Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಅತಿಯಾದ ತೂಕದಿಂದ ಬಳಲುತ್ತಿದ್ದ ಯುವಕನೊಬ್ಬ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ತೂಕ ಇಳಿಸಿಕೊಂಡ ಘಟನೆ ಬೆಂಗಳೂರಿನ ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ.
38 ವರ್ಷದ ಯುವಕನೊಬ್ಬ 230 ಕೆಜಿ ತೂಕವಿದ್ದು ಕೀಲು ನೋವಿನಿಂದ ಬಳಲುತ್ತಿದ್ದರು. ಸ್ಥೂಲಕಾಯ ಹೊಂದಿದ್ದ ಕಾರಣ ಕೀಲು ಬದಲಾವಣೆ ಸಾಧ್ಯವಿರಲಿಲ್ಲ ಮತ್ತು ತೂಕ ಹೆಚ್ಚಿದ್ದ ಕಾರಣ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ರೋಗಿಯ ಬಿಎಂಐ (BMI) 50ಕ್ಕಿಂತ ಹೆಚ್ಚಿದ್ದ ಕಾರಣ ರೋಗಿಗೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಉತ್ತಮ ಎಂದು ಡಾ. ಮುತ್ತರಾಜು ಕೆ.ಆರ್. ನಿರ್ಧರಿಸಿದರು.
ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯ ತೂಕ 130 ಕೆಜಿ ಗೆ ಇಳಿಕೆಯಾಯಿತು. ಅಲ್ಲದೆ ಕೀಲು ಬದಲಾವಣೆ ಮಾಡುವ ಅನಿವಾರ್ಯತೆ ತಪ್ಪಿತು. ಅದೇ ರೀತಿಯಾಗಿ 128 ಕೆಜಿ ತೂಕವಿದ್ದ ಮಹಿಳೆಯೊಬ್ಬರು ಡಯಟ್ ಮತ್ತು ವ್ಯಾಯಾಮದಿಂದ ತೂಕ ಇಳಿಕೆಯಾಗದ ಕಾರಣ ಮತ್ತು ಬಿಎಂಐ 30ಕ್ಕಿಂತ ಹೆಚ್ಚಿದ್ದ ಕಾರಣ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ 18 ತಿಂಗಳುಗಳಲ್ಲಿ ಮಹಿಳೆಯ ತೂಕ 63ಕ್ಕೆ ಇಳಿಕೆಯಾಯಿತು. ತದನಂತರ ಆಕೆ ಗರ್ಭಿಣಿಯಾದರು. ಈ ರೀತಿಯಾಗಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿ ನೆರವಾಯಿತು ಎಂದು ಡಾ. ಮುತ್ತರಾಜು ಕೆ.ಆರ್ ತಿಳಿಸಿದರು.