾತ್ರಿ 12.49ರ ವೇಳೆಗೆ ಪಿಜಿಗೆ ಮರಳುತ್ತಿದ್ದಾಗ ಘಟನೆ ನಡೆದಿದೆ. ಬೈಕ್‌ನಲ್ಲಿ ಅಡ್ಡಬಂದ ಈ ಅಸಾಮಿ, ವೈದ್ಯೆ ಬಳಿಕ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದ ಕುರಿತು ಕೇಳಿದ್ದಾನೆ. ಆಕೆ ಉತ್ತರ ನೀಡುತ್ತಿದ್ದಂತೆ ಅಸಭ್ಯವಾಗಿ ಮುಟ್ಟಲು ಯತ್ನಿಸಿದ್ದಾನೆ. ಆತನಿಂದ ದೂರ ಸರಿಯುತ್ತಿದ್ದಂತೆ ಕಾಮುಕ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಕಿರುಕುಳ ಹೆಚ್ಚಾಗುತ್ತಿದ್ದಂತೆ ವೈದ್ಯೆ ಕಿರುಚಾಡಿದ್ದಾರೆ. ಕಿರುಚಾಟದಿಂದ ಕಾಮುಕ ಎಸ್ಕೇಪ್ ಆಗಿದ್ದಾನೆ.
ಬೀದಿ ಕಾಮುಕನ ಕಿರುಕುಳ ಕುರಿತು ಮಹಿಳಾ ಡಾಕ್ಟರ್ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.