Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಟಿ ಮಹಿಮಾ ಚೌಧರಿ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಬೀಸಿದೆ.ಗಂಡನ ಜೊತೆ ಸಂಬಂಧ ಮುರಿದುಬಿದ್ದು 12 ವರ್ಷಗಳು ಆಗಿವೆ. ಆದರೆ, ಇಷ್ಟವಿದ್ದರೂ ಮತ್ತೊಂದು ಸಂಬಂಧ ಮಾಡಿಕೊಳ್ಳಲು ಈ ಗಂಡನಿಂದ ಕಾನೂನು ಪ್ರಕ್ರಿಯೆ ಮೂಲಕ ಡಿವೋರ್ಸ್ ಆಗಿಲ್ಲ. ಪತಿ ಜೊತೆ ಈ ನಟಿ ದೂರವಿದ್ದು ಮಗಳ ಜೊತೆ ಬದುಕುತ್ತಿದ್ದಾರೆ. ಆದರೆ, ಮತ್ತೊಂದು ಮದುವೆ ಆಗಲುಬಯಸುತ್ತಿದ್ದಾರೆ.
ಆದ್ರೆ ಡಿವೋರ್ಸ್ ಪ್ರಕರಣ ಬಾಕಿ ಇರೋದ್ರಿಂದ ನನಗೆ ಅದು ಸಾಧ್ಯವಾಗ್ತಿಲ್ಲ..ನಾನು ಎಲ್ಲವನ್ನೂ ಮರೆತು ಮುಂದಕ್ಕೆ ಸಾಗಬೇಕು ಅಂತಾ ಭಾವಿಸ್ತೇನೆ ಆಗ ಥಟ್ ಅಂತಾ ನನಗೆ ಇನ್ನೂ ಡಿವೋರ್ಸ್ ಆಗಿಲ್ಲ ಅನ್ನೋದು ನೆನಪಾಗುತ್ತದೆನ ಎಂದಿದ್ದಾರೆ.
ಮಹಿಮಾ ಚೌಧರಿಗೆ ಕೋಲ್ಕತ್ತಾ ಮೂಲದ ಉದ್ಯಮಿ ಬಾಬಿ ಮುಖರ್ಜಿ ಜೊತೆ 2006ರಲ್ಲಿ ಮದುವೆಯಾದರು.2007ರಲ್ಲಿ ಹೆಣ್ಣು ಮಗು ಜನನವಾಯ್ತು. ಆದರೆ, ಮದುವೆ ಬಳಿಕ 7 ವರ್ಷಗಳಲ್ಲಿಯೇ ದಾಂಪತ್ಯದಲ್ಲಿ ಬಿರುಕು ಮೂಡಿತು. ಸಾಂಸಾರಿಕ ಜೀವನ ಹಳಿ ತಪ್ಪಿತು. ಇನ್ನೂ ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಅಂದಾಗ, ಮಹಿಮಾ ತಮ್ಮ ಮಗಳ ಜೊತೆ ಆ ಮನೆಯಿಂದ ಹೊರ ಬಂದರು. ಕೂಡ ತನ್ನ ಪತಿ ಡಿವೋರ್ಸ್ ನೀಡ್ತಿಲ್ಲ ಹೀಗಾಗಿ ಬರೋಬ್ಬರಿ 12 ವರ್ಷಗಳೇ ಕಳೆದಿದ್ದಾರೆ. ಈಗಲೂ ಕೂಡ ಮತ್ತೆ ಹೊಸ ಜೀವನ ರೂಪಿಸುವ ತವಕ ಆಸೆ ಇನ್ನು ಹುಸಿಯಾಗಿದೆ ಆದ್ರೆ ಏನ್ಮಡೋದು ಮದುವೆ ಆಗಲು ಆಗ್ತಿಲ್ಲವೆಂದು ಮಹಿಮಾ ನೋವನ್ನ ಹೊರಹಾಕಿದ್ದಾರೆ.