Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಮುಗಿಸಿದ ವಧುವೊಬ್ಬಳು ವರನೊಂದಿಗೆ ವೇದಿಕೆಯಲ್ಲೇ ಸೊಗಸಾಗಿ ಡಾನ್ಸ್ ಮಾಡಿ ನಂತರ ರಾತ್ರೋರಾತ್ರಿ ಎಸ್ಕೇಪ್ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಘಟನೆ ನಡೆದಿದೆ.
ಮೂರು ತಿಂಗಳ ಹಿಂದಷ್ಟೇ ವರ ಪಲ್ಲವಿ ಹಾಗೂ ವಧು ಸುನೀಲ್ ಕುಮಾರ್ ಗೌತಮ್ ಮಧ್ಯೆ ಮದುವೆ ನಿಶ್ಚಯಗೊಂಡಿತ್ತು. ಮಂಗಳವಾರ ರಾತ್ರಿ ವರ ಅಂದಾಜು 90ರಷ್ಟು ಜನರಿದ್ದ ತನ್ನ ದಿಬ್ಬಣದೊಂದಿಗೆ ವಧುವಿನ ಮನೆಯಾದ ಬಾರಬಂಕಿಗೆ ಆಗಮಿಸಿದ್ದಾನೆ. ಅಲ್ಲಿ ಮದುವೆ ನಡೆದಿದೆ. ವಧು ಹಾಗೂ ವರ ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ. ಹಾಗೂ ರಾತ್ರಿಯೇ ಮದುವೆಯೆಲ್ಲಾ ಪೂರ್ಣಗೊಂಡಿದೆ. ವಧು ಹಾಗೂ ವರ ಇಬ್ಬರು ಸೇರಿ ಮದುವೆಯ ನಂತರ ವೇದಿಕೆಯಲ್ಲೇ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ.
ಆದರೆ ಮದುವೆ ಎಲ್ಲಾ ಮುಗಿದು ಬುಧವಾರ ಬೆಳಗ್ಗೆ ವಧುವನ್ನು ವರನ ಮನೆಗೆ ಕಳುಹಿಸಿಕೊಡುವ ವೇಳೆ ವಧು ಪಲ್ಲವಿ ಮನೆಯಿಂದ ಎಸ್ಕೇಪ್ ಆಗಿರುವುದು ಬೆಳಕಿಗೆ ಬಂದಿದೆ. ಮೊದಲಿಗೆ ಅವರು ಆಕೆ ಮನೆಯ ಸಮೀಪವೇ ಅತ್ತಿತ ಎಲ್ಲಾದರು ಇರಬಹುದು ಎಂದು ಭಾವಿಸಿದ್ದಾರೆ. ಆದರೆ ಒಂದು ಗಂಟೆಯಾದರು ತೀವ್ರವಾಗಿ ಹುಡುಕಾಟ ನಡೆಸಿದ ನಂತರ ವೂ ಆಕೆ ಸಿಗದೇ ಹೋದಾಗ ಎರಡು ಕುಟುಂಬಗಳು ಆತಂಕಗೊಂಡಿವೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಹುಡುಕಿದರು ವಧು ಮಾತ್ರ ಸಿಕ್ಕಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ವರನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ವಧುವಿನ ಕುಟುಂಬದವರ ವಿರುದ್ಧ ಅವರು ಕೇಸ್ ದಾಖಲಿಸಿದ್ದಾರೆ.
https://www.newsics.com/2025/11/21/actress-keerthy-suresh-raises-voice-against-misuse-of-ai/