Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೆಕ್ಸಿಕೋದ ಪೆಸಿಫಿಕ್ ಕರಾವಳಿಯ ಅಕಾಪುಲ್ಕೊದಿಂದ ಹೊರಟ ಮಿನಿ ಜೆಟ್ ತುರ್ತು ಭೂಸ್ಪರ್ಶಕ್ಕೆ ಯತ್ನಿಸುತ್ತಿದ್ದಾಗ ಅಪಘಾತವಾಗಿ ಎಂಟು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೋದ ಟೊಲುಕಾ ವಿಮಾನ ನಿಲ್ದಾಣದ ಬಳಿ ನಡೆದಿದೆ.
ವಿಮಾನವು ಹತ್ತಿರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಇಳಿಯುವ ಮೊದಲು ಕಂಪನಿಯ ಕಟ್ಟಡದ ಛಾವಣಿಗೆ ಅಪ್ಪಳಿಸಿತು. ಅಪಘಾತದ ಕಾರಣ ತನಿಖೆಯಲ್ಲಿದೆ.
ಮೆಕ್ಸಿಕೋ ರಾಜ್ಯದ ನಾಗರಿಕ ರಕ್ಷಣಾ ಸಂಯೋಜಕರಾದ ಆಡ್ರಿಯನ್ ಹೆರ್ನಾಂಡೆಜ್ ಅವರ ಪ್ರಕಾರ, ತುರ್ತು ಭೂಸ್ಪರ್ಶಕ್ಕೆ ಯತ್ನಿಸುತ್ತಿದ್ದಾಗ ಮಧ್ಯ ಮೆಕ್ಸಿಕೋದಲ್ಲಿ ಸಣ್ಣ ಖಾಸಗಿ ವಿಮಾನವೊಂದು ಅಪಘಾತಕ್ಕೀಡಾಯಿತು. ಹತ್ತು ಜನರು ಸಾವನ್ನಪ್ಪಿದ್ದಾರೆ. ಮೆಕ್ಸಿಕೋ ನಗರದಿಂದ ಪಶ್ಚಿಮಕ್ಕೆ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ, ಟೊಲುಕಾ ವಿಮಾನ ನಿಲ್ದಾಣದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಕೈಗಾರಿಕಾ ಪ್ರದೇಶವಾದ ಸ್ಯಾನ್ ಮಾಟಿಯೊ ಅಟೆಂಕೊದಲ್ಲಿ ಈ ಅಪಘಾತ ಸಂಭವಿಸಿದೆ.