Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಗ್ರಾಹಕರಿಗೆ ಒಂದು ಮಹತ್ವದ ಮತ್ತು ಎಚ್ಚರಿಕೆಯ ಸಂದೇಶವನ್ನ ರವಾನಿಸಿದೆ.
ಹೌದು, ಎಸ್‌ಬಿಐ ತನ್ನ ಫೇಮಸ್ ಆಗಿದ್ದ ‘ಎಂಕ್ಯಾಶ್’ ಸೇವೆಯನ್ನ ಡಿಸೆಂಬರ್ 1 ರಿಂದ ಶಾಶ್ವತವಾಗಿ ನಿಲ್ಲಿಸ್ತಿದೆ. ಇನ್ಮುಂದೆ ಆನ್‌ಲೈನ್ ಎಸ್‌ಬಿಐ ಆಗಲಿ ಅಥವಾ ಯೋನೋ ಲೈಟ್ ಆ್ಯಪ್ ಆಗಲಿ, ಅಲ್ಲಿ ಈ ಫೀಚರ್ ಸಿಗೋದಿಲ್ಲ. ಹಾಗಾಗಿ ಗ್ರಾಹಕರು ತಕ್ಷಣವೇ ಪರ್ಯಾಯ ದಾರಿಗಳನ್ನ ನೋಡ್ಕೊಳ್ಳೋದು ಒಳ್ಳೆಯದು.
ಇನ್ನು ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅನ್ನ ಇನ್ನಷ್ಟು ಸ್ಟ್ರಾಂಗ್ ಮತ್ತು ಸೇಫ್ ಮಾಡೋಕೆ ಎಸ್‌ಬಿಐ ಈ ನಿರ್ಧಾರ ತಗೊಂಡಿದೆ. ಅಲ್ಲದೇ, ನವೆಂಬರ್ 30 ರ ನಂತರ ನೀವು ಎಷ್ಟೇ ಟ್ರೈ ಮಾಡಿದ್ರೂ ಎಂಕ್ಯಾಶ್ ಮೂಲಕ ನಯಾಪೈಸೆ ಕಳಿಸೋಕೆ ಆಗಲ್ಲ. ನೀವು ತಕ್ಷಣವೇ ಯುಪಿಐ (UPI) ಕಡೆ ಶಿಫ್ಟ್ ಆಗ್ಲೇಬೇಕು, ಇಲ್ಲಾಂದ್ರೆ ಅರ್ಜೆಂಟ್ ಟೈಮಲ್ಲಿ ದುಡ್ಡು ಕಳಿಸೋಕೆ ಆಗದೆ ಪೇಚಿಗೆ ಸಿಕ್ಕಿಕೊಳ್ತೀರಾ ಅಂತ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ವಾರ್ನಿಂಗ್ ಕೊಟ್ಟಿದೆ.
ಭೀಮ್ ಎಸ್‌ಬಿಐ ಪೇ (BHIM SBI Pay), ಯುಪಿಐ ಆ್ಯಪ್, ಐಎಂಪಿಎಸ್ (IMPS) ಅಥವಾ ನೆಫ್ಟ್ (NEFT) ಮೂಲಕ ಆರಾಮಾಗಿ ದುಡ್ಡು ಕಳಿಸಬಹುದು. ಇವು ಹಳೆ ಮೆಥಡ್‌ಗಿಂತ ಸೂಪರ್ ಫಾಸ್ಟ್ ಮತ್ತು ಫುಲ್ ಸೇಫ್.
ಈ ಭೀಮ್ ಎಸ್‌ಬಿಐ ಪೇ (BHIM SBI Pay) ಆ್ಯಪ್ ಬಳಸೋದು ತುಂಬಾನೇ ಸಿಂಪಲ್. ಬ್ಯಾಂಕ್‌ಗೆ ಹೋಗೋದ್ ಬೇಡ, ಕ್ಯೂ ನಿಲ್ಲೋದ್ ಬೇಡ. ಆ್ಯಪ್ ಓಪನ್ ಮಾಡಿ ಲಾಗಿನ್ ಆಗಿ ‘ಪೇ’ ಬಟನ್ ಒತ್ತಿ. ಅಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಅಕೌಂಟ್ ನಂಬರ್ ಹಾಕಿ ದುಡ್ಡು ಕಳಿಸಿ. ಲಕ್ಷಾಂತರ ಜನ ಈಗ ಆಲ್ರೆಡಿ ಇದನ್ನೇ ಬಳಸ್ತಿದ್ದಾರೆ ಮತ್ತು ಇದು ತುಂಬಾ ಈಸಿಯಾಗಿದೆ.
ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; 4 ಹೊಸ ಕಾರ್ಮಿಕ ಕಾನೂನು ಜಾರಿ, ಏನೆಲ್ಲಾ ಬದಲಾವಣೆ?