newsics.com
ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಮೇಘಾ ಶೆಣೈ ಇದೀಗ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ತಮ್ಮ ಬಹುಕಾಲದ ಗೆಳೆಯ ಭರತ್ ಸಿಂಗ್ ಜೊತೆ ಮೇಘಾ ಶೆಣೈ ವಿವಾಹವು ನವಂಬರ್ 10ರಂದು ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ. ನಟಿ Just married, deeply blessed ಎಂದು ಕ್ಯಾಪ್ಶನ್ ಕೊಟ್ಟು ತಮ್ಮ ಮದುವೆ ವಿಡಿಯೋವನ್ನು ಶೇರ್ ಮಾಡಿದ್ದಾರೆ. ನಟಿಗೆ ಅಭಿಮಾನಿಗಳು ಮದುವೆಯ ಶುಭಾಶಯ ತಿಳಿಸಿದ್ದಾರೆ
ಮೇಘಾ ಶೆಣೈ ಮಂಗಳೂರಿನವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಮೇಘಾ, ಆಗಸ್ಟ್ 21 ರಂದು ತಮ್ಮ ಗೆಳೆಯ ಭರತ್ ಸಿಂಗ್ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಭರತ್ ಸಿಂಗ್ ಉತ್ತರ ಭಾರತದ ಮೂಲದವರಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದಾರೆ ಎನ್ನಲಾಗುತ್ತಿದೆ.