Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಬಿಗ್ ಬಾಸ್ ಸ್ಪರ್ಧೆ ವೇಳೆ ರಿಷಾ ಬಟ್ಟೆಗಳನ್ನು ವಾಷ್ ರೂಂ ನಲ್ಲಿ ಇಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ಸೀಸನ್ ಕನ್ನಡ 12ರ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ದೂರು ದಾಖಲಾಗಿದೆ. ರಾಜ್ಯ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ಬೆಂಗಳೂರು ಕಮಿಷನರ್ ಗೆ ಪತ್ರ ಬರೆದಿದೆ.
ಗಿಲ್ಲಿ ನಟನ ವಿರುದ್ಧ ಕಲಾವಿದೆ ಕುಶಲ ಎಂಬುವವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಮಹಿಳಾ ಆಯೋಗದಿಂದ ಬೆಂಗಳೂರು ಕಮಿಷನರ್ ಗೆ ದೂರು ಅರ್ಜಿಯನ್ನ ನಿಯಾಮಾನುಸಾರ ಪರಿಶೀಲಿಸಿ. ಕೈಗೊಂಡ ಕ್ರಮದ ವರದಿಯನ್ನ ಆಯೋಗಕ್ಕೆ ಕೊಡುವಂತೆ ಪತ್ರ ಬರೆಯಲಾಗಿದೆ.
ಕಲರ್ಸ್ ಕನ್ನೆ ಚಾನಲ್ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗಿಲ್ಲಿ ಎಂಬ ಹಾಸ್ಯ ನಟನು ರಿಷ ಎಂಬ ಹೆಣ್ಣು ಮಗಳ ಉಡುಪನ್ನು ಬಾತ್ ರೂಮಿನಿಂದ ತಂದು ಹೊರ ಹಾಕಿರುವುದಾಗಿ ತಿಳಿಸಿರುತ್ತಾರೆ. ಹೆಣ್ಣು ಮಕ್ಕಳ ಉಡುಪನ್ನು ಮುಟ್ಟುವ ಅಧಿಕಾರ ನೀಡಿದ್ಯಾರು? ಇದರಿಂದ ಸಮಾಜಕ್ಕೆ ಯಾವ ರೀತಿ ಸಂದೇಶವನ್ನು ಪ್ರಸಾರ ಮಾಡಲು ಹೊರಟಿದೆ? ಕಲರ್ಸ್ ಶೋವನ್ನು ನಿಲ್ಲಿಸಬೇಕೆಂದು ಆಯೋಗದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿರುತ್ತಾರೆ.
ಅರ್ಜಿದಾರರ ಅರ್ಜಿಯಲ್ಲಿನ ವಿಷಯದ ಕುರಿತು ನಿಯಮಾನುಸಾರ ಪರಿಶೀಲಿಸಿ. ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಯವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಮಹಿಳಾ ಆಯೋಗಕ್ಕೆ ಕಳುಹಿಸಿ ಕೊಡುವಂತೆ ಮನವಿ ಮಾಡಲಾಗಿದೆ.
ಮೇಕಪ್ ಇಲ್ಲದೆ ಮುಖ ಸುಂದರವಾಗಿ ಕಾಣಿಸಲು ಜಸ್ಟ್ ಈ ರೀತಿ ಮಾಡಿ