Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಂಟೆಗೆ 200 ಕಾಯಿ ಸುಲಿಯುವ ಮೂಲಕ ಬದುಕು ಕಟ್ಟಿಕೊಂಡ ಹೆಣ್ಮಗಳು!
ಕರ್ನಾಟಕಪ್ರಮುಖ

ಗಂಟೆಗೆ 200 ಕಾಯಿ ಸುಲಿಯುವ ಮೂಲಕ ಬದುಕು ಕಟ್ಟಿಕೊಂಡ ಹೆಣ್ಮಗಳು!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕಾಸರಗೋಡು: ಯುವತಿಯೊರ್ವಳು ಪ್ರತಿ ದಿನವೂ ಸ್ಕೂಟರ್‌ನಲ್ಲಿ ತನ್ನ ಕಾರ್ಯಕ್ಷೇತ್ರಕ್ಕೆ ಹೋಗಿ ಕೆಲಸಮಾಡುತ್ತಾ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ.
ಅಜ್ಜಕ್ಕಳಮೂಲೆಯ ಹರಿಣಾಕ್ಷಿ ಎಂಬುವರು ಬೆಳಗ್ಗೆ ಎಂಟು ಗಂಟೆಗೆ ಸ್ಕೂಟರ್‌ ನಲ್ಲಿ ಹೋಗಿ ತೆಂಗಿನ ಕಾಯಿ ಸುಲಿಯುವ ಕೆಲಸ ಆರಂಭಿಸಿದರೆ ಅಪರಾಹ್ನ 2 ಗಂಟೆವರೆಗೆ ದುಡಿಯುತ್ತಾರೆ. 6 ಗಂಟೆ ಯಲ್ಲಿ 1,200 ರೂ. ಸಂಪಾದಿಸಿ ಮನೆಗೆ ಮರಳುತ್ತಾರೆ!
ಅವರ ಮನೆಯಲ್ಲಿ ದನಗಳಿವೆ. ಸಾಯಂಕಾಲ ಹಾಲು ಕರೆದು ಡೈರಿಗೆ 12 ಲೀಟರ್‌ ಹಾಲು ಹಾಕಿ ಮರಳಿ ಬರುವಾಗ ಇಬ್ಬರು ಮಕ್ಕಳನ್ನು ಸ್ಕೂಟರ್‌ನಲ್ಲೇ ಕರೆತರುತ್ತಾರೆ. ಅವರೀಗ ಎಷ್ಟು ಬ್ಯುಸಿ ಎಂದರೆ ತಮ್ಮ ಕಷ್ಟದ ಬದುಕಿನ ಬಗ್ಗೆ ಯೋಚಿಸುತ್ತಾ ಕೂರುವುದಕ್ಕೂ ಸಮಯವಿಲ್ಲ. 9ನೇ ತರಗತಿಯಲ್ಲಿ ಕಲಿಯುತ್ತಿರುವ ಮಗಳು, ಆರನೇ ಕ್ಲಾಸಿನ ಮಗನನ್ನು ಚೆನ್ನಾಗಿ ನೋಡಿಕೊಳ್ಳುವುದು ಅವರ ಗುರಿ.

ಹರಿಣಾಕ್ಷಿ ಅವರ ಮೂಲ ಊರು ಮಡಿಕೇರಿ ತಾಲೂಕಿನ ಮರಗೋಡು ಗ್ರಾಮ. ಎಸೆಸೆಲ್ಸಿ ಪಾಸ್‌ ಬಳಿಕ ಆಯುರ್ವೇದ ಥೆರಪಿ ಕೋರ್ಸ್‌ ಪೂರ್ಣಗೊಳಿಸಿದ ಬಳಿಕ ಮದುವೆಯಾಗುತ್ತಾರೆ. ಗಂಡ – ಹೆಂಡತಿ ಇಬ್ಬರಿಗೂ ಆಯುರ್ವೇದ ಥೆರಪಿಸ್ಟ್‌ ಆಗಿ ಬೆಂಗಳೂರಿನಲ್ಲಿ ಕೆಲಸ ಸಿಗುತ್ತದೆ.
2ನೇ ಮಗುವಿಗೆ ಜನ್ಮ ನೀಡಿದ ಕೆಲವೇ ದಿನದಲ್ಲಿ ಪತಿ ಯಾವುದೋ ಕಾರಣಕ್ಕೆ ಕುಟುಂಬವನ್ನು ಬಿಟ್ಟು ದೂರವಾಗಿದ್ದಾರೆ. ಆರಂಭದಲ್ಲಿ ಕೆಲಸದ ನೆಪದಲ್ಲಿ ವಾರಕ್ಕೊಮ್ಮೆ, ಬಳಿಕ ತಿಂಗಳಿಗೊಮ್ಮೆ ಬರುತ್ತಿದ್ದವರು ಬಳಿಕ ಶಾಶ್ವತವಾಗಿ ದೂರವಾದರು.
ಇದರ ನಡುವೆ ಹರಿಣಾಕ್ಷಿ ಅವರು ಕಾಸರಗೋಡಿನ ಎಣ್ಮಕಜೆಯ ಅಜಕ್ಕಳಮೂಲೆಯಲ್ಲಿ ತನ್ನ ಗೆಳತಿಯ ಮೂಲಕ 16 ಸೆಂಟ್ಸ್‌ ಜಾಗ ಖರೀದಿಸಿದ್ದರು. ಅಲ್ಲಿ 25 ಅಡಿಕೆ ಗಿಡ ನೆಟ್ಟಿದ್ದರು. ಆದರೆ ಬದುಕಿಗೆ ಅದರ ಆದಾಯ ಸಾಕಾಗುತ್ತಿರಲಿಲ್ಲ.
“ಬದುಕಲು ದುಡಿಯಲೇ ಬೇಕಿತ್ತು. ಆರಂಭದಲ್ಲಿ ಹತ್ತಿರದ ಮನೆಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ. ಇಡೀ ದಿನ ದುಡಿದರೆ ಸಿಗುವ 250 ರೂ ಕೂಲಿ. ಎಲ್ಲಿಗೂ ಸಾಲುತ್ತಿರಲಿಲ್ಲ. ತೋಟದ ಕೆಲಸ ಸಂದರ್ಭ ತೆಂಗಿನಕಾಯಿ, ಅಡಿಕೆ ಸುಲಿ ಯುವ ಕೆಲಸ ಕೂಡ ಮಾಡುತ್ತಿದ್ದೆ. ಒಂದು ತೆಂಗಿನ ಕಾಯಿ ಸುಲಿದರೆ 1 ರೂ ಸಿಗುತ್ತದೆ ಎಂದು ತಿಳಿಯಿತು.
ಅಷ್ಟು ಹೊತ್ತಿಗೆ ಗಂಟೆಗೆ 100 ಕಾಯಿ ಸುಲಿಯುವ ಪರಿಣತಿ ಪಡೆದಿದ್ದೆ. ಐದು ಗಂಟೆ ಇದೇ ಕೆಲಸ ಮಾಡಿದರೆ ದಿನದಲ್ಲಿ 500 ರೂ. ಗಳಿಸಬಹುದು ಎಂದು ಸರಳ ಲೆಕ್ಕಾಚಾರ ಹಾಕಿದೆ. ಈಗ ಗಂಟೆಗೆ 200 ಕಾಯಿ ಸುಲಿಯುವ ಸಾಮರ್ಥ್ಯ ಪಡೆದಿದ್ದೇನೆ’ ಎಂದು ಹರಿಣಾಕ್ಷಿ ಹೇಳಿದ್ದಾರೆ. ತನ್ನ ದ್ವಿಚಕ್ರ ವಾಹನದಲ್ಲಿ ಸುಮಾರು 18 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಆಕೆ ತೆಂಗಿನ ಕಾಯಿ ಸುಲಿಯುತ್ತಾರೆ.

ಹರಿಣಾಕ್ಷಿ ಅವರ ಹೋರಾಟದ ಬದುಕು ನೋಡಿದ ಅದೆಷ್ಟೋ ಮಹಿಳೆಯರು ಈಗ ತಾವೂ ಈ ಉದ್ಯೋಗಕ್ಕೆ ಮುಂದಾಗುತ್ತಿದ್ದಾರೆ. ಕೆಲಸಕ್ಕೆ ಸಿದ್ಧವಿರುವ ಹಲವರಲ್ಲಿ ವಾಹನ ಇರುವುದಿಲ್ಲ ಸ್ವಂತ ವಾಹನ ಇರುವುದು ಸಹಕಾರಿಯಾಗಿದೆ ಎನ್ನುತ್ತಾರೆ ಹರಿಣಾಕ್ಷಿ.

14ರ ಬಾಲಕನಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ 54ರ ಆಂಟಿ: ಜೈಲು ಶಿಕ್ಷೆ ನೀಡಿದ ಕೋರ್ಟ್

TAGGED:Women who make a living by peeling 200 nuts per hour!
Share This Article
Facebook Twitter Copy Link Print
Previous Article 14ರ ಬಾಲಕನಿಗೆ ರೊಮ್ಯಾನ್ಸ್ ಮಾಡುವಂತೆ ಒತ್ತಾಯಿಸಿದ 54ರ ಆಂಟಿ: ಜೈಲು ಶಿಕ್ಷೆ ನೀಡಿದ ಕೋರ್ಟ್
Next Article ನೀವು ಲಾಡ್ಜ್‌ಗಳಲ್ಲಿ ಮಲಗೋ ಮುನ್ನ ಬೆಡ್‌ ಕೆಳಗೆ ಬಾಟಲಿ ಬಿಸಾಡಿ!

Popular Posts

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read

ಭೀಕರ ರಸ್ತೆ ಅಪಘಾತ: ಚಾಲಕರಿಬ್ಬರು ಸೇರಿ ಮೂವರ ಸಾವು

1 Min Read

ಇನ್ಮುಂದೆ ವೈದ್ಯರ ಚೀಟಿ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಯಾವುದೇ `ಸಿರಪ್’ ನೀಡುವಂತಿಲ್ಲ ಎಂದ ಕೇಂದ್ರ ಸರ್ಕಾರ

1 Min Read

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read

You Might Also Like

ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read
ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read
ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?