Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವಿನಯ್ ರಾಜ್‌ಕುಮಾರ್ ನಟನೆಯ ಒಂದು ಸರಳ ಪ್ರೇಮ ಕಥೆ ಇದೀಗ ಜೀ5 ಒಟಿಟಿಯಲ್ಲೂ ಪ್ರಸಾರ ಕಾಣಲಿದೆ.
ಸಿಂಪಲ್ ಸುನಿ ನಿರ್ದೇಶನದ ಸರಳ ಮತ್ತು ವಿರಳವಾದ ಪ್ರೇಮಕಥೆಯನ್ನು ಹೊಂದಿರುವ ಚಿತ್ರ ಕಳೆದ ವರ್ಷ ತೆರೆ ಕಂಡಿತ್ತು. ಬಳಿಕ ಅಮೆಜಾನ್ ಒಟಿಟಿಯಲ್ಲಿಯೂ ಲಭ್ಯವಿತ್ತು. ಇದೇ ತಿಂಗಳ 21ರಿಂದ ಜೀ5 ಒಟಿಟಿಯಲ್ಲೂ ಬರಲಿದೆ.
ಒಂದು ಸರಳ ಪ್ರೇಮಕಥೆ’ ಸಿನಿಮಾ 2024ರ ಫೆಬ್ರವರಿ 8ರಂದು ಬಿಡುಗಡೆ ಆಗಿತ್ತು. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು.
ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್ ಒಳಗೊಂಡ ಈ ಸಿನಿಮಾಗೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಸಿಕ್ಕಿತ್ತು. ಒಟಿಟಿ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಮೆಚ್ಚಿಕೊಳ್ಳುವ ನಿರೀಕ್ಷೆ ಇದೆ.
ನಾಯಕನಾಗಿ ವಿನಯ್, ನಾಯಕಿಯರಾಗಿ ಸ್ವಾತಿಷ್ಠ, ಮಲ್ಲಿಕಾ ಸಿಂಗ್ ನಟಿಸಿದ್ದಾರೆ. ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದಾರೆ. ಹಾಡುಗಳ ಮೂಲಕ ಗಮನ ಸೆಳೆದ ಈ ಚಿತ್ರದಲ್ಲಿ ಸಂಗೀತದ ಕುರಿತು ಕಹಾನಿ ಇದೆ.
ರಾಜೇಶ್ ನಟರಂಗ, ಸಾಧುಕೋಕಿಲ, ಅರುಣಾ ಬಾಲರಾಜ್ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.