Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Lose Weight: ಹಸಿವಿನಿಂದ ಬಳಲದೆ ತೂಕ ಇಳಿಕೆಗೆ 7 ಆರೋಗ್ಯಕರ ಆಹಾರ ಪದ್ಧತಿಗಳು
ಆರೋಗ್ಯ

Lose Weight: ಹಸಿವಿನಿಂದ ಬಳಲದೆ ತೂಕ ಇಳಿಕೆಗೆ 7 ಆರೋಗ್ಯಕರ ಆಹಾರ ಪದ್ಧತಿಗಳು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com.

ತೂಕ ನಷ್ಟಕ್ಕೆ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು, ತೃಪ್ತಿ ನೀಡುವ, ಆರೋಗ್ಯಕರ ಮತ್ತು ಪರಿಣಾಮಕಾರಿಯಾದ ಆಹಾರಗಳನ್ನು ಆಯ್ಕೆ ಮಾಡುವುದು ಅಗತ್ಯ.
ತೂಕ ಇಳಿಕೆಗೆ 7 ಆರೋಗ್ಯಕರ ಆಹಾರ ಪದ್ಧತಿಗಳು
1. ಕಡಿಮೆ ತಿನ್ನುವುದರ ಬದಲು ಹೆಚ್ಚು ತಿನ್ನಿ:
ನಾರು ಹೆಚ್ಚಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಸಲಾಡ್‌ಗಳು, ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಕಾಳುಗಳಂತಹ ನಾರಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆ ಹೆಚ್ಚು ಕಾಲ ತುಂಬಿರುವಂತೆ ಭಾಸವಾಗುತ್ತದೆ. ಇದರಿಂದಾಗಿ ಊಟದ ನಡುವೆ ಆಗಾಗ್ಗೆ ತಿಂಡಿ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ.
2. ಪ್ರೋಟೀನ್‌ಯುಕ್ತ ಆಹಾರಕ್ಕೆ ಆದ್ಯತೆ ನೀಡಿ:
ಸ್ನಾಯುಗಳ ದುರಸ್ತಿ, ರೋಗನಿರೋಧಕ ಶಕ್ತಿ ಮತ್ತು ದೇಹದ ಕಾರ್ಯನಿರ್ವಹಣೆಗೆ ಪ್ರೋಟೀನ್ ಅತ್ಯಗತ್ಯ. ನಾವು ಸೇವಿಸುವ ಆಹಾರದಲ್ಲಿ ಮೊಟ್ಟೆ, ಕೊಬ್ಬು ರಹಿತ ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ಸೇರಿಸಬೇಕು. ಇದು ನಮ್ಮ ದೇಹಕ್ಕೆ ಪ್ರೋಟೀನ್ ಅಂಶ ಒದಗಿಸಿ ಅರೋಗ್ಯವಂತರಾಗಿರಲು ಹಾಗೂ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
3. ಸಾಕಷ್ಟು ನೀರು ಕುಡಿಯಿರಿ:
ಸಾಕಷ್ಟು ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಭಾವನೆ ಬರುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಸಹಜವಾಗಿ ಹಸಿವಿನ ಸಂಕಟ ಕಡಿಮೆ ಮಾಡುತ್ತದೆ.
4. ಹೆಚ್ಚು ನಡೆಯಬೇಕು:
ನಡೆಯುವುದು, ನೃತ್ಯ ಮಾಡುವುದು ಅಥವಾ ದೇಹವನ್ನು ಸ್ಟ್ರೆಚ್ ಮಾಡುವುದು ಮುಂತಾದ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಈ ಚಟುವಟಿಕೆಗಳು ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯದೆ ಕ್ಯಾಲೊರಿ ಕರಗಿಸಲು ಸಹಾಯ ಮಾಡುತ್ತವೆ.
5. ಸಕ್ಕರೆ ಸೇವನೆ ಕಡಿಮೆ ಮಾಡಿ:
ಸಕ್ಕರೆ ರಹಿತ ಪಾನೀಯಗಳು, ಸಂಸ್ಕರಿಸಿದ ಆಹಾರಗಳು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಸಂಸ್ಕರಿಸಿದ ಆಹಾರಗಳಲ್ಲಿ ಸಾಮಾನ್ಯವಾಗಿ ಅನಾರೋಗ್ಯಕರ ಕೊಬ್ಬುಗಳು ಹೆಚ್ಚಿರುತ್ತವೆ. ಪ್ಯಾಕೇಜ್ ಮಾಡಿದ ಆಹಾರಗಳಲ್ಲಿರುವ ಸಕ್ಕರೆ ಅಂಶ (ಆಹಾರದಲ್ಲಿ ಸಕ್ಕರೆ ಅಂಶ) ಸೇವನೆ ಕಡಿಮೆ ಮಾಡಿ. ಅದರ ಬದಲಾಗಿ, ಜೇನುತುಪ್ಪ ಅಥವಾ ಬೆಲ್ಲದಂತಹ ನೈಸರ್ಗಿಕ ಸಿಹಿಗಳನ್ನು ಮಿತವಾಗಿ ಬಳಸಿಕೊಳ್ಳಬಹುದು.
6. ಒತ್ತಡ ನಿರ್ವಹಣೆ ಮತ್ತು ನಿದ್ರೆಗೆ ಆದ್ಯತೆ ನೀಡಿ:
ನಿದ್ರೆಯ ಕೊರತೆ ಮತ್ತು ಸರಿಯಾದ ಒತ್ತಡ ನಿರ್ವಹಣೆ ಇಲ್ಲದಿರುವುದು ಹಾರ್ಮೋನುಗಳ ಅಸಮತೋಲನ ಮತ್ತು ಸ್ಥೂಲಕಾಯತೆಗೆ ಕಾರಣವಾಗಬಹುದು. ಪ್ರತಿದಿನ -8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಧ್ಯಾನ ಮತ್ತು ಪ್ರಾಣಾಯಾಮದಂತಹ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಕೂಡಾ ಉತ್ತಮ ಅಭ್ಯಾಸ.
7. ಸಾವಧಾನವಾಗಿ ಊಟ ಮಾಡಿ:
ದೇಹದಲ್ಲಿ ಆಗುತ್ತಿರುವ ಸಂಕೇತಗಳಿಗೆ (ವ್ಯತ್ಯಾಸ) ಗಮನ ಕೊಡಿ. ಹಸಿವಾದಾಗ ಮಾತ್ರ ತಿನ್ನಿ ಮತ್ತು ಹೊಟ್ಟೆ ತುಂಬಿದಾಗ ತಿನ್ನುವುದನ್ನು ನಿಲ್ಲಿಸಿ. ಹಾಗೆಯೇ, ಭಾವನಾತ್ಮಕವಾಗಿ ತಿನ್ನುವುದನ್ನು ತಪ್ಪಿಸಿ. ತೂಕ ಇಳಿಕೆಯಲ್ಲಿ ಸಮತೋಲನ ಬಹಳ ಮುಖ್ಯ. ಯಾವುದೇ ಕಟ್ಟುನಿಟ್ಟಿನ ನಿರ್ಬಂಧಗಳಿಲ್ಲದೆ, ಸರಿಯಾದ ಅಭ್ಯಾಸಗಳೊಂದಿಗೆ ತೂಕ ಕಡಿಮೆ ಮಾಡಬಹುದು.
ಸರಿಯಾದ ಜೀವನಶೈಲಿಯ ಮೂಲಕ ತೂಕ ಇಳಿಸಿಕೊಳ್ಳುವುದು ಆರೋಗ್ಯಕ್ಕೂ ಪ್ರಯೋಜನಕಾರಿ. ತಜ್ಞರ ಸಲಹೆ ಪಡೆಯುವ ಮೂಲಕ ನಮ್ಮ ಆರೋಗ್ಯ ಸ್ಥಿತಿಗೆ ಸರಿಹೊಂದುವ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮ.

ಹೊಸ ವಾಹನಗಳ ಚಕ್ರದಡಿ ‘ನಿಂಬೆಹಣ್ಣು’ ಇಡುವುದೇಕೆ?; ಕಾರಣವೇನು?

TAGGED:Lose Weight: 7 Natural Ways to Lose Weight Without Starving
Share This Article
Facebook Twitter Copy Link Print
Previous Article ಹಸಿವಿನಿಂದ ಬಳಲದೆ ತೂಕ ಇಳಿಕೆಗೆ ಈ 7 ಆರೋಗ್ಯಕರ ಆಹಾರ ಪದ್ಧತಿಗಳು ಸೂಕ್ತ
Next Article Relationship ಸಂಗಾತಿಯನ್ನು ತಬ್ಬಿ‌ ಮಲಗಿದರೆ ಹತ್ತಾರು ಪ್ರಯೋಜನ…!

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?