Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದೇವನಹಳ್ಳಿ: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಸತತವಾಗಿ ಮುಂದುವರಿದಿದ್ದು, ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣದಲ್ಲಿಯೇ ಇಂದು 102 ವಿಮಾನಗಳ ಸಂಚಾರ ರದ್ದಾಗಿದೆ. 50 ಡಿಪಾರ್ಚರ್ ಹಾಗೂ 52 ಅರೈವಲ್ ವಿಮಾನಗಳು ಕ್ಯಾನ್ಸಲ್ ಆಗಿದ್ದು, 30ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬಗೊಂಡಿದೆ.
ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನೆಲೆ ಕೆಂಪೇಗೌಡ ಏರ್ಪೋರ್ಟ್ನ ಅರೈವಲ್ ಗೇಟ್ ಖಾಲಿ ಖಾಲಿ ಇರೋ ದೃಶ್ಯಗಳು ಕಂಡುಬಂದಿವೆ. ಹೊರ ರಾಜ್ಯಗಳಿಂದಲೂ ಇಂಡಿಗೋ ವಿಮಾನಗಳು ಬಾರದ ಹಿನ್ನಲೆ, ಪ್ರಯಾಣಿಕರಿಲ್ಲದೆ ಆಗಮನದ ದ್ವಾರಗಳು ಬಿಕೋ ಎನ್ನುತ್ತಿವೆ. ಪ್ರಯಾಣಿಕರಿಲ್ಲದ ಕಾರಣ ಟ್ಯಾಕ್ಸಿ ಚಾಲಕರೂ ಬಾಡಿಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.