Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > BYJU’S ಬೈಜು ರವೀಂದ್ರನ್‌ಗೆ ಅಮೆರಿಕ ಕೋರ್ಟ್ ಶಾಕ್: 9,600 ಕೋಟಿ ರೂ. ಪಾವತಿಗೆ ಆದೇಶ
ದೇಶಪ್ರಮುಖವಿದೇಶ

BYJU’S ಬೈಜು ರವೀಂದ್ರನ್‌ಗೆ ಅಮೆರಿಕ ಕೋರ್ಟ್ ಶಾಕ್: 9,600 ಕೋಟಿ ರೂ. ಪಾವತಿಗೆ ಆದೇಶ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube

newsics.com

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಎಡ್-ಟೆಕ್ ಕಂಪನಿ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಅಮೆರಿಕದ ನ್ಯಾಯಾಲಯವೊಂದು ಭಾರೀ ಶಾಕ್ ನೀಡಿದೆ.

ಕಂಪನಿಯ ಸಾಲದ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಬೈಜು ರವೀಂದ್ರನ್ ಅವರು 1.07 ಬಿಲಿಯನ್ ಡಾಲರ್ (ಅಂದಾಜು 9,600 ಕೋಟಿ ರೂ.) ಪಾವತಿಸಬೇಕೆಂದು ಅಮೆರಿಕದ ದಿವಾಳಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೈಜೂಸ್ ಅಮೆರಿಕದ ಸಾಲದಾತರಿಂದ ಪಡೆದಿದ್ದ 1.2 ಬಿಲಿಯನ್ ಡಾಲರ್ ಸಾಲದ ಹಣವನ್ನು ನಿರ್ವಹಿಸಲು ‘ಬೈಜೂಸ್ ಆಲ್ಫಾ’ ಎಂಬ ವಿಶೇಷ ಘಟಕವನ್ನು ಸ್ಥಾಪಿಸಿತ್ತು. ಆದರೆ, ಈ ಘಟಕದಿಂದ 533 ಮಿಲಿಯನ್ ಡಾಲರ್ ಹಣವನ್ನು ಮಿಯಾಮಿ ಮೂಲದ ‘ಕ್ಯಾಮ್‌ಶಾಫ್ಟ್ ಕ್ಯಾಪಿಟಲ್’ ಎಂಬ ಹೆಡ್ಜ್ ಫಂಡ್‌ಗೆ ಗುಟ್ಟಾಗಿ ವರ್ಗಾಯಿಸಲಾಗಿತ್ತು. ಈ ಹಣದ ವರ್ಗಾವಣೆ ಮತ್ತು ನಂತರದ ಚಲನವಲನಗಳ ಬಗ್ಗೆ ಮಾಹಿತಿ ನೀಡುವಂತೆ ಕೋರ್ಟ್ ಸೂಚಿಸಿದ್ದರೂ, ಬೈಜು ರವೀಂದ್ರನ್ ಅವರು ದಾಖಲೆಗಳನ್ನು ಒದಗಿಸಲು ಅಥವಾ ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದರು. ಈ ಕಾರಣಕ್ಕಾಗಿ ಡೆಲವೇರ್ ಕೋರ್ಟ್‌ನ ನ್ಯಾಯಾಧೀಶ ಬ್ರೆಂಡನ್ ಶಾನನ್ ಅವರು ನವೆಂಬರ್ 20 ರಂದು ಈ ಮಹತ್ವದ ತೀರ್ಪು ನೀಡಿದ್ದಾರೆ.
ಪ್ರಕರಣದ ಪ್ರಮುಖ ಅಂಶವೇ ಈ 533 ಮಿಲಿಯನ್ ಡಾಲರ್ (ಸುಮಾರು 4,800 ಕೋಟಿ ರೂ.) ಹಣವಾಗಿದೆ. ಬೈಜೂಸ್ ಆಲ್ಫಾದಿಂದ ಈ ಹಣವನ್ನು ಮೊದಲು ಕ್ಯಾಮ್‌ಶಾಫ್ಟ್ ಕ್ಯಾಪಿಟಲ್‌ಗೆ ವರ್ಗಾಯಿಸಲಾಯಿತು. ನಂತರ ಅದನ್ನು ‘ಇನ್ಸ್‌ಪಿಲರ್ನ್’ ಎಂಬ ಅಂಗಸಂಸ್ಥೆಗೆ ಮತ್ತು ಅಂತಿಮವಾಗಿ ಕಡಲಾಚೆಯ ಟ್ರಸ್ಟ್‌ವೊಂದಕ್ಕೆ ವರ್ಗಾಯಿಸಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ಹೇಳುತ್ತಿವೆ.
ಸಾಲ ನೀಡಿದವರು ತಮ್ಮ ಹಣವನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದಾಗ, ಉದ್ದೇಶಪೂರ್ವಕವಾಗಿಯೇ ಈ ಆಸ್ತಿಯನ್ನು ಬೈಜೂಸ್ ಆಲ್ಫಾದಿಂದ ಬೇರೆಡೆಗೆ ಸಾಗಿಸಿದೆ ಎಂದು ಆರೋಪಿಸಲಾಗಿದೆ.
ಕಂಪನಿಯ ಹಣಕಾಸು ನಿರ್ವಹಣೆಯಲ್ಲಿ ನಂಬಿಕೆ ದ್ರೋಹ ಮತ್ತು ಹಣದ ದುರ್ಬಳಕೆಗಾಗಿ ನ್ಯಾಯಾಲಯವು ಬೈಜು ರವೀಂದ್ರನ್ ಅವರನ್ನೇ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಿದೆ. 533 ಮಿಲಿಯನ್ ಡಾಲರ್ ಮೂಲ ಮೊತ್ತದ ಜತೆ ನಂಬಿಕೆ ದ್ರೋಹ ಮತ್ತು ಪಿತೂರಿಯ ಆರೋಪದಡಿಯಲ್ಲಿ ಹೆಚ್ಚುವರಿಯಾಗಿ 540.6 ಮಿಲಿಯನ್ ಡಾಲರ್ ದಂಡವನ್ನೂ ವಿಧಿಸಲಾಗಿದೆ. ಒಟ್ಟಾರೆಯಾಗಿ ಅವರ ಹೊಣೆಗಾರಿಕೆ 1.07 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.
ನ್ಯಾಯಾಲಯ ಆದೇಶ ನೀಡಿದಾಕ್ಷಣ ಬೈಜು ರವೀಂದ್ರನ್ ಈ ಹಣವನ್ನು ತಕ್ಷಣವೇ ಪಾವತಿಸಬೇಕೆಂದಿಲ್ಲ. ಸಾಲ ನೀಡಿದರೂ ರವೀಂದ್ರನ್‌ ಅವರ ಆಸ್ತಿ ಇರುವ ದೇಶಗಳಲ್ಲಿ (ಉದಾಹರಣೆಗೆ ಭಾರತ ಅಥವಾ ದುಬೈ) ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿ, ಅಮೆರಿಕದ ಈ ತೀರ್ಪನ್ನು ಆಧಾರವಾಗಿಟ್ಟುಕೊಂಡು ಹಣ ವಸೂಲಿಗೆ ಪ್ರಯತ್ನಿಸಬೇಕಾಗುತ್ತದೆ. ಆದರೂ, ಜಾಗತಿಕ ಮಟ್ಟದಲ್ಲಿ ಬೈಜು ರವೀಂದ್ರನ್ ಅವರ ವರ್ಚಸ್ಸಿಗೆ ಮತ್ತು ಬೈಜೂಸ್ ಕಂಪನಿಯ ಭವಿಷ್ಯಕ್ಕೆ ಇದು ಭಾರೀ ಪೆಟ್ಟು ನೀಡಿದೆ.

ಇನ್ಮುಂದೆ ಟ್ರೂಕಾಲರ್ ಅಪ್ಲಿಕೇಶನ್‌ಗಳನ್ನು ಬಳಸಬೇಕಾಗಿಲ್ಲ – ಯಾರಾದ್ರು ಕಾಲ್ ಮಾಡಿದ್ರೆ ಅವರ ಆಧಾರ್ ಹೆಸರು ಕಾಣಿಸುತ್ತೆ

T20 World Cup 2026: ಫೆಬ್ರವರಿ 15 ರಂದು ಭಾರತ vs ಪಾಕಿಸ್ತಾನ್ ಮುಖಾಮುಖಿ

TAGGED:600 croreUS court shocks Byju Raveendran: Orders payment of Rs 9
Share This Article
Facebook Twitter Copy Link Print
Previous Article ಸಿಎಂ ಪಟ್ಟಕ್ಕೇರಲು ಡಿಕೆಶಿ ಹೊಸ ದಾಳ
Next Article ಭಾರತವು ಯುನಾನ್ , ಮಿಸ್ರ್ ಮತ್ತು ರೋಮ್‌ನಂತಹ ಸಾಮ್ರಾಜ್ಯಗಳನ್ನು ಮೀರಿಸಿದೆ – RSS ಮುಖ್ಯಸ್ಥ ಮೋಹನ್ ಭಾಗವತ್‌

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?