Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ಬಾಸ್ ಮನೆಯಿಂದ ಮಲ್ಲಮ್ಮ ಅವರು ಹೊರ ಬಂದಿದ್ದಾರೆ. .ಮಲ್ಲಮ್ಮ ಮನೆಯ ಹಿರಿಯ ಸದಸ್ಯೆ ಆಗಿದ್ದರು. ಬಹುಷಃ ಕನ್ನಡ ಬಿಗ್ಬಾಸ್ ಇತಿಹಾಸದಲ್ಲೇ ಹಿರಿಯ ಸ್ಪರ್ಧಿ ಆಗಿದ್ದರು ಮಲ್ಲಮ್ಮ. ವಯಸ್ಸು ಮರೆತು ಎಲ್ಲರೊಟ್ಟಿಗೆ ಬೆರೆತು ಚೆನ್ನಾಗಿಯೇ ಆಡುತ್ತಿದ್ದರು. ಈಗ ಅನಿವಾರ್ಯವಾಗಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಸ್ವತಃ ಬಿಗ್ಬಾಸ್, ಮಲ್ಲಮ್ಮನನ್ನು ವಿಶೇಷವಾಗಿ ಬೀಳ್ಕೊಟ್ಟರು.
ದೊಡ್ಮನೆಯಿಂದ ಮಲ್ಲಮ್ಮ ಹೋಗಿದ್ದಾರೆ. ತಮ್ಮದೇ ದಾಟಿಯಲ್ಲಿಯೇ ಮಲ್ಲಮ್ಮ ಆಡಿದ್ದಾರೆ. ಆದರೆ, ಕೆಲವು ವಿಚಾರಗಳು ಇವರಿಗೆ ಇನ್ನೂ ತಿಳಿದಿಲ್ಲ. ಆದರೆ, ಜನರ ವೋಟ್ ಆಧಾರದ ಮೇಲೇನೆ ಮಲ್ಲಮ್ಮ ಮನೆಗೆ ಹೋಗಿದ್ದಾರೆ ಅನ್ನೋದು ಅಷ್ಟೆ ಸತ್ಯವಾದ ಮಾತು. ಅದನ್ನ ಸುದೀಪ್ ಇಲ್ಲಿ ಒತ್ತಿ ಹೇಳಿದ್ದಾರೆ.
ಮಲ್ಲಮ್ಮ ಎಲಿಮಿನೇಟ್ ಆಗಿರೋದಕ್ಕೆ ಧ್ರುವಂತ್ ಕಣ್ಣೀರು ಹಾಕಿದ್ದಾರೆ. ಧ್ರುವಂತ್ ಮತ್ತು ಮಲ್ಲಮ್ಮ ತುಂಬಾನೆ ಅಟ್ಯಾಚ್ ಆಗಿದ್ದರು. ಮಲ್ಲಮ್ಮನಿಗೆ ಧ್ರುವಂತ್ ಸಲಹೆ-ಸೂಚನೆ ಕೊಡ್ತಾನೇ ಇದ್ದರು.
ಆದರೆ, ಜನರು ಕೊಟ್ಟ ಪ್ರೀತಿ ಮತ್ತು ಅವರು ಕೊಟ್ಟಿರೋ ವೋಟ್‌ನಿಂದಲೇ ಮಾಳು ನಿಪ್ಪನಾಳ್ ಸೇವ್ ಆಗಿದ್ದಾರೆ. ಮಲ್ಲಮ್ಮ ಮನೆಯಿಂದ ಹೊರಗೆ ಹೋಗಿದ್ದಾರೆ.
ಆದರೆ ಬಿಗ್ಬಾಸ್, ಮಲ್ಲಮ್ಮನಿಗೆ ವಿಶೇಷ ಬೀಳ್ಕೊಡುಗೆಯನ್ನು ನೀಡಿದರು. ಅವರಿಗಾಗಿ ಲೈಟುಗಳ ಒಂದು ವಿಶೇಷ ಚಪ್ಪರ ಆಯೋಜಿಸಿ ಅದರ ಕೆಳಗೆ ಅವರನ್ನು ನಿಲ್ಲಿಸಿ ಮಾತನಾಡಿದ ಬಿಗ್ಬಾಸ್, ಬಿಗ್ಬಾಸ್ ಮನೆಗೆ ನೂರಾರು ಮಂದಿ ಸ್ಪರ್ಧಿಗಳು ಬಂದಿದ್ದಾರೆ ಆದರೆ ಅವರೆಲ್ಲರಿಗಿಂತಲೂ ನೀವು ಭಿನ್ನ. ಬಿಗ್ಬಾಸ್ ಮನೆಗೆ ಬರಲು ಆರ್ಥಿಕ, ಸಾಮಾಜಿಕ ಹಿನ್ನೆಲೆಯ ಅಗತ್ಯ ಇಲ್ಲ ವ್ಯಕ್ತಿತ್ವ ಇದ್ದರೆ ಸಾಕೆಂದು ತೋರಿಸಿದ್ದೀರಿ ಮಾತ್ರವಲ್ಲ ವಯಸ್ಸು ಸಹ ಅಡ್ಡಿಯಲ್ಲ ಎಂಬುದನ್ನು ತೋರಿಸಿದ್ದೀರಿ. ನೀವು ಪ್ರಜ್ಞಾವಂತ ಸ್ಪರ್ಧಿ ಆಗಿದ್ದೀರಿ, ನೀವು ಬಿಗ್ಬಾಸ್ ಮನೆಯ ಹೆಮ್ಮೆಯ ಸ್ಪರ್ಧಿ, ಈ ಮನೆ ಸದಾ ನಿಮ್ಮದೇ, ಬಿಗ್ಬಾಸ್ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ನಿಮ್ಮ ಹೊರಗಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿ ಬೀಳ್ಕೊಟ್ಟರು.
https://www.newsics.com/2025/11/03/staff-cut-off-students-earrings-and-nose-rings-during-k-set-exam/