Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಹಾರ : ಐವರು ಮಕ್ಕಳನ್ನ ನೇಣಿಗೇರಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದ ಮುಜಫರ್ಪುರದಲ್ಲಿ ನಡೆದಿದೆ.
ತನ್ನ ಮನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮೂವರು ಹೆಣ್ಣುಮಕ್ಕಳಿಗೆ ನೇಣು ಹಾಕಿದ ತಂದೆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಮರನಾಥ್ ರಾಮ್ ತನ್ನ ಐದು ಮಕ್ಕಳಿಗೂ ನೇಣು ಹಾಕಲು ಪ್ರಯತ್ನಿಸಿದ್ದಾನೆ. ಆದರೆ ಇಬ್ಬರು ಗಂಡು ಮಕ್ಕಳು ಅದೃಷ್ವವಶಾತ್ ಬದುಕುಳಿದಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು
ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮರನಾಥ್ ಅವರ ಪತ್ನಿ ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಅಮರನಾಥ್ ಅವರು ತಮ್ಮ ಹೆಣ್ಣುಮಕ್ಕಳಾದ ಅನುರಾಧ (12), ಶಿವಾನಿ (7) ಮತ್ತು ರಾಧಿಕಾ (6) ಮತ್ತು ಪುತ್ರರಾದ ಶಿವಂ (6) ಮತ್ತು ಚಂದನ್ (5) ಅವರೊಂದಿಗೆ ವಾಸಿಸುತ್ತಿದ್ದರು. ಕುಟುಂಬವು ಮುಜಫರ್ಪುರದ ಮಿಶ್ರೌಲಿಯಾ ಗ್ರಾಮದಲ್ಲಿ ವಾಸಿಸುತ್ತಿತ್ತು.