Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಿತ್ರ ನಟಿಯರು, ಮಾಡೆಲ್ಗಳು ಎಂದರೆ ಹಾಗೆ ಅಲ್ವೆ? ಫಂಕ್ಷನ್ಗಳಿಗೆ ಹೋಗುವಾಗ, ರ್ಯಾಂಪ್ ಮೇಲೆ ನಡೆಯುವಾಗ, ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡುವಾಗ ಅವರ ಭಾರಿ ಡ್ರೆಸ್ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು.ಎಡವಿ ಬೀಳುವ ಹಲವು ಮಾಡೆಲ್ ಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.ಇಂತಹದ್ದೇ ವಿಡಿಯೋ ಒಂದು ಇದೀಗ ಮತ್ತೆ ವೈರಲ್ ಆಗುತ್ತಿದೆ.
ನವೆಂಬರ್ 19 ರಂದು ಹೆನ್ರಿ ಆರೆಂಜ್ ಬಣ್ಣದ ಗೌನ್ ಮತ್ತು ಹೈ ಹೀಲ್ಸ್ ಧರಿಸಿ ರನ್‌ವೇಯಲ್ಲಿ ನಡೆಯುತ್ತಿದ್ದಾಗ ವೇದಿಕೆಯಿಂದ ಆಯಾ ತಪ್ಪಿ ಬಿದಿದ್ದಾರೆ.
ಈ ಘಟನೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 2025 ಸ್ಪರ್ಧೆಯಲ್ಲಿ ಗೌನ್ ಸ್ಪರ್ಧೆಯ ಸಮಯದಲ್ಲಿ ನಡೆದಿದೆ. ನಂತರ ಅವರನ್ನು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಸಣ್ಣಪುಟ್ಟ ಗಾಯಗಳಾಗಿವೆ. ಯಾವುದೇ ರೀತಿಯ ತೀವ್ರವಾದ ಏಟೇನು ಆಗಿಲ್ಲ ಎಂದು ತಿಳಿದುಬಂದಿದೆ.
ಗೇಬ್ರಿಯೆಲ್ ಹೆನ್ರಿ ಜಮೈಕಾದ ನೇತ್ರಶಾಸ್ತ್ರಜ್ಞರಾಗಿದ್ದು, ಇವರು 2025 ರ ಮಿಸ್ ಯೂನಿವರ್ಸ್ ಜಮೈಕಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಥೈಲ್ಯಾಂಡ್‌ನಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ ಇವರು ವೆಸ್ಟ್ ಇಂಡೀಸ್‌ನ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
https://www.instagram.com/reel/DRPdoV_iYvk/?igsh=MW0xd3Q4ZjFwaHJzOA==