Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು, ಬಹಳ ಹಿಂದೆಯೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ
ಇದೀಗ ಟಾಕ್ಸಿಕ್ ನ ಚಿತ್ರದ ಬಗ್ಗೆ ನಟಿ ಬಾರಿಗೆ ಸಿನಿಮಾ ಬಗ್ಗೆ ಬಾಯ್ಬಿಟ್ಟಿದ್ದಾರೆ. ಟಾಕ್ಸಿಕ್‌ನಂಥಾ ಇನ್ನೊಂದು ಸಿನಿಮಾ ಕನ್ನಡದಲ್ಲಾಗಲಿ, ಭಾರತೀಯ ಭಾಷೆಗಳಲ್ಲಾಗಲೀ ಈವರೆಗೆ ಬಂದಿಲ್ಲ. ಹಸಿಹಸಿ ಅಂಶಗಳಿರುವ, ಅನೇಕ ಲೇಯರ್‌ಗಳಿರುವ, ಪ್ರತಿಯೊಂದು ಸಂಗತಿಯೂ ಪರಸ್ಪರ ಕನೆಕ್ಟ್ ಆಗುವ ಚಿತ್ರವಿದು ಎಂದು ರುಕ್ಮಿಣಿ ವಸಂತ್ ಹೇಳಿದ್ದಾರೆ.
ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಸೂಕ್ಷ್ಮತೆಯನ್ನು ಹೊಗಳಿದ್ದಾರೆ.ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ವಿಷನ್ ದಿಟ್ಟವಾದುದು. ಅವರು ಬೋಲ್ಡ್ ಅಂಶಗಳನ್ನೂ ಮಾನವೀಯ ನೆಲೆಯಲ್ಲಿ ನಿರೂಪಿಸಿರುವುದು ವಿಶೇಷವೆನಿಸುತ್ತದೆ ಎಂದೂ ಹೇಳಿದ್ದಾರೆ.
ಸಿನಿಮಾ ಮೇಕಿಂಗ್ ವೇಳೆ ಎಲ್ಲವನ್ನೂ ಏಕಕಾಲಕ್ಕೆ ಗ್ರಹಿಸುವ ಯಶ್ ಅವರ ದೃಷ್ಟಿಕೋನ ನನಗೆ ಅಚ್ಚರಿ ತರಿಸಿತು. ಅವರದು ಸಿನಿಮಾವನ್ನೂ ಮೀರಿದ ಅಗಾಧ ಗ್ರಹಿಕೆ. ಅದೊಂಥರ ಸಾಂಸ್ಕೃತಿಕ ಯುಗಧರ್ಮದಂತಿರುತ್ತದೆ ಎಂದು ಹೇಳಿದ್ದಾರೆ.