Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಲಖನೌ: ಚಿರತೆ ಹಿಡಿಯಲು ಬೋನಿನಲ್ಲಿ ಇರಿಸಲಾಗಿದ್ದ ಜೀವಂತ ಮೇಕೆಯನ್ನು ಕದಿಯಲು ಯತ್ನಿಸಿದ ವ್ಯಕ್ತಿಯೊಬ್ಬ ಅದರಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.
ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಎರಡು ಬೋನುಗಳನ್ನು ಇರಿಸಿದ್ದರು. ಕಾಡು ಪ್ರಾಣಿಯನ್ನು ಆಕರ್ಷಿಸಲು ಜೀವಂತ ಮೇಕೆಗಳನ್ನು ಒಳಗೆ ಕಟ್ಟಲಾಗಿತ್ತು. ಆದರೆ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಮೇಕೆಯನ್ನು ನೋಡಿ, ಅದನ್ನು ಹಿಡಿಯುವ ಪ್ರಯತ್ನ ಮಾಡಲು ಹೋಗಿ ಬೋನಿನೊಳಗೆ ಬಂಧಿಯಾಗಿದ್ದಾನೆ. ಇದರ ವಿಡಿಯೊ ವೈರಲ್ ಆಗಿದೆ.
ಮರುದಿನ ಬೆಳಗ್ಗೆ ಗ್ರಾಮಸ್ಥರು ಚಿರತೆಯ ಬದಲು ಬೋನಿನೊಳಗೆ ಸಿಲುಕಿರುವ ವ್ಯಕ್ತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಘಟನೆಯ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದರ ವಿಡಿಯೊ ವೈರಲ್ ಆಗಿದೆ. ಪ್ರದೀಪ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ತಡರಾತ್ರಿ ಬೋನಿನೊಳಗೆ ಮೇಕೆಯನ್ನು ನೋಡಿದ್ದಾನೆ. ಆದರೆ ಅದು ಚಿರತೆಗೆ ಹೆಣೆಯಲಾದ ಬಲೆ ಎಂದು ಅವನಿಗೆ ತಿಳಿದಿರಲಿಲ್ಲ. ಮದ್ಯದ ಅಮಲಿನಲ್ಲಿದ್ದ ಪ್ರದೀಪ್ ಜೀವಂತ ಮೇಕೆಯನ್ನು ಕದಿಯಲು ಪ್ರಯತ್ನಿಸಿದ್ದ. ಆದರೆ ಹೊರಬರಲಾರದೆ ಮೇಕೆಯೊಂದಿಗೆ ಪ್ರದೀಪ್ ಇಡೀ ರಾತ್ರಿ ಒಳಗೆ ಸಿಲುಕಿಕೊಂಡಿದ್ದನು.
ಬೆಳಗ್ಗೆ ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸ್ಥಳಕ್ಕೆ ತಲುಪಿ ಚಿರತೆ ಸೆರೆ ಸಿಕ್ಕಿದೆಯೇ ಎನ್ನುವುದನ್ನು ಪರಿಶೀಲಿಸಿದರು. ಈ ವೇಳೆ ಪಂಜರದೊಳಗೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ಅವರು ಗಮನಿಸಿದರು. ನಂತರ ಅರಣ್ಯ ಅಧಿಕಾರಿಗಳು ಅವನನ್ನು ಬಿಡುಗಡೆ ಮಾಡಿದರು.
https://x.com/i/status/1994389110325420510
ಶನಿವಾರ ಕಡಿಮೆ ಡ್ರೆಸ್ ಹಾಕ್ತೀರಾ? ;ಮೋಕ್ಷಿತಾ ಪೈಗೆ ರಕ್ಷಿತಾ ಶೆಟ್ಟಿ ಈ ರೀತಿ ಹೇಳಿದ್ಯಾಕೆ?