Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಬಿಗ್ ಬಾಸ್ ಮನೆಗೆ ಸಂಜನಾ ಗಲ್ರಾನಿ ಎಂಟ್ರಿ ಕೊಟ್ಟಾಗಿನಿಂದ ಈವರೆಗೂ ಚೆನ್ನಾಗಿ ಆಟ ಆಡುತ್ತಲೇ ಬರುತ್ತಿದ್ದಾರೆ. ಮನೆ ಹೊರಗೆ ಮಾತ್ರವಲ್ಲ ಬಿಗ್ ಬಾಸ್ ಮನೆ ಒಳಗೂ ಎಲ್ಲರೂ ಇವರನ್ನು ಮೆಚ್ಚಿಕೊಂಡಿದ್ದಾರೆ. ಇಲ್ಲಿವರೆಗೆ ಸಂಜನಾ ಪ್ರೇಕ್ಷಕರ ಮತಗಳಿಂದ ಉಳಿಯುತ್ತಾ ಬಂದಿದ್ದಾರೆ. ನಿರೂಪಕ ನಾಗಾರ್ಜುನ ಪ್ರತಿ ವಾರ ಬಂದಾಗಲೂ ಸಂಜನಾ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ಮನೆಯಲ್ಲಿ ಎಲ್ಲರೊಂದಿಗೆ ಮೋಜು ಮಾಡುವ ಸಂಜನಾಗೆ ಈ ವಾರ ಮನೆಯಲ್ಲಿ ಅನ್ಯಾಯವಾಗಿದೆ ಎಂದು ಹೊರಗೆ ಮಾತು ಕೇಳಿ ಬರುತ್ತಿದೆ .
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಫ್ಯಾಮಿಲಿ ವೀಕ್ ಅನ್ನು ಆಯೋಜಿಸಲಾಗಿದೆ ಎಂದು ಮನೆ ಮಂದಿ ಹಾಗೂ ಹೊರಗಿನ ಬಿಗ್ ಬಾಸ್ ವೀಕ್ಷಕರು ಕಾಯುತ್ತಿದ್ದರು . ಆದ್ರೆ ಶನಿವಾರದ ಸಂಚಿಕೆಯಲ್ಲಿ, ನಾಗಾರ್ಜುನ ಅವರು ಡಬಲ್ ಎಲಿಮಿನೇಷನ್ ಎಂದು ಹೇಳಿದರು, ನಂತರ ಮನೆಯಲ್ಲಿ ಯಾರಿಗೆ ಯಾರು ಹೆಚ್ಚು ಬೆಂಬಲ ನೀಡುತ್ತಾರೆ ಅವರು ಸೇಫ್ ಆಗುತ್ತಾರೆ ಎಂದು ನಾಗಾರ್ಜುನ ಹೇಳಿದರು. ಮನೆಯ ಅನೇಕರು ಸಂಜನಾದಿಂದಾಗಿ ನಮ್ಮ ಆಟ ಕುಸಿಯುತ್ತದೆ ಎಂದು ಹೇಳುತ್ತಾರೆ . ನಂತರ ಸಂಜನಾ ಮೇಲೆ ಒಂದು ಬಾಕ್ಸ್ ಬೀಳುತ್ತದೆ, ಅದರಲ್ಲಿ ‘ನೋ ಫ್ಯಾಮಿಲಿ ವೀಕ್’ ಎಂದು ಬರೆದಿತ್ತು. ಅದನ್ನು ನೋಡಿದಾಗ ಸಂಜನಾ ಅಸಮಾಧಾನಗೊಳ್ಳುತ್ತಾರೆ.
ಸರ್, ನಾನು ಮನೆಗೆ ಹೋಗುತ್ತೇನೆ, ಸರ್ ನನ್ನಿಂದ ಆಗುತ್ತಿಲ್ಲ, ನಾನು ಸಾಯುತ್ತೇನೆ.. ಇಲ್ಲ ಸರ್, ನಾನು ಹೋಗುತ್ತೇನೆ.. ನನಗೆ ಈ ಆಟ ತುಂಬಾ ಇಷ್ಟ, ಹಾಗೆಯೇ ಪ್ರತಿ ವಾರ ನಿಮ್ಮನ್ನು ನೋಡುವುದು ನನಗೆ ತುಂಬಾ ಇಷ್ಟ, ಆದರೆ ನಾನು ಇನ್ನು ಮುಂದೆ ಇಲ್ಲಿ ಇರಲು ಸಾಧ್ಯವಿಲ್ಲ, ಸರ್.. ನಾನು ಹೋಗುತ್ತೇನೆ.. ನಾನು ದಿನಕ್ಕೆ ಆರು ಬಾರಿ ಅಳುತ್ತಿದ್ದೇನೆ.. ನನ್ನಿಂದ ಆಗುತ್ತಿಲ್ಲ ಸರ್ ದಯವಿಟ್ಟು, ನಾನು ಈ ಕಾರ್ಯಕ್ರಮವನ್ನು ಗೌರವಿಸುತ್ತೇನೆ.. ನಾನು ಆಟವನ್ನು ನನಗಿಂತ ಹೆಚ್ಚು ಪ್ರೀತಿಸುತ್ತಿದ್ದೆ.. ಆದರೆ, ಇನ್ನು ನಾನು ಇಲ್ಲಿ ಇರಲು ಸಾಧ್ಯವಿಲ್ಲ.. ನಾನು ಇಲ್ಲಿ ಯಾರಿಗೂ ಅಷ್ಟು ಕೆಟ್ಟದ್ದನ್ನು ಮಾಡಿಲ್ಲ ಸರ್, ಎಂದು ಕಣ್ಣೀರು ಹಾಕುತ್ತಾರೆ.
ಇದು ನನ್ನ ನಿರ್ಧಾರವಲ್ಲ.. ಮನೆಯವರ ನಿರ್ಧಾರ. ನಾನು ಏನು ಮಾಡಲು ಸಾಧ್ಯವಿಲ್ಲ ಎಂದು ನಾಗ್ ಹೇಳುತ್ತಾರೆ. ನನ್ನನ್ನು ಮನೆಗೆ ಕಳುಹಿಸಿ ಸರ್.. .. ಕ್ಷಮಿಸಿ ಸರ್.. ನಾನು ಇದನ್ನು ದುರಹಂಕಾರದಿಂದ ಹೇಳುತ್ತಿಲ್ಲ ಸರ್ ಎಂದು ಸಂಜನಾ ಬಿಕ್ಕಿ ಬಿಕ್ಕಿ ಅಳುತ್ತಾರೆ . ಆಗ , ಕಲ್ಯಾಣ್ ಮತ್ತು ಭರಣಿ ಎದ್ದು, ನಮ್ಮ ಕುಟುಂಬದ ವಾರವನ್ನು ತ್ಯಾಗ ಮಾಡಿ ಸಂಜನಾಗೆ ಆ ಅವಕಾಶ ನೀಡುತ್ತೇವೆ ಎಂದು ಹೇಳಿದರು. ಆದರೆ ನಾಗ್ ಅದಕ್ಕೆ ಒಪ್ಪಲಿಲ್ಲ.
ಈ ಬಗ್ಗೆ ಬಿಗ್ ಬಾಸ್ ವೀಕ್ಷಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದು, ತಮ್ಮ ಟಿಆರ್ ಪಿ ಗೋಸ್ಕರ ಈ ರೀತಿಯಾಗಿ ಮಾಡುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಯಾರೂ ಗಂಡಸ್ರೇ ಅನ್ಸಲ್ಲ,ಅಂತಾ ಜಾಹ್ನವಿ ಹೇಳಿದ್ಯಾಕೆ?; ಸುದೀಪ್ ಕಕ್ಕಾಬಿಕ್ಕಿಯಾಗಿದ್ಯಾಕೆ?