Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಖ್ಯಾತ ಫುಟ್ಬಾಲ್ ತಾರೆ ಅರ್ಜೇಂಟಿನಾದ ಲಿಯೋನೆಲ್ ಮೆಸ್ಸಿ ಇಂದಿನಿಂದ ಮೂರು ದಿನ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ. ಮಧ್ಯರಾತ್ರಿ 1.30ರ ವೇಳೆಗೆ ಕೊಲ್ಕತ್ತಾಗೆ ಬಂದಿಳಿಯಲಿದ್ದು, ಡಿಸೆಂಬರ್ 15ರವರೆಗೂ ಭಾರತದಲ್ಲಿ ಇರುತ್ತಾರೆ. ಡಿ. 13ರಂದು ಶನಿವಾರ ಕೊಲ್ಕತ್ತಾದ ವಿಐಪಿ ರಸ್ತೆಯಲ್ಲಿ ನಿರ್ಮಾಣವಾದ ತಮ್ಮ 70 ಅಡಿಯ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಡಿಸೆಂಬರ್ 14ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸ್ಟಾರ್ ಕ್ರಿಕೆಟಿಗರೊಂದಿಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲಿರುವ ಲಿಯೋನೆಲ್ ಮೆಸ್ಸಿ ಡಿ. 15ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ಸಂಜೆ ಹೈದರಾಬಾದ್ ಗೆ ತೆರಳಲಿರುವ ಲಿಯೋನೆಲ್ ಮೆಸ್ಸಿ ಸ್ನೇಹಾರ್ಥವಾಗಿ ಆಯೋಜಿಸಿರುವ ಫುಟ್ಬಾಲ್ ಪಂದ್ಯ ಆಡಲಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿ ಹಲವರು ಭಾಗವಹಿಸಲಿದ್ದಾರೆ.