Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING | Weekly Horoscope ವಾರ ಭವಿಷ್ಯ ನವೆಂಬರ್ 23 ರಿಂದ 29ರವರೆಗೆ, ವಿಪರೀತ ಖರ್ಚು ಸಾಧ್ಯತೆ
ಈ ದಿನಪಂಚಾಂಗಪ್ರಮುಖವಾರ ಭವಿಷ್ಯ

GOOD MORNING | Weekly Horoscope ವಾರ ಭವಿಷ್ಯ ನವೆಂಬರ್ 23 ರಿಂದ 29ರವರೆಗೆ, ವಿಪರೀತ ಖರ್ಚು ಸಾಧ್ಯತೆ

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ವಾರ ಭವಿಷ್ಯ

(23-11-2025ರಿಂದ 29-11-2025ರವರೆಗೆ)

======

ಕರ್ಮಾಧಿಪತಿ ಗುರುವಿನ ರಾಶಿಯಲ್ಲಿರುವ ಕಾರಣ ಉದ್ಯೋಗ ಫಲಿಸುತ್ತದೆ. ಆದರೆ ಅತಿಗಂಭೀರವಾಗಿ ನೋಡದೇ ಆನಂದದಿಂದ ಕರ್ತವ್ಯ ನಿಷ್ಠರಾಗಿ ಮುನ್ನಡೆಯಬೇಕು. ಆದರೆ ಲಾಭವೇ ಮೂಲ ಉದ್ದೇಶವಾದರೆ ಕೆಲವು ದಿನದಲ್ಲಿ ಅದು ನಿಂತುಹೋಗುವುದು ಅಥವಾ ಕೆಲಸವು ಬೇಸರವಾಗುವುದು.

====

ಮೇಷ

ನಾಲ್ಕನೆಯ ಈ ವಾರ ನಿಮ್ಮ ಕರ್ತವ್ಯನಿಷ್ಠೆ ಮತ್ತು ದೃಢತೆ ಮೇಲಾಧಿಕಾರಿಗಳ ಗಮನ ಸೆಳೆಯುತ್ತದೆ. ದೀರ್ಘಕಾಲದಿಂದ ಬಾಕಿಯಾಗಿದ್ದ ಕೆಲಸಕ್ಕೆ ಈ ವಾರ ಸುಗಮ ದಾರಿ ದೊರೆಯುವ ಸಾಧ್ಯತೆ ಇದೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಉತ್ತಮವಾಗಿರುವುದರಿಂದ ಕಾರ್ಯಗತವಾಗಿದೆ. ಹಣಸಂಬಂಧಿತ ವಿಷಯಗಳಲ್ಲಿ ಜಾಗರೂಕತೆ ಅಗತ್ಯ.

ವೃಷಭ

ಎರಡನೇ ರಾಶಿಯವರಿಗೆ ಈ ವಾರ ನಿಮಗೆ ಹೊಸ ಜವಾಬ್ದಾರಿಗಳು ವಹಿಸಿಕೊಳ್ಳುವ ಅವಕಾಶ ದೊರೆಯಬಹುದು. ನಿಧಾನವಾದರೂ ದೃಢವಾದ ಪ್ರಗತಿ ಕಂಡುಬರುತ್ತದೆ. ಕೆಲಸದ ಸ್ಥಳದಲ್ಲಿ ಶಾಂತಚಿತ್ತದಿಂದ ನಡೆದುಕೊಂಡರೆ ಅನುಕೂಲ. ಹಣಕಾಸಿನ ವ್ಯವಹಾರಗಳಲ್ಲಿ ಅತಿಯಾದ ವೆಚ್ಚವನ್ನು ತಪ್ಪಿಸಿಕೊಳ್ಳಬೇಕು.

ಮಿಥುನ

ನವೆಂಬರ್ ತಿಂಗಳ ನಾಲ್ಕನೇ ವಾರ ಈ ರಾಶಿಗೆ ನಿಮ್ಮ ಮಾತಿನ ಹೊಳಪು ಮತ್ತು ಚಾತುರ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಭೆಗಳು, ಮಾತುಕತೆಗಳು ಹಾಗೂ ನಿರ್ಧಾರಕಾರಿ ಚರ್ಚೆಗಳಲ್ಲಿ ನಿಮ್ಮ ಅಭಿಪ್ರಾಯ ಗೆಲುವು ಸಾಧಿಸಬಹುದು. ಬರವಣಿಗೆ, ಬೋಧನೆ, ಸಂವಹನಕ್ಕೆ ಸಂಬಂಧಿತ ಕ್ಷೇತ್ರಗಳಿಗೆ ಇದು ಅತ್ಯಂತ ಅನುಕೂಲಕರ ವಾರ.

ಕರ್ಕಾಟಕ

ಈ ವಾರ ಮನಸ್ಸಿನಲ್ಲಿ ಸ್ವಲ್ಪ ಚಂಚಲತೆ ಕಂಡರೂ ಕೆಲಸದಲ್ಲಿ ಪರಿಣಾಮವಿಲ್ಲ. ಹಳೆಯ ಕಾರ್ಯಗಳಿಗೆ ಕ್ರಮವಾಗಿ ಪರಿಹಾರ ಸಿಗುತ್ತದೆ. ಈ ವಾರ ಇತರರ ಮಾರ್ಗದರ್ಶನವು ಸ್ವಲ್ಪ ಉಪಯೋಗಕರವಾಗಲಿದೆ. ಹಣಕಾಸಿನಲ್ಲಿ ಅನಾವಶ್ಯಕ ವೆಚ್ಚ ಇಲ್ಲದಂತೆ ಗಮನಹರಿಸಬೇಕು.

ಸಿಂಹ

ಈ ವಾರ ನಿಮ್ಮ ನಾಯಕತ್ವ ಗುಣಗಳು ಸ್ಪಷ್ಟವಾಗಿ ತೋರುತ್ತವೆ. ಕಾರ್ಯಸ್ಥಳದಲ್ಲಿ ಗೌರವ ಹೆಚ್ಚಳದ ಸೂಚನೆ ಕಾಣುತ್ತದೆ. ಈ ವಾರ ದಾಖಲೆ ನಿರ್ವಹಿಸುವವರಿಗೆ ಹೊಸ ಜವಾಬ್ದಾರಿ ಅಥವಾ ಪ್ರಶಂಸೆ ದೊರೆಯಬಹುದು. ಆದಾಗ್ಯೂ, ಅಹಂಭಾದಿಂದ ದೂರವಿರಬೇಕು. ಹಣಕಾಸಿನಲ್ಲಿ ಸ್ಥಿರತೆ.

ಕನ್ಯಾ

ಆರನೇ ರಾಶಿಯವರಿಗೆ ಈ ವಾರ ಸೂಕ್ಷ್ಮತೆಯುಳ್ಳ ಕೆಲಸಗಳಲ್ಲಿ ನೀವು ಅಚ್ಚುಕಟ್ಟಾಗಿ ಯಶಸ್ವಿಯಾಗಿ ಮಾಡುವಿರಿ. ಲೆಕ್ಕಾಚಾರ, ಸಂಶೋಧನೆ, ಪರಿಶೀಲನೆಗೆ ಸಂಬಂಧಿತ ಕಾರ್ಯಗಳಿಗೆ ಇದು ಅತ್ಯಂತ ಶುಭಕರ ಕಾಲ. ಈ ವಾರ ಕೆಲವು ಸಹೋದ್ಯೋಗಿಗಳ ಸಹಕಾರ ದೊರೆತು ಕಾರ್ಯಸಾಧನೆ ಸುಲಭಗೊಳ್ಳುತ್ತದೆ.

ತುಲಾ

ಉದ್ಯೋಗದಲ್ಲಿ ಉಪಕಾರಕ್ಕೆ ಪ್ರತ್ಯುಪಕಾರವೇ ಈ ವಾರದ ನಿಮ್ಮ ಪ್ರಮುಖ ಶಕ್ತಿ. ಸಹಭಾಗಿತ್ವದ ಕೆಲಸಗಳಲ್ಲಿ ಒಳ್ಳೆಯ ಫಲ ಒಲಿಯುತ್ತದೆ. ಹೊಸ ಕಲಿಕೆಯ ಆಸಕ್ತಿ ಹೆಚ್ಚುತ್ತದೆ. ಎರಡರ ಆದಾಯದ ಮೂಲ ಇರುವವರಿಗೆ ಲಾಭಕರ ವಾರ. ಯಾವುದೇ ಏರಿಳಿತಗಳು ನಕಾತಕರಾತ್ಮಕ ಪರಿಣಾಮವನ್ನು ಉಂಟುಮಾಡದು.

ವೃಶ್ಚಿಕ

ಈ ವಾರ ಕೆಲಸದ ಸ್ಥಳದಲ್ಲಿ ಸಣ್ಣ-ಪುಟ್ಟ ವಿರೋಧದ ಲಕ್ಷಣ ಕಂಡರೂ, ನಿಮ್ಮ ದೃಢತೆ ಮತ್ತು ಕಾರ್ಯಪಟುತ್ವದಿಂದ ಅದನ್ನು ಸುಲಭವಾಗಿ ಇಲ್ಲವಾಗುವುದು. ಆತ್ಮವಿಶ್ವಾಸವೇ ಇದನ್ನು ಮಾಡಿಸುತ್ತದೆ. ಹಣಕಾಸಿನಲ್ಲಿ ಹಳೆಯ ಬಾಕಿ ವಸೂಲಿಯಾಗುವ ಸಾಧ್ಯತೆ. ಉದ್ಯೋಗ ಪಡೆಯಲು ಮನವೊಲಿಸುವಿರಿ.

ಧನುಸ್ಸು

ಒಂಭತ್ತನೇ ರಾಶಿಯವರಿಗೆ ಈ ವಾರ ಹೊಸ ಕಾರ್ಯಾರಂಭೀಸುವ ತವಕವಿರಲಿದ್ದು ಪೂರ್ಣ ಸಿದ್ಧತೆಯಾಗಿಲ್ಲಬೆಂಬ ಹಿಂಜರಿಕೆಯೂ ಇರುವುದು. ಈ ವಾರ ಪ್ರವಾಸಕ್ಕೆ ಸಂಬಂಧಿಸಿದ ಅಥವಾ ಜವಾಬ್ದಾರಿಯ ಯೋಜನಾ ಕಾರ್ಯಗಳಿಗೆ ಅನುಕೂಲಕರ. ಹಿರಿಯರಿಂದ ಉತ್ತೇಜನ ದೊರೆತು ಕೆಲಸಕ್ಕೆ ಮತ್ತಷ್ಟು ದಿಕ್ಕು ಸಿಗುತ್ತದೆ. ಹಣಕಾಸಿನಲ್ಲಿ ಸಣ್ಣ ಮೈ ಮರೆವು ಉಂಟಾಗುವುದು.

ಮಕರ

ನವೆಂಬರ್ ತಿಂಗಳ ಕೊನೆಯ ಈ ವಾರ ನಿಧಾನಗತಿಯ ಪ್ರಗತಿಯಾದರೂ ದೀರ್ಘಾವಧಿಯಲ್ಲಿ ಯಶಸ್ಸಿದೆ ಎಂಬ ಸಮಾಧಾನವೂ ಬರಲಿದೆ. ಅನುಭವಿಗಳ ಆಪ್ತರ ಜೊತೆ ನಡೆದ ಸಂಭಾಷಣೆ ನಿಮ್ಮ ಭವಿಷ್ಯಕ್ಕೆ ಮಾರ್ಗದರ್ಶಕ. ಹಣಕಾಸಿನಲ್ಲಿ ಸಂಗ್ರಹಿಸುವ ಮನೋಭಾವ ಬಲಗೊಳ್ಳುತ್ತದೆ.

ಕುಂಭ

ಈ ವಾರ ನೀವಾಗಿಯೇ ಏನನ್ನೂ ಹೇಳಿಕೊಳ್ಳದಿದ್ದರೂ ನಿಮ್ಮ ಕೃತಿಯಿಂದ ಎಲ್ಲವೂ ಗೊತ್ತಾಗಲಿದೆ. ವಿಜ್ಞಾನ, ವಿನ್ಯಾಸ, ಸಂಶೋಧನೆ ಕ್ಷೇತ್ರದವರಿಗೆ ಇದು ಶ್ರೇಷ್ಠವಾದ ವಾರ. ಸ್ವತಂತ್ರವಾಗಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳು. ಹಲವು ಕ್ಷೇತ್ರದವರ ಜೊತೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸುವಿರಿ. ಪಡೆಯಬೇಕಾದರೆ ಬಿಡುವುದೂ ಮುಖ್ಯ. ಇದನ್ನು ಚಾಣಾಕ್ಷತನದಿಂದ ನಿಭಾಯಿಸುವಿರಿ.

ಮೀನ

ಈ ವಾರ ಸಂದರ್ಭದ ಕಾರಣಕ್ಕೆ ಮನೋಭಾವ ಅಲುಗಾಡುವ ಸಂಭವವಿದ್ದರೂ ಅದಕ್ಕೂ ಮಿಗಿಲಾದುದನ್ನು ಊಹಿಸಿಕೊಳ್ಳುವಿರಿ. ಕಲೆ, ಸಾಹಿತ್ಯಗಳ ಕೃಷಿ ಮಸಡುವವರಿಗೆ ಒಳ್ಳೆಯ ಸಮಯ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಅನೂಕೂಲತೆ. ಹಣದಲ್ಲಿ ನಿಧಾನವಾದ ಪ್ರಗತಿ, ನೆಮ್ಮದಿ ಕೂಡ ಜೊತೆಗಿರಲಿದೆ. ಒಂದು ಒಡಂಬಡಿಕೆಯಿಂದ ಮತ್ತೊಂದು ತಪ್ಪಿ ಹೋಗದಂತೆ ಎಚ್ಚರಿಕೆ ಬೇಕು.

ಗೊರಕೆ ಸಮಸ್ಯೆಗೆ ಈ ಮನೆಮದ್ದುಗಳನ್ನು ಬಳಸಿ

ಈ ಸಮಸ್ಯೆ ಇದ್ದವರು ಒಂದು ತುಂಡು ಸೌತೆಕಾಯಿ ತಿಂದರೂ ಅಪಾಯ ತಪ್ಪಿದ್ದಲ್ಲ

TAGGED:#Weekly horoscope #luck #newsics #astrology #ಭವಿಷ್ಯ#ವಾರಭವಿಷ್ಯ
Share This Article
Facebook Twitter Copy Link Print
Previous Article ರಾಶಿ ಯಂತ್ರಕ್ಕೆ ಸೀರೆ ಸಿಲುಕಿ ರೈತ ಮಹಿಳೆ ಸಾವು
Next Article Leopard attack ಪೊಲೀಸ್ ಠಾಣೆಗೇ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ!

Popular Posts

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

You Might Also Like

ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?