Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
25 ವರ್ಷದಲ್ಲಿ ಮೊದಲ ಬಾರಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದು, ‘ದಿ ಡೆವಿಲ್’ ಸಿನಿಮಾ ನಾಯಕಿ ರಚನಾ ರೈ ಸಂದರ್ಶನವನ್ನು ಮಾಡಿದ್ದಾರೆ.
ಸಂದರ್ಶನದ ವೇಳೆ ದರ್ಶನ್ ಬೆನ್ನು ನೋವಿನ ಬಗ್ಗೆ ಮಾತನಾಡಿದ್ದಾರೆ. ಡೆವಿಲ್ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಅವರಿಗೆ ಬೆನ್ನು ನೋವಿತ್ತು. ದರ್ಶನ್ ಅವರಿಗೆ ಆಪರೇಶನ್ ಆದರೆ ಆರು ತಿಂಗಳು ಅಥವಾ ಒಂದು ವರ್ಷ ಬೆಡ್ ರೆಸ್ಟ್ ಮಾಡಬೇಕು ಎಂದು ಹೇಳಿದರು. ಭಾರತದಲ್ಲಿ ಆಪರೇಶನ್ ಆದರೆ ಹೀಗೆಲ್ಲ ಮಾಡೋಕೆ ಆಗೋದಿಲ್ಲ. ಸಿಂಗಾಪುರದಲ್ಲಿ ವೈದ್ಯರನ್ನು ಕಾಂಟ್ಯಾಕ್ಟ್ ಮಾಡಿದಾಗ ಅವರು ಲೇಸರ್ ಟ್ರೀಟ್‌ಮೆಂಟ್ ಮಾಡಿಸೋಣ ಎಂದಿದ್ದಾರೆ.
ನಿರ್ಮಾಪಕರು ಎಷ್ಟು ಬಡ್ಡಿಗೆ ಹಣ ತಂದು ಸಿನಿಮಾ ಮಾಡಿರುತ್ತಾರೆ ಎನ್ನೋದು ನಮಗೆ ಗೊತ್ತಿದೆ. ನಾವು ಕಷ್ಟದಿಂದ ಈ ಹಂತಕ್ಕೆ ಬಂದಿದ್ದಕ್ಕೆ ನಮಗೆ ಹಣದ ಬೆಲೆ ಗೊತ್ತಿದೆ. ಹೀಗಾಗಿ ಅವರು ಪ್ರಕಾಶ್ ವೀರ್ ಅವರ ಸಿನಿಮಾ ಮೊದಲು ಮಾಡಿ ಮುಗಿಸೋಣ ಎಂದರು. ಹೀಗಾಗಿ ಅವರು ಆಪರೇಶನ್ ಮಾಡಿಸಿಕೊಳ್ಳಲಿಲ್ಲ. ವಾರದಲ್ಲಿ ಒಂದು ದಿನ ಅವರು ಹೈ ಡೋಸ್ ಮಾತ್ರೆಗಳನ್ನು ತಗೊಂಡಿದ್ದರು. ಈಗ ಜೈಲಿನಲ್ಲಿ ಕೂಡ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಫಳಫಳ ಹೊಳೆಯುವ ತ್ವಚೆ ನಿಮ್ಮದಾಗಬೇಕಾ?; ಹಾಗಾದ್ರೆ ಸ್ನಾನಕ್ಕೂ ಮುನ್ನ ಈ ಎಣ್ಣೆ ಹಚ್ಚಿ ಸಾಕು