Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Gold info ಬಂಗಾರ ಖರೀದಿ ಪ್ಲ್ಯಾನ್ ಮುಂದೂಡಲು ತಜ್ಞರ ಸಲಹೆ, ಚಿನ್ನದ ದರ ಭಾರೀ ಕುಸಿತ ನಿರೀಕ್ಷೆ
ಕರ್ನಾಟಕದೇಶಪ್ರಮುಖ

Gold info ಬಂಗಾರ ಖರೀದಿ ಪ್ಲ್ಯಾನ್ ಮುಂದೂಡಲು ತಜ್ಞರ ಸಲಹೆ, ಚಿನ್ನದ ದರ ಭಾರೀ ಕುಸಿತ ನಿರೀಕ್ಷೆ

Share
2 Min Read
SHARE

newsics.com

ಸದ್ಯಕ್ಕೆ ಬಂಗಾರ ಖರೀದಿಸುವ ಪ್ಲಾನ್‌ನಲ್ಲಿದ್ದರೆ ಸ್ವಲ್ಪ ಸಮಯ ಮುಂದೂಡಿ. ಏಕೆಂದರೆ ದೊಡ್ಡ ಮಟ್ಟದ ಕುಸಿತ ಕಾಣಲಿದ್ದೇವೆ ಎಂದು ತಜ್ಞರು ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಸಂಭವಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ತಜ್ಞರು ಹೇಳುವಂತೆ ಮುಂದಿನ ವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಾಣುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಾರಣ, ಹೂಡಿಕೆದಾರರು ಅಮೆರಿಕಾದ ಹಣದುಬ್ಬರ ವರದಿ, ಫೆಡರಲ್ ರಿಸರ್ವ್ ನೀತಿ ಮತ್ತು ಚೀನಾದ ಆರ್ಥಿಕ ದತ್ತಾಂಶಗಳನ್ನು ಗಮನಿಸುತ್ತಿರುವ ಈ ಹಿನ್ನೆಲೆ ಈ ಬದಲಾವಣೆಯಾಗುವ ಸಾಧ್ಯತೆ ಇದೆ.

ಒಂದು ವೇಳೆ ಬಡ್ಡಿ ದರಗಳು ಕಡಿಮೆಯಾಗಿ ಡಾಲರ್ ದುರ್ಬಲಗೊಂಡರೆ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜೆಎಂ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ ಇಬಿಜಿ-ಕಮೋಡಿಟೀಸ್ ಮತ್ತು ಕರೆನ್ಸಿ ರಿಸರ್ಚ್‌ನ ಉಪಾಧ್ಯಕ್ಷ ಪ್ರಣವ್ ಮಿರೇ ಅವರ ಪ್ರಕಾರ, “ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕುಸಿತ ಕಾಣಬಹುದು ಅಥವಾ ಸೀಮಿತ ವ್ಯಾಪ್ತಿಯಲ್ಲಿ ಇರಬಹುದು” ಎಂದು ಹೇಳಿದ್ದಾರೆ. ಯುಎಸ್ ಹಣದುಬ್ಬರ ವರದಿ, ಸುಂಕ ವಿವಾದದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ, ಫೆಡ್ ಅಧಿಕಾರಿಗಳ ಹೇಳಿಕೆ ಮತ್ತು ಚೀನಾದ ಆರ್ಥಿಕ ದತ್ತಾಂಶಗಳ ಮೇಲೆ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಕಳೆದ ವಾರ ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದ್ದರೂ, ಸದ್ಯ ಚಿನ್ನವು ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿದೆ. ಬಲಿಷ್ಠ ಡಾಲರ್ ಮತ್ತು ದುರ್ಬಲ ಭೌತಿಕ ಬೇಡಿಕೆಯಿಂದಾಗಿ ಅದರ ಏರಿಕೆ ನಿಂತಿದೆ ಎನ್ನಲಾಗಿದೆ. ಆದರೆ ಚಿಲ್ಲರೆ ಖರೀದಿದಾರರು, ಹೂಡಿಕೆದಾರರು ಮತ್ತಷ್ಟು ಬೆಲೆ ಇಳಿಕೆಯ ನಿರೀಕ್ಷೆ ಇಟ್ಟುಕೊಂಡಿರುವ ಹಿನ್ನೆಲೆ ಸದ್ಯಕ್ಕೆ ಖರೀದಿಯಿಂದ ದೂರ ಉಳಿದಿದ್ದಾರೆ.

ಯುಎಸ್ ಕಾರ್ಮಿಕ ಮಾರುಕಟ್ಟೆಯಲ್ಲಾದ ಕುಸಿತದ ವರದಿಗಳು, ಸುರಕ್ಷಿತ ಹೂಡಿಕೆಯ ಬೇಡಿಕೆ, ಬಡ್ಡಿ ದರ ಕಡಿತದ ನಿರೀಕ್ಷೆಗಳು ಮತ್ತು ಕೇಂದ್ರ ಬ್ಯಾಂಕಿನ ಖರೀದಿಗಳು ಭವಿಷ್ಯದಲ್ಲಿ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ಅಮೆರಿಕಾದಲ್ಲಿ ಫೆಡ್‌ ಬಡ್ಡಿ ದರಗಳ ಕಡಿತ ಮುಂದುವರಿದರೆ ಮತ್ತು ಡಾಲರ್ ದುರ್ಬಲಗೊಂಡರೆ ಚಿನ್ನದ ಬೆಲೆ ಮತ್ತೆ ಏರಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಚಿನ್ನದ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಸುರಕ್ಷಿತ ಆಸ್ತಿಯಾಗಲಿದೆ ಎನ್ನಲಾಗಿದೆ.

ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇದೆ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವವರು ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿಕೊಂಡು ಹೂಡಿಕೆ ಮಾಡಿದ್ರೆ ಉತ್ತಮ ಎಂದು ಹೇಳಲಾಗಿದೆ.

ಎಲ್ಲಾ ಮಹಿಳಾ ಒಲಿಂಪಿಕ್ ಸ್ಪರ್ಧೆಗಳಿಂದ ಮಂಗಳಮುಖಿಯರನ್ನ ನಿಷೇಧಿಸಲು ನಿರ್ಧಾರ

ಖಾಸಗಿ ಆಸ್ಪತ್ರೆಯ ಹೊರಗಡೆ 21 ವರ್ಷದ ಮಾಡೆಲ್‌ಅನ್ನು ಎಸೆದು ಪ್ರೇಮಿ ಪರಾರಿ

TAGGED:Experts advise postponing gold purchase plansgold prices expected to fall sharply
Share This Article
Facebook Twitter Copy Link Print
Previous Article ಖಾಸಗಿ ಆಸ್ಪತ್ರೆಯ ಹೊರಗಡೆ 21 ವರ್ಷದ ಮಾಡೆಲ್‌ಅನ್ನು ಎಸೆದು ಪ್ರೇಮಿ ಪರಾರಿ
Next Article ದೆಹಲಿ ಸ್ಫೋಟದ ಕುರಿತು ಆಗಸ್ಟ್‌ನಲ್ಲೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

Popular Posts

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

You Might Also Like

ಪ್ರಮುಖ

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?