Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಂಗಳೂರು: ಉಳ್ಳಾಲದ ಕುಂಪಲ ಬೈಪಾಸ್ ಬಳಿ ಬೀದಿ ನಾಯಿಯೊಂದು ವ್ಯಕ್ತಿಯನ್ನು ಬರ್ಬರವಾಗಿ ಅಟ್ಟಾಡಿಸಿ ಕೊಂದು, ಕಣ್ಣುಗುಡ್ಡೆಯನ್ನೇ ಕಿತ್ತು ಹಾಕಿರುವ ಘಟನೆ ನಡೆದಿದೆ
ದಯಾನಂದ್(54 ) ಮೃತಪಟ್ಟ ವ್ಯಕ್ತಿ. ಬೀದಿ ನಾಯಿಯನ್ನು ಪುರಸಭೆ ಸಿಬ್ಬಂದಿ ಹಿಡಿದಿದ್ದಾರೆ.
ಬೆಳಗಿನ ಜಾವ ಅಂಗಡಿಯೊಂದರ ಮುಂಭಾಗ ದಯಾನಂದ್ ಇದ್ದಿದ್ದನ್ನು ಅಂಗಡಿಯ ಮಾಲೀಕ ವಿನೋದ್ ನೋಡಿದ್ದಾರೆ. ಬೆಳಗ್ಗೆ 7.30 ರ ಸುಮಾರಿಗೆ ಅಂಗಡಿಯೊಂದರ ಬಳಿ ರಕ್ತಸಿಕ್ತವಾಗಿದ್ದ ಕಣ್ಣುಗುಡ್ಡೆ ಕಂಡುಬಂದಿದೆ. ಮತ್ತಷ್ಟು ಹುಡುಕಾಟ ಪರಿಶೀಲನೆ ನಡೆಸಿದಾಗ ಅಂಗಡಿ ಸಮೀಪದ ಮನೆಯೊಂದರ ಬಳಿ ದಯಾನಂದ್ ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅದರ ಪಕ್ಕದಲ್ಲಿ ನಾಯಿ ಕೂಡ ಕಂಡುಬಂದಿದ್ದು, ನಾಯಿ ದಾಳಿ ಮಾಡಿ ಕೊಂದು ಹಾಕಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.