Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು, ಹಿಂದೂಗಳಿಲ್ಲದೆ ಜಗತ್ತು ಅಸ್ತಿತ್ವದಲ್ಲಿಲ್ಲ ಎಂದು ಒತ್ತಿ ಹೇಳಿದರು.
ಮಣಿಪುರ ರಾಜ್ಯಕ್ಕೆ ಕಳೆದ 2 ವರ್ಷಗಳಲ್ಲಿ ಇದೇ ಮೊದಲ ಭಾರಿಗೆ ಮೋಹನ್ ಭಾಗವತ್ ಭೇಟಿ ನೀಡಿದ್ದಾರೆ
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂ ಸಮಾಜವು ಅಮರವಾಗಿದೆ ಎಂದು ಪ್ರತಿಪಾದಿಸಿದರು, ಭಾರತವು ಯುನಾನ್ (ಗ್ರೀಸ್), ಮಿಸ್ರ್ (ಈಜಿಪ್ಟ್) ಮತ್ತು ರೋಮ್‌ನಂತಹ ಸಾಮ್ರಾಜ್ಯಗಳನ್ನು ಮೀರಿಸಿದೆh ಎಂದು ಹೇಳಿದ್ದಾರೆ.
ಜಗತ್ತಿನ ಪ್ರತಿಯೊಂದು ರಾಷ್ಟ್ರವು ಎಲ್ಲಾ ರೀತಿಯ ಸನ್ನಿವೇಶಗಳನ್ನು ಕಂಡಿದೆ. ಯುನಾನ್ (ಗ್ರೀಸ್), ಮಿಸ್ರ್ (ಈಜಿಪ್ಟ್) ಮತ್ತು ರೋಮಾ, ಎಲ್ಲಾ ನಾಗರಿಕತೆಗಳು ಭೂಮಿಯ ಮುಖದಿಂದ ನಾಶವಾದವು. ನಮ್ಮ ನಾಗರಿಕತೆಯಲ್ಲಿ ನಾವು ಇನ್ನೂ ಇಲ್ಲಿದ್ದೇವೆ ಎಂಬ ಅಂಶವಿದೆ ಎಂದು ಮೋಹನ್ ಭಾಗವತ್ ಹೇಳಿದರು.