Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕನ್ನಡ ಚಿತ್ರರಂಗ ಈಗ ಮೇಲಕ್ಕೇರುತ್ತಿದೆ ಎಂದು ಎಆರ್ ರೆಹಮಾನ್ ಹೊಗಳಿದ್ದಾರೆ. ಸ್ಯಾಂಡಲ್‌ವುಡ್ ಪ್ರಗತಿಯಲ್ಲಿದ್ದು, ಉನ್ನತ ಹಂತಕ್ಕೆ ಏರುತ್ತಿದೆ ಎಂದಿದ್ದಾರೆ. ಕೆಜಿಎಫ್, ಕಾಂತಾರ ಚಿತ್ರಗಳಂತಹ ಜಾಗತಿಕ ಯಶಸ್ಸು ಕನ್ನಡ ಸಿನಿಮಾಗಳ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಎಆರ್ ರೆಹಮಾನ್ ಅವರು ಭಾರತ ಚಿತ್ರರಂಗದ ಬೇಡಿಕೆಯ ಮ್ಯೂಸಿಕ್ ಕಂಪೋಸರ್. ಅವರು ಹಲವು ಸೂಪರ್ ಹಿಟ್ ಹಾಡುಗಳನ್ನು ಸಂಯೋಜನೆ ಮಾಡಿದ್ದಾರೆ. ಅವರಿಗೆ ಆಸ್ಕರ್ ಕೂಡ ಸಿಕ್ಕಿದೆ.ಇದು ಅವರು ಮಾಡಿದ ವಿಶೇಷ ಸಾಧನೆಗಳಲ್ಲಿ ಒಂದು. ಅವರು ಕನ್ನಡ ಚಿತ್ರರಂಗದ ಬಗ್ಗೆ ಆಡಿದ ಮಾತು ಈಗ ವೈರಲ್ ಆಗುತ್ತಿದೆ. ಅವರು ಕನ್ನಡ ಚಿತ್ರರಂಗವನ್ನು ಹಾಡಿ ಹೊಗಳಿದ್ದಾರೆ.
ರೆಹಮಾನ್ ಅವರ ಮಾತುಗಳು ಕನ್ನಡ ಚಿತ್ರರಂಗದ ಪ್ರಸ್ತುತ ಬೆಳವಣಿಗೆ ಮತ್ತು ಪರಭಾಷಾ ವಲಯದಲ್ಲಿ ಅದರ ಹೆಚ್ಚಿದ ಮನ್ನಣೆಯನ್ನು ಎತ್ತಿ ಹಿಡಿಯುತ್ತವೆ.
ರೆಹಮಾನ್ ಕೈಯಲ್ಲಿ 12ಕ್ಕೂ ಅಧಿಕ ಸಿನಿಮಾಗಳಿವೆ. ಈ ಪೈಕಿ ‘ಪೆದ್ದಿ’ ಮುಖ್ಯವಾದುದು. ರಾಮ್ ಚರಣ್-ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿಂದಿಯ ‘ರಾಮಾಯಣ’ ಚಿತ್ರಕ್ಕೂ ಅವರದ್ದೇ ಸಂಗೀತ ಸಂಯೋಜನೆ ಇದೆ. ಇದರಲ್ಲಿ ಯಶ್ ನಟಿಸಿದ್ದಾರೆ. ಅವರು ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.