Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು : ನಟ ದರ್ಶನ ಮತ್ತು ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ಹಣ ಸಂಗ್ರಹ ಆರೋಪ ಹಿನ್ನೆಲೆಯಲ್ಲಿ ದರ್ಶನ್ ವಿರುದ್ಧ 82 ಲಕ್ಷ ನಗದು ಸಂಗ್ರಹ ಮಾಡಿದ ಆರೋಪ ಹಿನ್ನೆಲೆ ಹಣಕ್ಕೆ ಸಂಬಂಧಪಟ್ಟಂತೆ ಐಟಿ ಅಧಿಕಾರಿಗಳ ಮುಂದೆ A2 ಆರೋಪಿ ದರ್ಶನ ಹೇಳಿಕೆ ನೀಡಿದ್ದು, ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಹಣ ಪತ್ತೆ ಸಂಬಂಧ ಐಟಿ ವಿಚಾರಣೆ ಬಳಿ ಹಣದ ಬಗ್ಗೆ ದರ್ಶನ್ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.
ಐಟಿ ಅಧಿಕಾರಿಗಳ ವಿಚಾರಣೆ ವೇಳೆ ದರ್ಶನ್ ದ್ವಂದ್ವ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. 82 ಲಕ್ಷ ಹಣ ಎಲ್ಲಿಂದ ಬಂದಿದ್ದು ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ದರ್ಶನ್ ತನ್ನದೇ ಸ್ಟೈಲ್ನಲ್ಲಿ ಉತ್ತರ ನೀಡಿದ್ರು. ನಾನು ಕೃಷಿ ಮಾಡಿದ್ದೇ, ಪ್ರಾಣಿಗಳ ಮಾರಾಟ ಮಾಡಿದ್ದೇ. ನನ್ನ ಅಭಿಮಾನಿಗಳು ನನಗೆ ಹುಟ್ಟುಹಬ್ಬದ ದಿನ ದುಡ್ಡುಕೊಟ್ಟಿದ್ರು ಎಂದು ಹೇಳಿಕೆ ನೀಡಿದ್ರು ಎನ್ನಲಾಗ್ತಿದೆ.
ಈ ಹಣಕ್ಕೆ ನನ್ನ ಬಳಿ ಯಾವುದೇ ದಾಖಲೆ ಇಲ್ಲ ಮೋಹನ್ ರಾಜ್ಗೆ ಬಿಟ್ಟರೆ ಯಾರಿಗೂ ನಗದು ರೂಪದಲ್ಲಿ ಸಾಲ ಕೊಟ್ಟಿಲ್ಲ ಆರು ವರ್ಷದಿಂದ ನಾನು ಸಾಲ ಕೊಟ್ಟಿಲ್ಲ ಪಡೆದು ಇಲ್ಲ ಉಳಿದ ಹಣದ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದು ದರ್ಶನ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದರು. ದರ್ಶನ್, ವಿಜಯಲಕ್ಷ್ಮಿ, ಪ್ರಧೋಷ್ ನಿಖಿಲ್ ಹಾಗೂ ಕೇಶವಮೂರ್ತಿ ಮನೆಯಲ್ಲಿ 82 ಲಕ್ಷ ರೂಪಾಯಿ ಹಣ ಸಿಕ್ಕಿತ್ತು.