Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಬಹುಮಹಡಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 13 ಮಂದಿ ಸಾವನ್ನಪ್ಪಿದ್ದು,bಹಲವರು ಗಾಯಗೊಂಡಿರುವ ಘಟನೆ ಹಾಂಗ್ ಕಾಂಗ್‌ನ ತೈ ಪೊ ನಡೆದಿದೆ.
ಕಟ್ಟಡಗಳಲ್ಲಿ ಇಂದು ಸಂಭವಿಸಿದ ದೊಡ್ಡ ಬೆಂಕಿ ದುರಂತದ ನಂತರ 13 ಜನರು ಸಾವನ್ನಪ್ಪಿದ್ದಾರೆ. 9 ಜನರು ಸ್ಥಳದಲ್ಲೇ ಸಾವನ್ನಪ್ಪಿದದು, ಇತರ ನಾಲ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಸೇವೆಗಳ ಇಲಾಖೆ ತಿಳಿಸಿದೆ.
ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಸುಮಾರು 700 ನಿವಾಸಿಗಳನ್ನು ತಾತ್ಕಾಲಿಕ ಬೇರೆಡೆಗೆ ಸ್ಥಳಾಂತರಿಸಲಾಯಿತು. ಬೆಂಕಿ ಆರಿಸಲು ಬಂದಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ.